3000+ Kannada Gadegalu Worth Reading.
This is a list of popular Kannada proverbs. Proverbs are also known as sayings in a common language. In which Proverbs or janapada gadegalu give some sort of life advice to the people Every language culture have them, and many proverbs exist in more than one language like in kannada we have janapada gadegalu .Which is most important not to miss any of the words in most proverbs or kannada gadegalu because the meaning of the word or proverbs can be lost if even one word is changed or left out. This list of kannada proverbs,kannada gadegalu,janapada gadegaluincludes quick overview of gadegalu and examples, and is meant to improve kannada language.
Kannada Quotes
In Kannada Gadegalu here are some different proverbs which used to compare two or more things.
These are the most common kannada janapada gadegalu which are used to curse someone or something.
Most common kannada gadegalu which are related to agriculture are mentioned bellow these gadegalu are made by people like farmers which they have experienced in day-to-day life.
Family matters the most every time for which the janapads or ancestors made some beautiful Kannada gadegalu which are meaningful as well.
Here are the some beautiful Kannada gadegalu on worship, worship is feeling or expression of deep respect and adoration for a deity.
Relationships are something which we are bound to keep up till last breath to explain about the importance of relationship our elders gave us these gadegalu.
the bellow are some proverbs which describes the relationship between husband and wife
bellow are the some heart touching proverbs related to mother :
Bellow you can find proverbs or gadegalu related to business.
Animals are the companions to humans in this planet earth here are some of the Kannada gadegalu on animals.
hello,here are some Gadegale which are related to females you can also read it in English by clicking here :
Comparison Proverbs in Kannada:
In Kannada Gadegalu here are some different proverbs which used to compare two or more things.
- ಬೆಟ್ಟಕ್ಕೆ ಕಲ್ಲು ಹೊತ್ತ ಹಾಗೆ.
- ವೇದ ಸುಳ್ಳಾದರು ಗಾದೆ ಸುಳ್ಳಾಗದು.
- ಮಾತು ಆಡಿದರೆ ಹೋಯ್ತು,ಮುತ್ತು ಒಡೆದರೆ ಹೋಯ್ತು.
- ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು.
- ಮಾಡಿದ್ದುಣ್ಣೋ ಮಹಾರಾಯ.
- ದೂರದ ಬೆಟ್ಟ ನುಣ್ಣಗೆ.
- ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ.
- ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.
- ಜಟ್ಟಿ ಅಡಿಗೆ ಬಿದ್ದರೂ ಮೂಗು ಮೇಲಿದೆ ಅಂದ.
Cursing someone or something Kannada Gadegalu:
These are the most common kannada janapada gadegalu which are used to curse someone or something.
- ನೀನು ಹೋದ ದಾರಿಲಿ ಹಿ೦ದಕ್ಕ ಬರದೆ ಹೊಗ
- ನಿನ್ನ ಮಾರಿ(=ಮೋರೆ, ಮುಖ) ಮಣ್ಣಾಗೆ ಅಡಗಲಿ
- ಪಾಪಿಯ(ನ್ನು) ಪಾಪಿ ತಿಂದೋಗಲಿ
- ನಿನ್ನ ಬಾಯಾಗೆ ಹುಳ ಬೀಳ(ಲಿ)
- ನಿನ್ನ ಹೆಣ ಎತ್ತ(ಲಿ)
- ನೀ ಡಬ್ಬಿದ್ದು ಸಾಯಿ(ನೀನು ಡಬ್ಬ ಬಿದ್ದು ಸಾಯಿ, ನೀ ಮಕಾಡೆ ಬಿದ್ದು ಸಾಯಿ)
- ನಿನ್ನ ಬಾಯಾಗೆ ಮಣ್ಣು ಹಾಕ(ಲಿ)
- ನೀ ನೆಗೆದು ಬಿದ್ದು ನಲ್ಲಿಕಾಯಾಗ
- ನಿನ್ನ ಮನೆ ಎಕ್ಕುಟ್ಟಿ ಹೋಗ(ಲಿ) ( ನಿನ್ನ ಮನೆಯಲ್ಲಿ ಎಕ್ಕದ ಗಿಡ ಹುಟ್ಟಿ ಮನೆ ಹಾಳಾಗಿ ಹೋಗಲಿ)
- ನಿನ್ನ ನಾಲಗೆ ಸೇದು ಹೋಗ(ಲಿ)
Kannada proverb relating to agriculture:
Most common kannada gadegalu which are related to agriculture are mentioned bellow these gadegalu are made by people like farmers which they have experienced in day-to-day life.
- ಅಡವಿಯ ದೊಣ್ಣೆ ಪರದೇಸಿಯ ತಲೆ
- ಅಳಿವುದೇ ಕಾಯ ಉಳಿವುದೇ ಕೀರ್ತಿ
- ಅಂದು ಬಾ ಅಂದ್ರೆ ಮಿಂದು ಬಂದ
- ಅಂಗೈ ಹುಣ್ಣಿಗೆ ಕನ್ನಡಿ ಯಾಕೆ
- ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
- ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
- ಬೇಲೀನೇ ಎದ್ದು ಹೊಲ ಮೇಯ್ದಂತೆ
- ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು
- ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
- ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
- ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ
- ಹೊಳೆಗೆ ಸುರಿದರೂ ಅಳೆದು ಸುರಿ
- ಹುಣ್ಣಿಮೆ ಬರುವತನಕ ಅಮಾಸೆ ನಿಲ್ಲದು, ಅಮಾಸೆ ಬರುವತನಕ ಹುಣ್ಣಿಮೆ ನಿಲ್ಲದು
- ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ
- ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
7 Most Common Kannada Proverbs About Family:
Family matters the most every time for which the janapads or ancestors made some beautiful Kannada gadegalu which are meaningful as well.
- ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು
- ಆಡೋದು ಮಡಿ ಉಂಬೋದು ಮೈಲಿಗೆ
- ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
- ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
- ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
- ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು
- ತುತ್ತು ತೂಕ ಕೆಡಿಸ್ತು
Worship or divine related Kannada Gadegalu:
Here are the some beautiful Kannada gadegalu on worship, worship is feeling or expression of deep respect and adoration for a deity.
- ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
- ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
- ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
- ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
- ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ
- ಬಿರಿಯ ಉನ್ದ ಬ್ರಹ್ಮನ ಬಿಕ್ಶೆ ಬೆದಿದನನ್ಥೆ
- ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ
- ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ
- ಸುಳ್ಳು ದೇವರಿಗೆ ಕಳ್ಳ ಪೂಜಾರಿ
- ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
- ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ
- ಹೋದ ಬದುಕಿಗೆ ಹನ್ನೆರಡು ದೇವರು
- ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
- ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು
- ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
- ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
- ಸುಳ್ಳು ದೇವರಿಗೆ ಕಳ್ಳ ಪೂಜಾರಿ
- ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
Kannada proverbs on remembering relationships:
Relationships are something which we are bound to keep up till last breath to explain about the importance of relationship our elders gave us these gadegalu.
- ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ
- ಅಕ್ಕ ಬರಬೇಕು ಅಕ್ಕಿ ಮುಗೀಬಾರದು
- ಅಕ್ಕ ನನ್ನವಳಾದ್ರೆ ಬಾವ ನನ್ನವನೇನು
- ಅಕ್ಕ ಸತ್ತರೆ ಅಮಾಸೆ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು
- ಅಕ್ಕನ ಚಿನ್ನವಾದ್ರೂ ಅಕ್ಕಸಾಲಿ ಟೊಣೆಯದೆ(=ಕದಿಯದೆ) ಬಿಡ
- ಅಕ್ಕನ ಹಗೆ ಬಾವನ ನಂಟು
- ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
- ಅಕ್ಕರೆಯಿದ್ದಲ್ಲಿ ದುಃಖವುಂಟು
- ಅಕ್ಕಿ ಅಂದ್ರೆ ಪ್ರಾಣ, ನೆಂಟ್ರು ಅಂದ್ರೆ ಜೀವ
- ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
- ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
- ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
- ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ
- ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿಕೊಣ್ತಾಳೆ
- ಅರಗಿನಂತೆ ತಾಯಿ, ಮರದಂತೆ ಮಕ್ಕಳು
- ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
- ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ
- ಹೆತ್ತವರು ಹೆಸರಿಕ್ಕ ಬೇಕು
- ಅಜ್ಜ! ಮದುವೆ ಅಂದ್ರೆ ನನಗೋ ಅಂದ
- ಅಕ್ಕ ನನ್ನವಳಾದ್ರೆ ಬಾವ ನನ್ನವನೇನು
- ಅಕ್ಕನ ಹಗೆ ಬಾವನ ನೆಂಟು
- ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
- ಅಕ್ಕ ಬರಬೇಕು ಅಕ್ಕಿ ಮುಗೀಬಾರದು
- ತಬ್ಬಲಿ ತಬಕು (ಎಲೆ ಅಡಿಕೆ ತಟ್ಟೆ, ತಂಬಾಕು ತಟ್ಟೆ) ಕದ್ದು ಜಗಲೀಲಿ ಸಿಕ್ಕಿಬಿದ್ದ
- ತಬ್ಬಲಿಯಾದವನು ಬೊಬ್ಬೆ ಹಾಕಿ ಹೆಬ್ಬುಲಿಯ ಓಡಿಸ್ಯಾನೆ?
- ತಮ್ಮ ಒಳ್ಳೆಯವನೇ ಸರಿ ಒಮ್ಮಾನಕ್ಕಿಗೆ ಮಾರ್ಗವಿಲ್ಲ
- ತಮ್ಮ ನಮ್ಮವನಾದರೂ ನಾದಿನಿ ನಮ್ಮವಳಲ್ಲ
- ಅಜ್ಜ! ಮದುವೆ ಅಂದ್ರೆ ನನಗೋ ಅಂದ
- ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
Proverbs for husband and wife:
the bellow are some proverbs which describes the relationship between husband and wife
- ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
- ಒಲ್ಲದ ಗಂಡಂಗೆ ಬೆಣ್ಣೇಲಿ ಕಲ್ಲು
- ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
- ಗಂಡ-ಹೆಂಡಿರ ಜಗಳ ತಿಂದು/ಉಂಡು ಮಲುಗೊವರೆಗೆ
- ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು.
The proverb relates to the mother:
bellow are the some heart touching proverbs related to mother :
- ತಾಯಂತೆ ಕರು ನಾಯಂತೆ ಬಾಲ
- ತಾಯಂತೆ ಮಕ್ಕಳು ನೂಲಂತೆ ಸೀರೆ
- ತಾಯಿದ್ದರೆ ತವರು ಮನೆ ನೀರಿದ್ದರೆ ಕೆರೆ ಬಾವಿ
- ತಾಯಿಲ್ಲದ ತವರು ಕಾಟಕದಿದ್ದ ಅಡವಿ
- ತಾಯಿ ಒಂದಾದರೂ ಬಾಯಿ ಬೇರೆ
- ತಾಯಿ ಕಲಿಸಿದ ಊಟ ತಂದೆ ಕಲಿಸಿದ ಬುದ್ಧಿ
- ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ
- ತಾಯಿಯ ಹತ್ತಿರ ತರ್ಕವಲ್ಲ ಗುರುವಿನ ಹತ್ತಿರ ವಿದ್ಯೆಯಲ್ಲ
- ತಾಯಿ ಕಂಡರೆ ತಲೆ ನೋವು
- ತಾಯಿಗೆ ಕುಲವಿದ್ದರಷ್ಟೇ ಮಗಳಿಗೂ ಕುಲ
- ತಾಯಿಗೆ ಸೇರದ್ದು ನಾಯಿಗೂ ಸೇರದು
- ತಾಯಿ ಬೇಕು ಇಲ್ಲವೆ ಬಾಯಿ ಬೇಕು
- ತಾಯಿ ಮಾರಿಯಾದರೆ ತರಳನು ಎಲ್ಲಿ ಹೋದಾನು
- ತಾಯಿನ್ನ ನೋಡಿ ಮಗಳನ್ನ ತಕ್ಕೋ ಹಾಲನ್ನ ನೋಡಿ ಎಮ್ಮೇನ್ನ ತಕ್ಕೋ
- ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ
- ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
- ತಾಯಿ ಬೇಕು ಇಲ್ಲವೇ ಬಾಯಿ ಬೇಕು
Business or occupation wisdom from proverbs in Kannada:
Bellow you can find proverbs or gadegalu related to business.
- ಹಣ ಎರವಲು ತಂದು ಮಣ ಉರುವಲು ಕೊಂಡ (ಕನ್ನಡ)
- ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ (ಕನ್ನಡ)
- ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ (ಕನ್ನಡ)
- ಹಣ ಇಲ್ಲದವ ಹೆಣಕ್ಕಿಂತ ಕಡೆ (ಕನ್ನಡ)
- ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ?
- ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ (ಕನ್ನಡ)
- ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
- ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
- ಅರಸು ಆದೀಕ (=ಆದಾಯ) ತಿಂದ, ಪರದಾನಿ ಹೂಸು ಕುಡಿದ
- ಅರೆಪಾವಿನವರ ಅಬ್ಬರ ಬಹಳ
- ಅರಿಯದೆ ಮಾಡಿದ ಪಾಪ ಅರಿತಂದು ಪರಿಹಾರ
- ಅರ್ತಿಗೆ (ಪ್ರೀತಿಗೆ) ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
- ಅತಿ ಆಸೆ ಗತಿಗೇಡು
- ಅತಿ ಸ್ನೇಹ ಗತಿ ಕೇಡು
- ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
- ಅವರವರ ತಲೆಗೆ ಅವರವರದೇ ಕೈ
- ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ
- ಆಲಸಿ-ಮುಂಡೇದಕ್ಕೆ ಎರಡು ಖರ್ಚು, ಲೋಭಿ-ಮುಂಡೇದಕ್ಕೆ ಮೂರು ಖರ್ಚು
- ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ.
Animal related proverbs in Kannada:
Animals are the companions to humans in this planet earth here are some of the Kannada gadegalu on animals.
- ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ
- ಅರಸನ ಕುದರೆ ಲಾಯದಲ್ಲೆ ಮುಪ್ಪಾಯಿತು
- ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ
- ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
- ಆನೆಯಂಥದೂ ಮುಗ್ಗರಿಸ್ತದೆ
- ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
- ಬೆಳ್ಳಗಿರುವದೆಲ್ಲ ಹಾಲಲ್ಲ
- ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ
- ಆಕಳು ಕಪ್ಪಾದ್ರೆ ಹಾಲು ಕಪ್ಪೇನು
- ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
- ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ
- ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ
- ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು
- ನಾಯಿನ ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದ ಹಾಗಾಯ್ತು
- ಹುತ್ತ ಬಡಿದರೆ ಹಾವು ಸಾಯುವುದೇ
- ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
- ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
- ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ
- ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ
- ಆನೆಗೂ ಅಡಿ ತಪ್ಪೀತು
- ಆನೆಯ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ
- ಆನೆ ಬರುವುದಕ್ಕು ಮುನ್ನ ಗಂಟೆ ಸದ್ದು
- ಆನೆ ಹೋದದ್ದು ದಾರಿ ಹಾವು ಹರಿದದ್ದು ಅಡ್ಡದಾರಿ
- ಬಿಳಿ ಆನೆ ಸಾಕಿದ ಹಾಗೆ
- ಇಲಿಯಾಗಿ ನೂರುದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು
- ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ
- ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡ ಬಾರದು
- ಕಾರ್ಯವಾಸಿ ಕತ್ತೆ ಕಾಲು ಕಟ್ಟು
- ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು
- ನಾಯಿ ಬೊಗಳಿದರೆ ದೇವಲೋಕ ಹಾಳೇನು
- ನಾಯಿ ಬಾಲ ಡೊಂಕು
- ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ
- ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು
- ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
- ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
- ಸಾದೆತ್ತಿಗೆ ಎರಡು ಹೇರು (ಹೊರೆ)
- ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿ ಕೊಂಡಂತೆ.
- ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
- ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
- ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ್ ಕಣ್ಣು ಕುರಿ ಮ್ಯಾಲೆ.
- ಶಿವ ಪೂಜೇಲಿ ಕರಡಿ ಬಿಟ್ಟಂಗೆ
- ಎತ್ತೂ ಕೋಣಕ್ಕೆ ಎರಡು ಕೋಡು, ನಮ್ಮ ಅಯ್ಯಂಗಾರ್ಗೆ ಮೂರು ಕೋಡು
- ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
- ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
- ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದಂಗೆ
- ಗಿಳಿ ಮಾತಾಡಿದಂಗೆ ಮೆಲ್ಲಗೆ ನುಡಿತಾಳೆ
- ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
- ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
- ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದಂಗೆ
- ಗಿಳಿ ಮಾತಾಡಿದಂಗೆ ಮೆಲ್ಲಗೆ ನುಡಿತಾಳೆ
- ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?
- ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
- ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟರು
- ಹಕ್ಕಿ ತೆನೆ ತಿಂದು ಹಿಕ್ಕೆ ಇಕ್ಕಿ ಹೋಯ್ತು
- ಬೇವು ಕಾಗೆಗೆ ಇಂಪು ಮಾವು ಕೋಗಿಲೆಗೆ ಇಂಪು
Proverbs about Village:
- ಹಾಳೂರಿಗೆ ಉಳಿದವನೇ ಗೌಡ
- ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
- ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು
- ಊರಿಗಾಗದ ಗೌಡ, ಮೇಲೆರಗುವ ಗಿಡುಗ
- ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
- ಊರು ದೂರಾಯಿತು ಕಾಡು ಹತ್ತಿರಾಯಿತು
- ಊರೊಗು ಅನ್ತದೆ ಕಾಡು ಬಾ ಅನ್ತದೆ
- ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರ
Vegetable / fruit related proverbs:
- ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
- ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡ
- ಹುಣಸೇ ಮುಪ್ಪಾದ್ರೆ ಹುಳಿಯು ಮುಪ್ಪಾ?
- ತೊಂಡೇಕಾಯಿಯಂತ ತುಟಿ
- ದಾಳಿಂಬೆಯಂತ ಹಲ್ಲು
- ಹಸಿದು ಹಲಸು, ಉಂಡು ಮಾವು
- ಮಾವಿನ ಮರಕ್ಕೂ ಕೋಗಿಲೆಗೂ ನಂಟು
- ಬೇವಿನ ಹಣ್ಣು ಕಾಗೆಗೆ ಇಷ್ಟ
- ಸುಲಿದ ಬಾಳೇ ಹಣ್ಣಿನಂತೆ
- ಬೆಂಡೇಕಾಯಿ ತಿಂದ್ರೆ ಬುದ್ದಿ ಬರ್ತದೆ
- ಮೂಲಂಗಿ ಮೊಳೆರೋಗ ವಾಸಿ ಮಾಡ್ತದೆ
Poverty Sayings Quotes The proverbs for poverty:
- ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
- ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
- ಬಡವನ ಹೆಂಡತಿ ಊರಿಗೆಲ್ಲ ಅತ್ತಿಗೆ
- ಬಯಕೆಗೆ ಬಡವರಿಲ್ಲ
Most Common Proverbs related to food:
- ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
- ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ
- ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
- ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ
- ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೇ
- ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ
- ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
- ಹಬ್ಬ ಹಸನಾಗಲಿ, ಗೋದಿ ಜತನಾಗಲಿ, ಬಂದ ಬೀಗರು ಉಂಡು ಹೋಗಲಿ
- ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು
- ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
- ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
- ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ
- ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
- ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
Feminine proverbs in Kannada:
hello,here are some Gadegale which are related to females you can also read it in English by clicking here :
- ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
- ಹೆಣ್ಣು ಚಂದ ಕಣ್ಣು ಕುಲ್ಡು ಅಂದಂಗೆ
- ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ
- ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ
- ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು
- ಹೆಡ್ಡಾಳಾದ್ರೂ ದೊಡ್ಡಾಳು ಮೇಲು
- ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
- ಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ
- ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
- ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ
- ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
- ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲ
- ಸ್ತ್ರೀ ರೂಪವೇ ರೂಪ, ಶೃಂಗಾರವೇ ರಸ
- ಸಾವಿರ ಕೊಟ್ಟರೂ ಸವತಿ ಮನೆ ಬೇಡ
- ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
- ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
- ಕುಣಿಯಲಾರದವಳು ನೆಲ ಡೊಂಕು ಅಂದಳಂತೆ
- ಇಟ್ಟುಕೊಂಡಾಕಿ ಇರೂತನಕ ಕಟ್ಟಿಕೊಂಡಾಕಿ ಕಡೀತನಕ
- ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ
- ಹೆಣ್ಣು ಹುಟ್ಟಿದರೊಂದು ಹುಣ್ಣು ಹುಟ್ಟಿದ ಹಾಗೆ
- ಹೆಣ್ಣು ಹಡೆದವರ ಮನೆ ನುಣ್ಣಗೆ ಗಂಡು ಹಡೆದವರ ಮನೆ ತಣ್ಣಗೆ
- ಹೆಣ್ಣು ಜನ್ಮಕ್ಕೆ ಹೆಜ್ಜೆಗೊಂದು ಮುಳ್ಳು
- ಹೆಣ್ಣಿನ ಬಾಳು ಕಣ್ಣೀರಿನ ಗೋಳು
- ಹೆಣ್ಣು ಉರಿಸಿದ ಮನೆಯ ಹೆಗ್ಗಂಬ ಉರಿಯಿತು
Wedding / Marriage related proverbs:
- ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು
- ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ
- ತೂತು ಗತ್ತಲೇಲಿ ತಾತನ ಮದುವೆ
- ಮದುವೆ ಮಡಿನೋಡು ಮನೆ ಕಟ್ಟಿ ನೋಡು
- ಮುತ್ತು ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ಕೊಟ್ರಂತೆ.
- ಕಾಲಿಗ್ ಬಿದ್ದು ಕಾಲುಂಗ್ರ ಬಿಚ್ಕೊಂಡ್ರಂತೆ
- ತಾಳಿಗೆ ಬೆಲೆ ಕೊಟ್ಟವಳು ಗಂಡನಿಗೂ ಬೆಲೆ ಕೊಡ್ತಾಳೆ?
- ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ.
- ಕನಸಲ್ಲಿ ತಾಳಿಕಟ್ಟಿ ಬೆಳಗಾದ್ಮೇಲೆ ಹೆಂಡತಿ ಹುಡುಕಿದನಂತೆ.
Caste related Gadegalu :
- ಹಾರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ.
- ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.
- ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
- ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
food related proverbs in kannada :
- ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
- ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
- ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
- ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
- ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ
- ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
- ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು
- ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
- ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು
- ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು
- ಹೊತ್ತು ಉಂಡವನ್ನ ಹೊತ್ತುಕೊಂಡು ಹೋಗಿ
- ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
- ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು
- ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು
- ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
- ಉಂಡ ಮನೆ ಜಂತೆ ಎಣಿಸಬಾರದು
- ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ
- ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ
- ಉಂಬಾಗ ಉಡುವಾಗ ಊರೆಲ್ಲ ನೆಂಟರು
- ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
- ತುತ್ತಿಗೆ ತತ್ವಾರವಾದರೂ ನೆತ್ತಿತುಂಬಾ ನಾಮಕ್ಕೆ ಕಡಿಮೆ ಇಲ್ಲ
- ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
- ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
proverbs on grudges:
- ಹಗೆ ಮಾತು ಆತುಕೊಂಡ, ತುಟಿ ಬಿಚ್ಚದೆ ಕೂತುಕೊಂಡ
- ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
- ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ (ಕನ್ನಡ)
Proverbs That Remind Us To Live Our Lives Today or proverbs on death:
- ಸತ್ತ ಮೇಲಿನ ಸ್ವರ್ಗಕ್ಕಿಂತ ಇದ್ದ ನರಲೋಕ ವಾಸಿ
- ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ
- ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
- ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
- ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
- ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ
- ಮೃತ್ಯು ಬಂದ ಮೇಲೆ ವೈದ್ಯ ಬಂದ.
- ಅಕ್ಕ ಸತ್ತರೆ ಅಮಾಸೆ ನಿಲ್ಲದು,
- ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು
- ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
Birth Proverbs & Sayings :
- ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
- ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
- ಹುಟ್ಟು ಗುಣ ಸುಟ್ಟರೂ ಹೊಗೋದಿಲ್ಲ
Talking Proverbs:
- ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.
- ಮಾತು ಬೆಳ್ಳಿ, ಮೌನ ಬಂಗಾರ.
- ಮಾತು ಮನೆ ಮುರೀತು, ತೂತು ಓಲೆ ಕೆಡಿಸಿತು.
- ಮಾತೇ ಮುತ್ತು; ಮಾತೇ ಮೃತ್ಯು
- ಇದ್ದದ್ದು ಇದ್ದಂತೆ ಹೇಳಿದರೆ ಹದ್ದಿನಂತ ಮೋರೆ ಆಯಿತು
- ಉದ್ದುದ್ದ ಮಾತಿನವರ ಮೊಳಕೈ ಮೊಂಡ.
- ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
- ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
- ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
- ನಿಜ ಆಡಿದರೆ ನಿಷ್ಠೂರ
- ಮುತ್ತು ಒಡೆದರೆ ಹೊಯ್ತು, ಮಾತು ಆಡಿದರೆ ಹೊಯ್ತು
- ಇದ್ದದ್ದು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ನಂತೆ
- ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
- ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
- ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ
- ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
- ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
- ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು.
- ಬೇಸರವಿರಬಾರದು, ಅವಸರ ಮಾಡಬಾರದು. ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
- ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.
- ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
- ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
- ಆಡೋದು ಮಡಿ ಉಂಬೋದು ಮೈಲಿಗೆ
Time Proverbs:
- ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
- ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ
- ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
- ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ)
- ಸಮಯದದ ಮಹತ್ವ
Debt-related proverbs:
- ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ
- ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ
- ಸಾಲಗಾರನ ಮನೆಗೆ ಸವುದೆ ಹೊತ್ತರೆ ಮೇಲಣ ಬಡ್ಡಿಗೆ ಸಮವಾಯಿತು
- ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
- ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
- ಮಾತೇ ಮಾಣಿಕ್ಯ
- ಮೂಗುತಿ ಮುತೈದೆಗೆ ಲಕ್ಷಣ
- ಹೊಳೆಯುವುದೆಲ್ಲಾ ಚಿನ್ನವಲ್ಲ.
- ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
- ಮನೆ ತುಂಬ ಮುತ್ತಿದ್ದರೆ ...ಗೂ ಪೋಣಿಸಿಕೊಂಡರಂತೆ
- ಅಕ್ಕಸಾಲಿ ಕಂಡ್ರೆ ಕಪ್ಪೇನೂ ಮೂಗುತಿ ಬೇಡ್ತಂತೆ.
- ಏಳು ಸುತ್ತು ಓಲೆನ ಏಳೂರಿಂದ ತಂದ್ರಂತೆ
- ಕಂಡೋರ ಒಡ್ವೆ ಇಕ್ಕೊಂಡು ನೀರ್ ಬೆಳ್ಕಲ್ಲಿ ನೋಡ್ಕಂಡಂಗೆ.
- ಓಲೆ ಮಾಡ್ಸೋಕೆ ಸಾಲ ಮಾಡ್ದ, ಸಾಲ ತೀರ್ಸೊಕೆ ಮನೆ ಮಾರ್ದ.
- ಬುಗುಡಿ ಇಕ್ಕಿದೋಳ ಬಡಿವಾರ ನೋಡು.
Gadegalu Throughout history of kannada:
- ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು
- ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
- ಹೂವಿನಿಂದ ನಾರು ಸ್ವರ್ಗ ಸೇರಿತು
- ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
- ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ
- ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ
- ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ
- ಒಂದು ಕಣ್ಣೀಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ
- ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು
- ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು
- ಪಾಪ ಅಂದ್ರೆ ಕರ್ಮ ಬರ್ತದೆ
- ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
- ರಾಜ ಇರೋತನಕ ರಾಣಿ ಭೋಗ
- ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
- ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
- ಸಂದೀಲಿ ಸಮಾರಾಧನೆ ಮಾಡ್ದಂಗೆ
- ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ
- ಸನ್ಯಾಸಿ ಸಾವಾಸ ಮಾಡಿ ಸಂಸಾರಿ ಕೆಟ್ಟ
- ಸಂತೇಲಿ ಮಂತ್ರ ಹೇಳಿದಂಗೆ
- ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
- ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು
- ಸಾದೆತ್ತಿಗೆ ಎರಡು ಹೇರು (ಹೊರೆ)
- ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ
- ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ
- ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
- ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
- ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
- ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
- ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು
- ಸಂಸಾರಿ ಸಹವಾಸದಲ್ಲಿ ಸಂನ್ಯಾಸಿ ಕೆಟ್ಟ.
- ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
- ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು
- ತೇಗಿ ತೇಗಿ ಬೀಗಿ ಬಿದ್ದ
- ತಾಳ ತಪ್ಪಿದ ಬಾಳು, ತಾಳಲಾರದ ಗೋಳು
- ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು
- ತನ್ನೂರಲ್ಲಿ ರಂಗ, ಪರೂರಲ್ಲಿ ಮಂಗ
- ತುಂಬಿದ ಕೊಡ, ತುಳುಕೋದಿಲ್ಲ
- ಉದ್ಯೋಗವೇ ಗಂಡಸಿಗೆ ಲಕ್ಷಣ
- ಹಗಲು ಅರಸನ ಕಾಟ ಇರುಳು ದೆವ್ವದ ಕಾಟ
- ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
- ಹರೆಯಕ್ಕೆ ಬಂದಾಗ ಹಂದಿನೂ ಚಂದ
- ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
- ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
- ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
- ಉತ್ತಮನು ಎತ್ತ ಹೋದರೂ ಶುಭವೇ
- ವಶಗೆಡದೆ ಹಸಗೆಡಲ್ಲ
- ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
- ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
- ಯಾವ ಚಿಂತೇನೂ ಮಾಡದೋನ ಹೆಂಡ್ತಿ ಗಂಡಿದ್ದೂ ಮುಂಡೆ
- ಯೋಗ ಇದ್ದಷ್ಟೇ ಭೋಗ
- ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ
- ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ
- ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
- ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
- ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ
- ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
- ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮುದ್ದೆ ಉಣ್ತಾ ಮಜ್ಜಿಗೆ ಓಡಾಟ
- ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
- ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.
- ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
- ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
- ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
- ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.
- ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ.
- ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
- ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
- ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
- ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
- ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
- ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
- ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
- ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
- ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
- ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
- ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
- ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
- ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ.
- ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
- ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
- ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
- ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
- ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
- ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
- ಹೋಗುವುದು ಮೂಡಿದ ಹೊತ್ತು, ಹೋಗೋದಿಲ್ಲ ಆಡಿದ ಮಾತು.
- ದೈವ ಕಾಡುವು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ.
- ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
- ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
- ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
- ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
- ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
- ಗದ್ದೆ ಸುಟ್ಟರೂ ಹಾಳಾಗದು ಗಾದೆ.
- ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
- ಮಾಟ ಮಾಡಿದೋನ ಮನೆ ಹಾಳು.
- ಒಬ್ಬರ ಕೂಳು ಇನ್ನೊಬ್ಬರ ಕುತ್ತು.
- ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
- ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
- ಬರಿಗೈಯವರ ಬಡಿವಾರ ಬಹಳ.
- ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
- ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
- ಅರೆಗೊಡದ ಅಬ್ಬರವೇ ಬಹಳ.
- ಆಪತ್ತಿಗಾದವನೇ ನಿಜವಾದ ಗೆಳೆಯ.
- ಇಂದಿನ ಸೋಲು ನಾಳಿನ ಗೆಲುವು.
- ಧೈರ್ಯವಿದ್ದವನಿಗೆ ದೈವವೂ ಅನುಕೂಲ.
- ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
- ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
- ಉತ್ತಮವಾದ ನಗು ನೇಸರನ ಮಗು.
- ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
- ಪ್ರಾಮಾಣಿಕತೆಯಿಂದಲೇ ಪಾರಮಾರ್ಥ.
- ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
- ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
- ನೋಡಿ ನಡೆದವರಿಗೆ ಕೇಡಿಲ್ಲ.
- ಚಿಂತೆ ಮಾಡಿದರೆ ಸಂತೆ ಸಾಗೀತೆ?
- ದುಡ್ಡನ್ನು ಕಾದಿಟ್ಟುಕೊಳ್ಳದವನು ಹಣವಂತನು ಹೇಗೆ ಆದಾನು?
- ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
- ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
- ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.
- ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
- ಮಂತ್ರಕ್ಕಿಂತ ಉಗುಳೇ ಹೆಚ್ಚು.
- ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
- ಎಡಗಣ್ಣು ಹೊಡೆದರೆ ನಾರಿಗೆ ಶುಭ.
- ಊಟವೆಂದರೆ ಊರು ಬಿಟ್ಟುಹೋದಂತೆ.
- ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
- ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
- ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
- ಕಣ್ಣಿಗೂ ಮೂಗಿಗೂ ಮೂರು ಗಾವುದ.
- ಕಲಹವೇ ಕೇಡಿಗೆ ಮೂಲ.
- ವೇದ ಸುಳ್ಳಾದರು ಗಾದೆ ಸುಳ್ಳಾಗದು.
- ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
- ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
- ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
- ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
- ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
- ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
- ಮನೆಗೆ ಮಾರಿ, ಊರಿಗೆ ಉಪಕಾರಿ.
- ಆಳಾಗಬಲ್ಲವನು ಅರಸನಾಗಬಲ್ಲ.
- ಊರಿಗೆ ದೊರೆ ಆದರೂ ತಾಯಿಗೆ ಮಗನೆ.
- ಹೆತ್ತವರಿಗೆ ಹೆಗ್ಗಣ ಮುದ್ದು.
- ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
- ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
- ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
- ಮನಸಿದ್ದರೆ ಮಾರ್ಗ.
- ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
- ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
- ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
- ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
- ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
- ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
- ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
- ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ.
- ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
- ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
- ತುಂಬಿದ ಕೊಡ ತುಳುಕುವುದಿಲ್ಲ.
- ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
- ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ.
- ಹಾಸಿಗೆ ಇದ್ದಷ್ಟು ಕಾಲು ಚಾಚು
- ಬೀದೀಲಿ ಹೊಗೊ ಮಾರೀನ ಮನೆಗೆ ಕರೆದಂಗೆ
- ಮಾಡಿದುಣ್ಣೊ ಮಾರಾಯ
- ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೆಕು
- ಆಗೊದೆಲ್ಲ ಒಳ್ಳೆದಕ್ಕೆ
- ಕಾಲಕ್ಕೆ ತಕ್ಕಂತೆ ನಡಿಯಬೇಕು,ತಾಳಕ್ಕೆ ತಕ್ಕಂತೆ ಕುಣಿಯಬೇಕು
- ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ
- ಪಾಲಿಗೆ ಬಂದದ್ದೆ ಪರಮಾನ್ನ.
- ಕಳ್ಳನ ನಂಬಿದ್ರು ಕುಳ್ಳನ ನಂಬಬೇಡ
- ನೆಲಕ್ಕೆ ಬಿದ್ದ್ರೂ ಮೀಸೆ ಮಣ್ಣಾಗಿಲ್ಲ
- ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೊ
- ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.
- ರೋಗಿ ಬಯಸಿದ್ದು ಹಾಲು-ಅನ್ನ ವೈದ್ಯ ಹೇಳಿದ್ದು ಹಾಲು-ಅನ್ನ
- ಕಳ್ಳನಿಗೊಂದು ಪಿಳ್ಳೆ ನೆವ
- ಹೋದೆಯಾ ಪಿಶಾಚಿ ಅಂದ್ರೆ ಬಂದೆಯಾ ಗವಾಕ್ಷೀಲಿ
- ಹೋದ ಪುಟ್ಟ ಬಂದ ಪುಟ್ಟ
- ಸೋದರ ಮಾವನ ಚಾಳು ತುಂಡಪುಂಡರ ಪಾಲು
- ನೆಂಟರೆಲ್ಲ ಖರೆ, ಕಂಟಲೆ ಚೀಲಕ್ಕೆ ಕೈ ಹಾಕಬೇಡ
- ಅಂಗೈ ಹುಣ್ಣಿಗೆ ಕನ್ನಡಿ ಯಾಕೆ
- ಹುಣ್ಣಿಮೆ ಬರುವ ತನಕ ಅಮಾಸೆ ನಿಲ್ಲದು, ಅಮಾಸೆ ಬರುವನಕ ಹುಣ್ಣಿಮೆ ನಿಲ್ಲದು
- ಹಗೆ ಮಾತು ಆತುಕೊಂಡ, ತುಟಿ ಬಿಚ್ಚದೆ ಕೂತುಕೊಂಡ
- ಮಕ ನೋಡಿ ಮಾರು ಹೋದ, ಗುಣ ನೋಡಿ ದೂರ ಹೋದ
- ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ
- ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು
- ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು
- ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ
- ಪಾಪ ಅಂದ್ರೆ ಕರ್ಮ ಬರ್ತದೆ
- ಅರಸು ಆದೀಕ (=ಆದಾಯ) ತಿಂದ,
- ಪರದಾನಿ ಹೂಸು ಕುಡಿದ
- ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
- ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತುಕೊಂಡ
- ಗವುಜಿ ಗದ್ದಲ ಏನೂ ಇಲ್ಲ, ಗೋವಿಂದ ಭಟ್ಟ ಬಾವೀಲಿ ಬಿದ್ದ
- ಇದ್ದವರು ಇದ್ದಹಾಗೆ ಸಿದ್ಧಾ ದೇವಿಗೆ ಸಿಡಿಲು ಬಡೀತು
- ಅಂದು ಬಾ ಅಂದ್ರೆ ಮಿಂದು ಬಂದ
- ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ:
- ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ
- ಅಜ್ಜ! ಮದುವೆ ಅಂದ್ರೆ ನನಗೋ ಅಂದ
- ಅಕ್ಕ ನನ್ನವಳಾದ್ರೆ ಬಾವ ನನ್ನವನೇನು
- ಅಕ್ಕನ ಹಗೆ ಬಾವನ ನೆಂಟು
- ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
- ಅಕ್ಕ ಬರಬೇಕು ಅಕ್ಕಿ ಮುಗೀಬಾರದು
- ನೀರ ಕಡಿದರೆ ಬೆಣ್ಣೆ ಬಂದಾದೇನೆ
- ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
- ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
- ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
- ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
- ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ
- ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
- ಅಡವಿಯ ದೊಣ್ಣೆ ಪರದೇಸಿಯ ತಲೆ
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
- ಅತಿ ಆಸೆ ಗತಿಗೇಡು
- ಅತಿ ಸ್ನೇಹ ಗತಿ ಕೇಡು
- ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
- ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
- ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು
- ಅರಗಿನಂತೆ ತಾಯಿ, ಮರದಂತೆ ಮಕ್ಕಳು
- ಅರೆಪಾವಿನವರ ಅಬ್ಬರ ಬಹಳ
- ಅಲ್ಪರ ಸಂಗ ಅಭಿಮಾನ ಭಂಗ
- ಅಳಿವುದೇ ಕಾಯ ಉಳಿವುದೇ ಕೀರ್ತಿ
- ಆವು ಕಪ್ಪಾದ್ರೆ ಹಾಲು ಕಪ್ಪೇನು
- ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
- ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ
- ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
- ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
- ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
- ಆಲಸ್ಯಂ ಅಮೃತಂ ವಿಷಂ
- ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
- ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
- ಆಸೆಗೆ ಕೊನೆಯಿಲ್ಲ
- ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
- ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು
- ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
- ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ
- ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು
- ಕಳ್ಳನ ಮನಸ್ಸು ಹುಳ್ಳಗೆ
- ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು
- ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿ ಕೊಳ್ತಾಳೆ
- ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
- ಹೆಂಡ್ರನ್ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ
- ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ
- ಕೊಡೋದು ಕೊಳ್ಳೋದು ಗಂಡಂದು, ಮಜ ಮಾಡೋದು ಹೆಂಡ್ರುದ್ದು
- ಊರಿಗಾಗದ ಗೌಡ, ಮೇಲೆರಗುವ ಗಿಡುಗ
- ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
- ಯೋಗ ಇದ್ದಷ್ಟೇ ಭೋಗ ಹಾಕ್ಮಣೆ,
- ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು
- ಮುದ್ದು ಮುದ್ದು ತೊಗಲೆ ಬಿದ್ದು ಬಿದ್ದು ನಗಲೆ
- ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ
- ಹೋದ ಬದುಕಿಗೆ ಹನ್ನೆರಡು ದೇವರು
- ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು
- ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
- ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ
- ಇಕ್ಕಲಾರದ ಕೈ ಎಂಜಲು ಇಕ್ಕುವಳು
- ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಕ್ಕು
- ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ
- ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ
- ಇಡೀ ಮುಳುಗಿದರೂ ಮೂಗು ಮೇಲೆ
- ಇದ್ದ ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
- ಇದ್ದದ್ದು ಹೋಯಿತು ಮದ್ದಿನ ಗುಣದಿಂದ
- ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ
- ತನ್ನೂರಲಿ ರಂಗ, ಪರೂರಲಿ ಮಂಗ
- ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ
- ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು
- ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು
- ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ
- ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು
- ತುಂಬಿದ ಕೊಡ, ತುಳುಕೋದಿಲ್ಲ
- ಕಾಮಾಲೆ ಕಣ್ಣೊನಿಗೆ ಕಂಡಿದ್ದೆಲ್ಲ ಹಳದಿನೇ
- ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದ
- ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ
- ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
- ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು
- ಹಾಳೂರಿಗೆ ಉಳಿದವನೇ ಗೌಡ
- ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ
- ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
- ಜನ ಮರುಳೋ ಜಾತ್ರೆ ಮರುಳೋ
- ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
- ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು
- ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
- ಕೋಪದಲ್ಲಿ ಕುಯ್ದ ಮೂಗು ಶಾಂತಿಯಲ್ಲಿ ಬಂದೀತೇ
- ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ
- ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ
- ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ
- ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ
- ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದರು
- ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
- ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ
- ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು
- ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
- ಬೇಲಿನೆ ಎದ್ದು ಹೊಲ ಮೇಯಿತಂತೆ
- ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ
- ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ
- ಗಂಡ ಹೆಂಡಿರ ಜಗಳ ಉನ್ಡು ಮಲಗೊ ತನಕ
- ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
- ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
- ಮೂರೂ ಬಿಟ್ಟೋಳು ಊರಿಗೆ ದೊಡ್ಡೋಳು
- ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ
- ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ
- ಆನೆಯಂಥದೂ ಮುಗ್ಗರಿಸ್ತದೆ
- ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
- ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
- ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ?
- ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು
- ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
- ವಶಗೆಡದೆ ಹಸಗೆಡಲ್ಲ
- ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ
- ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
- ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ
- ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
- ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು
- ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
- ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
- ಮುದ್ದೆ ಉಣ್ತಾ ಮಜ್ಜಿಗೆ ಓಡಾಟ
- ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ
- ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು
- ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ
- ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
- ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
- ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
- ರಾಜ ಇರೋತನಕ ರಾಣಿ ಭೋಗ
- ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
- ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು
- ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
- ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ
- ಲಿಂಗ ಹರಿದ ಮೇಲೆ ಜಂಗಮನ ಹಂಗೇನು
- ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
- ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
- ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
- ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
- ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ
- ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
- ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು
- ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ
- ಅತ್ತೆ ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ
- ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ
- ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
- ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
- ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ
- ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
- ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
- ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
- ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
- ಸಂತೇಲಿ ಮಂತ್ರ ಹೇಳಿದಂಗೆ ಸಂದೀಲಿ ಸಮಾರಾಧನೆ ಮಾಡ್ದಂಗೆ
- ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
- ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
- ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
- ನೀರೆ ನಿನ್ನ ಮಾತು ನಿಜವೇನೆ
- ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ
- ಸಾವಿರ ಕೊಟ್ಟರೂ ಸವತಿ ಮನೆ ಬೇಡ
- ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ
- ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ
- ಸುಳ್ಳು ದೇವರಿಗೆ ಕಳ್ಳ ಪೂಜಾರಿ
- ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
- ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
- ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
- ಹಗಲು ಅರಸನ ಕಾಟ ಇರುಳು ದೆವ್ವದ ಕಾಟ
- ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
- ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
- ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
- ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
- ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ
- ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು
- ಹತ್ತರೊಟ್ಟಿಗೆ ಹನ್ನೊಂದು
- ಜಾತ್ರೆಯೊಟ್ಟಿಗೆ ಗೋವಿಂದು
- ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
- ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
- ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
- ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
- ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
- ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ
- ಹರೆಯಕ್ಕೆ ಬಂದಾಗ ಹಂದಿನೂ ಚಂದ
- ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
- ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು
- ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
- ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು
- ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ
- ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
- ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ
- ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ
- ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
- ಹಾಳೂರಿಗೆ ಉಳಿದೋನೇ ಗೌಡ,
- ಬೆಂಗಳೂರಿಗೆ ಬಂದೋನೇ ಬಹದ್ದೂರ
- ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು
- ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು
- ಹಿತ್ತಲ ಗಿಡ ಮದ್ದಲ್ಲ
- ಹತ್ತರ ಮಾತು ರುಚಿಯಲ್ಲ
- ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ
- ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
- ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
- ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
- ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ
- ಹುತ್ತ ಬಡಿದರೆ ಹಾವು ಸಾಯುವುದೇ
- ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
- ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ
- ಹೆಡ್ಡಾಳಾದ್ರೂ ದೊಡ್ಡಾಳು ಮೇಲು
- ಹೇಳೊದು ವೇದ ಹಾಕೊದು ಗಾಳ
- ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
- ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
- ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ
- ಕಂಗಾಲಾದರೂ ಹಂಗಾಳಾಗಬಾರದು
- ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
- ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ
- ನಾಯಿಗೆ ಕೆಲಸಿಲ್ಲ, ನಿಲ್ಲೋಕೆ ಹೊತ್ತಿಲ್ಲ
- ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ
- ಎಂಟು ವರ್ಷಕ್ಕೆ ನನ್ನ ಮಗ ದಂಟಾದ
- ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ
- ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
- ಮುಲಾಜಿಗೆ ಬಸುರಾಗಿ ಹೇರೋಕೆ ತಾವಿಲ್ಲ
- ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು
- ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು
- ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು
- ತೂತು ಗತ್ತಲೇಲಿ ತಾತನ ಮದುವೆ
- ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
- ತಾಳ ತಪ್ಪಿದ ಬಾಳು, ತಾಳಲಾರದ ಗೋಳು
- ಅವರವರ ತಲೆಗೆ ಅವರವರದೇ ಕೈ
- ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು ನನ್ನ ಹೆಂಡ್ರನ್ನ ಕೇಳು
- ಉಂಡ ಮನೆ ಜಂತೆ ಎಣಿಸಬಾರದು
- ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ
- ಕ್ರಮ ಕಾಣದ ನಾಯಿ ಕಪಾಳೆ ನೆಕ್ತು
- ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು
- ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
- ಹಣ ಎರವಲು ತಂದು ಮಣ ಉರುವಲು ಕೊಂಡ
- ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ)
- ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ
- ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
- ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ
- ಕಾಲ್ಮುರುಕ ದೇವರಿಗೆ ಕೈಲಾಸವೇ
- ಹೊಳೆಗೆ ಸುರಿದರೂ ಅಳೆದು ಸುರಿ
- ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
- ಉಂಬಾಗ ಉಡುವಾಗ ಊರೆಲ್ಲ ನೆಂಟರು
- ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ
- ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
- ಕೃಷಿತೋ ನಾಸ್ತಿ ದುರ್ಭಿಕ್ಷಂ
- ಉದ್ಯೋಗವೇ ಗಂಡಸಿಗೆ ಲಕ್ಷಣ
- ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
- ಏರಿದವ ಇಳಿದಾನು ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ?
- ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯಮ, ಕಾಣದ್ದು ಕಂಡೆ ಅಧಮ
- ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ
- ನಯಶಾಲಿ ಆದವನು ಜಯಶಾಲಿ ಆದಾನು
- ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು
- ಬಾಯಲ್ಲಿ ಬೆಲ್ಲ ಕರುಳು ಕತ್ತರಿ
- ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು
- ಕಳ್ಳನ ಹೆಜ್ಜೆ ಕಳ್ಳನೇ ಬಲ್ಲ
- ಹಣ ಇಲ್ಲದವ ಹೆಣಕ್ಕಿಂತ ಕಡೆ
- ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ
- ಕೂತು ಉಣ್ಣೋನಿಗೆ ಕುಡಿಕೆ ಹೊನ್ನು ಸಾಲದು
- ಕೆಡುವ ಕಾಲಕ್ಕೆ ಬುದ್ಧಿ ಇಲ್ಲ ಮರಣ ಕಾಲಕ್ಕೆ ಮದ್ದಿಲ್ಲ
- ಕೈಗೆ ಬಂದ ತುತ್ತು ಬಾಯಿಗೆ ಇಲ್ಲ
- ಕೊಡಲಿ ಕಾವು ಕುಲಕ್ಕೆ ಸಾವು
- ಬಿದ್ದರೂ ಮೀಸೆ ಮಣ್ಣಾಗಲಿಲ್ಲ
- ಅಡಿಗೆ ಬಿದ್ಫರೂ ಮೀಸೆ ಮೇಲೆ
- ಬಂಟರ ಅಬ್ಬರ ಸೇವಿನ ಗೊಬ್ಬರ
- ಊರಿಗೆ ಬಂದ ನೀರೆ ನೀರಿಗೆ ಬಾರದಿರುತ್ತಾಳೆಯೇ?
- ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರು
- ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು
- ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ.
- ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು
- ಕಾಸಿಗೆ ತಕ್ಕ ಕಜ್ಜಾಯ.
- ಕಂತೆಗೆ ತಕ್ಕ ಬೊಂತೆ
- ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ
- ಅಗ್ಗದ ಮಾಲು;ಮುಗ್ಗಿದ ಜೋಳ
- ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು.
- ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು
- ಊರು ಸುಟ್ಟರೂ ಹನುಮಂತರಾಯ ಹೊರಗೆ
- ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡ ಹಾಗೆ
- ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
- ಅಕ್ಕಿ ಮೇಲೆ ಆಸೆ, ನೆಂಟರ ಮೆಲೆ ಪ್ರೀತಿ
- ಬಲ್ಲವನೇ ಬಲ್ಲ ಬೆಲ್ಲದ ರುಚಿಯ
- ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ
- ತೋಟ ಶೃಂಗಾರ, ಒಳಗೆ ಗೋಣಿ ಸೊಪ್ಪು
- ಹೊರಗೆ ಥಳುಕು, ಒಳಗೆ ಹುಳುಕು
- ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡನಂತೆ
- ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ
- ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೆ ?
- ಆಕಳು ಕಪ್ಪಾದರೂ ಹಾಲು ಕಪ್ಪೆ ?
- ಕಬ್ಬು ಡೊಂಕಾದರೆ ಸಿಹಿ ಡೊಂಕೆ ?
- ಗೋರ್ಕಲ್ಲ ಮೇಲೆ ಮಳೆಗರೆದಂತೆ
- ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ
- ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ
- ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ
- ಊರಿಗೆಲ್ಲಾ ಒಬ್ಬಳೇ ಪದ್ಮಾವತಿ
- ಅಳಿದೂರಿಗೆ ಉಳಿದವನೇ ಗೌಡ
- ತನ್ನ ಓಣೀಲಿ ನಾಯಿಯೇ ಸಿಂಹ
- ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ
- ಗಾಳಿ ಬಂದಾಗ ತೂರಿಕೋ
- ಕಾಸಿದ್ರೆ ಕೈಲಾಸ
- ದುಡ್ಡೇ ದೊಡ್ಡಪ್ಪ,ಬುದ್ಧಿ ಅದರಪ್ಪ
- ಪುರಾಣ ಹೇಳೊಕೆ; ಬದನೆಕಾಯಿ ತಿನ್ನೋಕೆ
- ಹೇಳೋದು ಶಾಸ್ತ್ರ, ಹಾಕೋದು ಗಾಣ
- ಹೇಳೋದು ಶಾಸ್ತ್ರ,ತಿನ್ನೋದು ಬದನೆಕಾಯಿ
- ನೂರು ಜನಿವಾರ ಒಟ್ಟಿಗಿರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ
- ಹೆಣ್ಣಿಗೆ ಹೆಣ್ಣೇ ವೈರಿ
- ಅತಿ ಆಸೆ ಗತಿ ಕೇಡು
- ವಿನಾಶ ಕಾಲೇ ವಿಪರೀತ ಬುದ್ಧಿ
- ಆಸೆಯೇ ದು:ಖಕ್ಕೆ ಮೂಲ
- ಅತಿಯಾದರೆ ಅಮೃತವೂ ವಿಷ
- ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು
- ಅತಿ ಸ್ನೇಹ ಗತಿ ಕೆಡಿಸಿತು
- ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ
- ಅಟ್ಟದ ಮೇಲಿಂದ ಬಿದ್ದವನಿಗೆ ದಡಿಗೆ ತಗೊಂಡು ಹೇರಿದರಂತೆ
- ಮೆತ್ತಗಿದ್ದಲ್ಲಿ ಮತ್ತೊಂದು ಗುದ್ದಲಿ
- ನಿಸ್ಸಹಾಯಕರ ಮೇಲೆ ಹುಲ್ಲುಕಡ್ಡಿ ಸಹ ಭುಸುಗುಡುತ್ತದೆ
- ಮೆತ್ತಗಿದ್ದವರನ್ನು ಮೊಣಕೈಯಲ್ಲಿ ಗುದ್ದಿದರು
- ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರಂತೆ
- ಅಂಗೈ ತೋರಿಸಿ ಅವಲಕ್ಷಣ ಅಂತ ಅನ್ನಿಸಿಕೊಂಡರಂತೆ
- ಇರಲಾರದೆ ಇರುವೆ ಬಿಟ್ಟುಕೊಂಡು
- ಕಿರುಗೂರಿಗೆ ಹೋದರಂತೆ ಕಣಿ ಕೇಳುವುದಕ್ಕೆ
- ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ
- ಬೀದೀಲಿ ಹೋಗೋ ಮಾರೀನ ಮನೆ ಹೊಕ್ಕು ಹೋಗು ಅಂದಂತಾಯ್ತು
- ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ
- ಸಲಿಗೆ ಕೊಟ್ಟ ಸೊಣಗ ಸಟ್ಟುಗ ನೆಕ್ಕಿತಂತೆ
- ಅಯ್ಯೋ ಪಾಪ ಅಂದ್ರೆ ಅರ್ಧ ಆಯುಸ್ಸು
- ಬಡವನ ಸಿಟ್ಟು ದವಡೆಗೆ ಮೂಲ
- ಬಡವನ ಕೋಪ ದವಡೆಗೆ ಮೂಲ
- ಬಡವ ನೀ ಮಡಗಿದ ಹಾಗಿರು
- ಕುದಿಯುವ ಎಣ್ಣೆಯಿಂದ ಕಾದ ತವದ ಮೇಲೆ ಬಿದ್ದ ಹಾಗೆ
- ಬಾಣಲೆಯಿಂದ ಬೆಂಕಿಗೆ
- ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ
- ಬೇಲಿಯೇ ಎದ್ದು ಹೊಲ ಮೇಯ್ದಂತೆ
- ಕಾಡಿಗೆ ಹೋಗೋ ವಯಸ್ಸಿನಲ್ಲಿ ಬ್ರಾಹ್ಮಣ ಓಂ ಕಲಿತ
- ಬೆಳೆಯುವ ಪೈರು ಮೊಳಕೆಯಲ್ಲಿ
- ಮೂರು ವರ್ಷಕ್ಕೆ ಬಂದಿದ್ದು ಮೂವತ್ತು ವರ್ಷಕ್ಕೆ ಬಂತು
- ಯಥಾ ರಾಜಾ ತಥಾ ಪ್ರಜಾ
- ನೂಲಿನಂತೆ ಸೀರೆ; ತಾಯಿಯಂತೆ ಮಗಳು
- ಸಂಕಟ ಬಂದಾಗ ವೆಂಕಟರಮಣ
- ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
- ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
- ಆಕಾಶ ನೋಡೊದಕ್ಕೆ ನೂಕುನುಗ್ಗಲೆ ?
- ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
- ಅಲ್ಪರ ಸಂಗ ಅಭಿಮಾನ ಭಂಗ
- ಸಗಣಿಯವನೊಡನೆ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು
- ಸಗಣಿಯವನ ಸರಸಕ್ಕಿಂತ, ಗಂಧದವನ ಗುದ್ದಾಟ ಮೇಲು
- ಅಲ್ಪ ವಿದ್ಯಾ ಮಹಾಗರ್ವಿ
- ಅಂಬಲಿ ಕುಡಿಯುವವನಿಗೆ, ಮೀಸೆ ಹಿಡಿಯುವವನೊಬ್ಬ
- ಗಂಜಿ ಕುಡಿಯೋನಿಗೆ,ಮೀಸೆ ಹಿಡಿಯುವವನೊಬ್ಬ
- ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೆ ?
- ನರಿ ಕೂಗು ಗಿರಿ ಮುಟ್ಟುತ್ತದೆಯೆ ?
- ದುಡಿಮೆಯೇ ದುಡ್ಡಿನ ತಾಯಿ
- ಕಾಯಕವೇ ಕೈಲಾಸ
- ಆಳಾಗಬಲ್ಲವನು ಅರಸಾಗಬಲ್ಲ
- ಕಷ್ಟ ಪಟ್ಟರೆ ಫಲವುಂಟು
- ದುಡಿಮೆಯೇ ದೇವರು
- ಚಿತ್ತಾರದ ಅಂದವನ್ನು ಮಸಿ ನುಂಗಿತು
- ಸಾವಿರ ಚಿತ್ತಾರ ಮಸಿ ನುಂಗಿತು
- ಕದ ತಿನ್ನೋವನಿಗೆ ಹಪ್ಪಳ ಈಡಲ್ಲ
- ರಾವಣಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ
- ಸಮುದ್ರ ದಾಟಿದವನಿಗೆ ಹಸುವಿನ ಹೆಜ್ಜೆ ದೊಡ್ಡದೆ
- ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು
- ಮಾತು ಬೆಳ್ಳಿ; ಮೌನ ಬಂಗಾರ
- ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
- ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ.
- ಆದ ಕೆಲಸಕ್ಕೆ ಅತ್ತೆಗಳು ಬಂದಂತೆ
- ಊಟಕ್ಕಿಲ್ಲದ ಉಪ್ಪಿನಕಾಯಿ ...ಕ್ಕೆ ಸಮಾನ
- ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ
- ಬಂದ ದಾರಿಗೆ ಸುಂಕವಿಲ್ಲ
- ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ
- ಉಸ್ ಎಂದರೆ ಉಸಳಿ ಬೇಡಿದ್ದನಂತೆ
- ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ಬಳಿದುಕೊಂಡರಂತೆ
- ಅತ್ತ ದರಿ; ಇತ್ತ ಪುಲಿ
- ಬಿಸಿ ತುಪ್ಪ; ನುಂಗೋದಕ್ಕೂ ಆಗೊಲ್ಲ; ಉಗುಳೋದಕ್ಕೂ ಆಗೊಲ್ಲ
- ಮನೇಗೆ ಬೆಂಕಿ ಬಿದ್ದಾಗ ಭಾವಿ ತೋಡಕ್ಕೆ ಶುರು ಮಾಡಿದರಂತೆ
- ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ
- ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಅಂದರಂತೆ
- ಆತುರಗಾರನಿಗೆ ಬುದ್ಧಿ ಮಟ್ಟ
- ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
- ತನಗೇ ಜಾಗವಿಲ್ಲ; ಕೊರಳಲ್ಲಿ ಡೋಲು
- ಬೇರೆ ಉಣ್ಣೋಕಿಲ್ಲದಿದ್ದರೂ ಸಣ್ಣಕ್ಕಿ ಅನ್ನ ತಿಂದರು ;
- ಉಡೋಕಿಲ್ಲದಿದ್ದರೂ ಪಟ್ಟೆ ಸೀರೆ ಉಟ್ಟರು
- ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ
- ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ
- ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ
- ಮಂತ್ರಕ್ಕಿಂತ ಉಗುಳೇ ಜಾಸ್ತಿ
- ಮೂಗಿಗಿಂತ ಮೂಗುತಿ ಭಾರ
- ಇಬ್ಬರ ಜಗಳ ಮೂರನೆಯವನಿಗೆ ಲಾಭ
- ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು (ರಾಘವಾಂಕ)
- ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
- ಏತಿ ಅಂದರೆ ಪ್ರೇತಿ ಅಂದಂತೆ
- ಓದುವಾಗ ಓದು; ಆಡುವಾಗ ಆಡು
- ಓದಿ ಬರೆಯೋ ಕಾಲದಲ್ಲಿ ಆಡಿ ಮಣ್ಣು ಹುಯ್ಕೊಂಡರು
- ಕೈಯ್ಯಲ್ಲೆ ಬೆಣ್ಣೆ ಇಟ್ಟುಕೊಂಡು,ತುಪ್ಪಕ್ಕೆ ಊರೆಲ್ಲ ಅಲೆದರಂತೆ
- ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ
- ಊರಿಗೆ ಉಪಕಾರಿ, ಮನೆಗೆ ಮಾರಿ
- ಮನೆಗೆ ಮಾರಿ, ಪರರಿಗೆ ಉಪಕಾರಿ
- ತಮ್ಮನೇಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಬೇರೇ ಮನೇ ಸತ್ತ ನೊಣದ ಕಡೆಗೆ ಬೆಟ್ಟು ಮಾಡಿದರು
- ತನ್ನ ಎಲೇಲಿ ಕತ್ತೆ ಸತ್ತು ಬಿದ್ದಿದ್ರೆ , ಪಕ್ಕದ ಎಲೇಲಿ ನೊಣ ಹೊಡೆಯಕ್ಕೆ ಹೋದ
- ಕೋತಿಗೆ ಹೆಂಡ ಕುಡಿಸಿದಂತೆ
- ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ
- ಹೆಂಡ ಕುಡಿದ ಕಪಿಗೆ ಚೇಳು ಕಡಿದ ಹಾಗೆ
- ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು
- ಅಮ್ಮನವರು ಪಟ್ಟಕ್ಕೆ ಬಂದಾಗ,ಅಯ್ಯನವರು ಚಟ್ಟಕ್ಕೇರಿದರು
- ಕೆಲಸವಿಲ್ಲದ ಕುಂಬಾರ ಮಕ್ಕಳ ಅಂ.. ತಟ್ಟಿದ
- ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದನಂತೆ
- ಆರಕ್ಕೆ ಹೆಚ್ಚಿಲ್ಲ; ಮೂರಕ್ಕೆ ಕಡಿಮೆಯಿಲ್ಲ
- ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ
- ಕಳ್ಳನ ಹೆಂಡತಿ ಎಂದಿದ್ದರೂ ಮುಂ..
- ಶರಣರ ಬದುಕನ್ನು ಅವರ ಮರಣದಲ್ಲಿ ನೋಡು
- ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ನರಕ
- ಈಸಿ ನೋಡು , ಇದ್ದು ಜೈಸಿ ನೋಡು
- ಹೂವಿನ ಜೊತೆ ದಾರ ಮುಡಿಯೇರಿತು
- ಹೂವಿನಿಂದ ನಾರಿಗೂ ಸ್ವರ್ಗ
- ಗೆದ್ದೆತ್ತಿನ ಬಾಲ ಹಿಡಿದ ಹಾಗೆ
- ಆರು ದೋಸೆ ಕೊಟ್ರೆ ಅತ್ತೆ ಕಡೆ, ಮೂರು ದೋಸೆ ಕೊಟ್ರೆ ಸೊಸೆ ಕಡೆ
- ಆರು ದೋಸೆ ಕೊಟ್ರೆ ಅತ್ತೆ ಕಡೇ,ಮೂರು ದೋಸೆ ಕೊಟ್ರೆ ಮಾವನ ಕಡೆ
- ನಾಯಿ ಬಾಲ ಡೊಂಕು
- ನಾಯಿ ಬಾಲಕ್ಕೆ ದಬ್ಬೆ ಕಟ್ಟಿದ ಹಾಗೆ
- ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
- ಜಟ್ಟಿ ಜಾರಿದರೆ ಅದೂ ಒಂದು ಪಟ್ಟು
- ಮುದಿ ... ಮಹಾ ಪತಿವ್ರತೆ (ವೃದ್ಧ ನಾರೀ ಪತಿವ್ರತಾ)
- ಸೂಳೆ ಮುಪ್ಪಾಗಿ ಗೊರವಿತ್ತಿಯಾದಳು
- ಬಾಯಲ್ಲಿ ಬೆಣ್ಣೆ; ಬಗಲಲ್ಲಿ ದೊಣ್ಣೆ.
- ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ
- ಕೂರೆಗೆ ಹೆದರಿ ಸೀರೆ ಬಿಚ್ಚೆಸೆದರು
- ಕಾಸು ಕೊಟ್ಟು ಬ್ರಹ್ಮೇತಿ ತಗೊಂಡರು
- ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡ ಹಾಗೆ
- ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ
- ಹೆಂಗಸರ ಬುದ್ಧಿ ಸೊಂಟದಿಂದ ಕೆಳಗೆ
- ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ
- ಹಾಡ್ತಾ ಹಾಡ್ತಾ ರಾಗ , ನರಳ್ತಾ ನರಳ್ತಾ ರೋಗ
- ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು
- ಹೊಸ ಡಾಕ್ಟರ್ಗಿಂತ ಹಳೇ ಕಾಂಪೌಂಡರ್ ವಾಸಿ
- ಉರಿಯೋ ಗಾಯಕ್ಕೆ ಉಪ್ಪು ಸವರಿದಂತೆ
- ಕುರು ಮೇಲೆ ಬರೆ ಎಳೆದ ಹಾಗೆ
- ಸಮುದ್ರದ ನೆಂಟಸ್ತನ ; ಉಪ್ಪಿಗೆ ಬಡತನ
- ಸಮುದ್ರದ ಮದ್ಯೆ ಇದ್ದರೂ ಉಪ್ಪಿಗೆ ಬರವಂತೆ
- ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದ್ರು
- ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು
- ಉಪ್ಪು ತಿಂದ ಮನೆಗೆ ಎರಡು ಬಗೆಯ ಬಂದ
- ಅಡಿಕೆ ಕದ್ದ ಮಾನ ಆನೆ ಕೊಟ್ರೂ ಬರೊಲ್ಲ
- ಅಲ್ಲುಂಟೆ, ಇಲ್ಲುಂಟೆ, ಕಲ್ಲಲ್ಲುಂಟೆ, ಶಿವದಾನ.
- (ಅವರು) ಚಾಪೆ ಕೆಳಗೆ ತೂರಿದರೆ (ನೀನು) ರಂಗೋಲಿ ಕೆಳಗೆ ತೂರು.
- ವೇದ ಸುಳ್ಳಾದ್ರು ಗಾದೆ ಸುಳ್ಳಲ್ಲ.
- ಬೆಂಕಿ ಇಲ್ಲದೆ ಹೊಗೆ ಏಳಲ್ಲ
- ಹಿತ್ತಲ ಗಿಡ ಮದ್ದಲ್ಲ
- ಒಲಿದರೆ ನಾರಿ ಮುನಿದರೆ ಮಾರಿ
- ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ
- ಕಳ್ಳನ್ನ ನಂಬಿದ್ರೂ ಕುಳ್ಳನ್ನ ನಂಬಬಾರದು
- ಮೋಟಾಳಿಗೊಂದು ಚೋಟಾಳು
- ಮಳ್ಳೀ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದ್ಲಂತೆ
- ಹಾಲಿನಲ್ಲಿ ಹುಳಿ ಹಿಂಡಿದಂತೆ
- ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು
- ಹೆಂಡ ಕುಡಿಯುವ ದೇವರಿಗೆ ಹೇ.. ತಿನ್ನುವ ಪೂಜಾರಿ
- ಬಡವರ ಮನೆ ಊಟ ಚೆನ್ನ, ದೊಡ್ಡವರ ಮನೆ ನೋಟ ಚೆನ್ನ
- ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ
- ಬಾಯಿ ಬಿಟ್ಟರೆ ಬಣ್ಣಗೇಡು
- ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು
- ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಮಿಂ..ನ ಚಿಂತೆ
- ಶಿವಪೂಜೇಲಿ ಕರಡಿ/ಕರಡಿಗೆ ಬಿಟ್ಟ ಹಾಗೆ
- ಅಡುಗೆ ಮಾಡಿದವಳಿಗಿಂತ ಬಡಿಸಿದವಳೇ ಮೇಲು
- ಸೀರೆ ಗಂಟು ಬಿಚ್ಚೋವಾಗ ದಾರದ ನಂಟು ಯಾರಿಗೆ ಬೇಕು?
- ಕುಡಿಯೋ ನೀರಿನಲ್ಲಿ ಬೆರಳಾಡಿಸೋ ಬುದ್ಧಿ (ಕುಡಿಯೋ ನೀರಿನಲ್ಲಿ ... ಅದ್ದುವ ಬುದ್ಧಿ)
- ಅನುಕೂಲ ಸಿಂಧು; ಅಭಾವ ವೈರಾಗ್ಯ
- ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೊಲ್ಲ
- ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ
- ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ
- ಮಾಡಿದೋರ ಪಾಪ ಆಡಿದೋರ ಬಾಯಲ್ಲಿ
- ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ
- ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂದಂತೆ
- ಹೌದಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು ?
- ಹೊಳೆ ನೀರಿಗೆ ದೊಣೆನಾಯ್ಕನ ಅಪ್ಪಣೆ ಏಕೆ ?
- ರಂಗನ ಮುಂದೆ ಸಿಂಗನೆ ? ಸಿಂಗನ ಮುಂದೆ ಮಂಗನೆ ?
- ಜಾಣನಿಗೆ ಮಾತಿನ ಪೆಟ್ಟು; ದಡ್ಡನಿಗೆ ದೊಣ್ಣೆಯ ಪೆಟ್ಟು
- ಬಿರಿಯಾ ಉಂಡ ಬ್ರಾಹ್ಮಣ ಭಿಕ್ಷೆ ಬೇಡಿದ
- ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
- ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು
- ಬೆಟ್ಟ ಅಗೆದು ಇಲಿ ಹಿಡಿದಂತೆ
- ಇಲಿ ಬಂತು ಎಂದರೆ ಹುಲಿ ಬಂತು ಎಂದರು
- ಇಡಿಯ ಮುಳುಗಿದವನಿಗೆ ಚಳಿಯೇನು?ಮಳೆಯೇನು?
- ಬೆಕ್ಕಿಗೆ ಚೆಲ್ಲಾಟ: ಇಲಿಗೆ ಪ್ರಾಣಸಂಕಟ
- ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು
- ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ
- ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ
- ದೇವಸ್ಥಾನದಲ್ಲಿ ಊದಿನ ಕಡ್ಡಿ ಹಚ್ಚದಿದ್ದರೂ ಚಿಂತೆಯಿಲ್ಲ; ... ಬಿಡಬೇಡ
- ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು
- ಸಂಸಾರ ಗುಟ್ಟು; ವ್ಯಾಧಿ ರಟ್ಟು
- ಮದುವೇಲಿ ಗಂಡು,ಸ್ಮಶಾನ ಯಾತ್ರೇಲಿ ಹೆಣವಾಗೋ ಬಯಕೆ
- ಐದು ಬೆರಳೂ ಒಂದೇ ಸಮ ಇರೋಲ್ಲ
- ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ?
- ಮುಖ ನೋಡಿ ಮಣೆ ಹಾಕು
- ದೀಪದ ಕೆಳಗೆ ಯಾವತ್ತೂ ಕತ್ತಲೇ
- ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ
- ತಮ್ಮ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು ಎಂದುಕೊಂಡರು
- ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೆ ?
- ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ
- ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ
- ಸಾವಿರ ಕುದುರೆ ಸರದಾರ, ಮನೆ ಹೆಂಡತಿ ಕಾಸ್ತಾರ
- ಆಪತ್ತಿಗಾದವನೇ ನೆಂಟ
- ಶಂಖದಿಂದ ಬಂದರೇ ತೀರ್ಥ
- ಕೆಟ್ಟ ಕಾಲ ಬಂದಾಗ ಕಟ್ಟಿಕೊಂಡವಳೂ ಕೆಟ್ಟವಳು
- ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ
- ಅಂಕೆಯಲ್ಲಿದ್ದ ಹೆಣ್ಣು, ಮಜ್ಜಿಗೆಯಲ್ಲಿದ್ದ ಬೆಣ್ಣೆ ಕೆಡೊಲ್ಲ
- ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ?
- ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ
- ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ
- ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದರಂತೆ
- ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೆ ?
- ಅರವತ್ತಕ್ಕೆ ಅರಳು ಮರಳು
- ಜನ ಮರುಳೋ ಜಾತ್ರೆ ಮರುಳೋ
- ಕುಂಟನಿಗೆ ಎಂಟು ಚೇಷ್ಟೆ, ಕುರುಡನಿಗೆ ನಾನಾಚೇಷ್ಟೆ
- ಬೊಗಳುವ ನಾಯಿ ಕಚ್ಚುವುದಿಲ್ಲ
- ಕೈಗೆಟುಕದ ದ್ರಾಕ್ಷಿ ಹುಳಿ
- ದುಷ್ಟರಿಂದ ದೂರವಿರು
- ಹಂಗಿನ ಅರಮನೆಗಿಂತಾ ಗುಡಿಸಿಲೇ ಮೇಲು
- ಮುಸುಕಿನೊಳಗೆ ಗುದ್ದಿಸಿಕೊಂಡಂತೆ ಕದ್ದು ತಿಂದ ಹಣ್ಣು,
- ಪಕ್ಕದ ಮನೆ ಊಟ ಎಂದೂ ಹೆಚ್ಚು ರುಚಿ
- ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?
- ಹಳೆ ಚಪ್ಪಲಿ, ಹೊಸಾ ಹೆಂಡತಿ ಕಚ್ಚೊಲ್ಲ
- ರವಿ ಕಾಣದ್ದನ್ನು ಕವಿ ಕಂಡ
- ಕಾಲಿನದು ಕಾಲಿಗೆ; ತಲೆಯದು ತಲೆಗೆ
- ವಿದ್ಯೆ ಇಲ್ಲದವನು ಹದ್ದಿಗಿಂತಲೂ ಕಡೆ
- ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ?
- ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ
- ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದಂತೆ
- ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುತ್ತೆ
- ನರಿಗೆ ಹೇಳಿದರೆ ನರಿ ತನ್ನ ಬಾಲಕ್ಕೆ ಹೇಳಿತಂತೆ
- ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ
- ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೆ ?
- ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
- ತಾನೂ ತಿನ್ನ; ಪರರಿಗೂ ಕೊಡ
- ಗಂಡಸಿಗೇಕೆ ಗೌರಿ ದು:ಖ ?
- ನಗುವ ಹೆಂಗಸು, ಅಳುವ ಗಂಡಸು ಇಬ್ಬರನ್ನೂ ನಂಬಬಾರದು
- ಗುಡ್ಡ ಕಡಿದು ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ
- ಹನುಮಂತನೇ ಹಗ್ಗ ತಿನ್ನುವಾಗ ಪೂಜಾರಿಗೆ ಶ್ಯಾವಿಗೆ ಬೇಕಂತೆ
- ರತ್ನ ತಗೊಂಡು ಹೋಗಿ ಗಾಜಿನ ತುಂಡಿಗೆ ಹೋಲಿಸಿದರು
- ಗಾಜಿನ ಮನೇಲಿರೋವ್ರು ಅಕ್ಕಪಕ್ಕದ ಮನೇ ಮೇಲೆ ಕಲ್ಲೆಸೆಯಬಾರದು
- ಉಂಡೂ ಹೋದ; ಕೊಂಡೂ ಹೋದ
- ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಮಂದಿ ಅಂದನಂತೆ
- ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿತಂತೆ
- ಹಾಡಿದ್ದೇ ಹಾಡಿದ ಕಿಸಬಾಯಿ ದಾಸ
- ಹಸಿ ಗೋಡೆ ಮೇಲೆ ಹರಳು ಎಸೆದಂತೆ
- ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯಂತೆ
- ಕಳೆದುಕೊಂಡ ವಸ್ತುವನ್ನು ಕಳೆದುಹೋದ ಜಾಗದಲ್ಲೇ ಹುಡುಕು
- ಲಂಘನಮ್ ಪರಮೌಷಧಮ್
- ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ
- ತಲೆ ಗಟ್ಟಿ ಇದೆ ಅಂತ ಕಲ್ಲಿಗೆ ಹಾಯಬಾರದು
- ಹಳೇ ಗಂಡನ ಪಾದವೇ ಗತಿ
- ಹಬ್ಬದ ದಿನವೂ ಹಳೇ ಗಂಡನೇ ?
- ಕಳ್ಳನಿಗೊಂದು ಪಿಳ್ಳೆ ನೆವ
- ಅಳೋ ... ಮೇಲೆ ಗಳು ಬಿತ್ತು
- ಸನ್ಯಾಸಿ ಬೆಕ್ಕು ಸಾಕಿದ ಹಾಗೆ
- ತನ್ನ ಬೆನ್ನು ತಾನೇ ತಟ್ಟಿಕೊಂಡ ಹಾಗೆ
- ಪಕ್ಕದ ಮನೇಗೆ ಬಿದ್ದ ಬೆಂಕಿ ಬಿಸಿ ತನ್ನ ಮನೇಗೆ ಬೀಳೋವರೆಗೂ ತಾಕಲ್ಲ
- ಕರೆಯದವರ ಮನೆಗೆ ಕಳಸಗಿತ್ತಿಯಾಗು
- ಹಂಚಿದವರಿಗೆ ಹಲ್ಲು ಬಾಯಿ
- ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಳಂತೆ
- ದಾಕ್ಷಿಣ್ಯಕ್ಕೆ ಬಸಿರಾದರೆ ಹಡೆಯೋದು ಕಷ್ಟ
- ಹೊಸದರಲ್ಲಿ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದನಂತೆ
- ಕೈಲಾಗದೋನು ಮೈ ಪರಚಿಕೊಂಡ
- ಕಜ್ಜಿ ಹೋದರೂ ಕಡಿತ ಹೋಗಲಿಲ್ಲ
- ಆನೆ ದಾನ ಮಾಡಿದವನು ಸರಪಣಿಗೆ ಜಗಳಾಡುವನೆ ?
- ಎತ್ತು ಹೊರಬಲ್ಲ ಭಾರವನ್ನು ಕರು ಹೊರಬಲ್ಲುದೆ ?
- ದೊಡ್ಡವರು ಹೇಳಿದ ಹಾಗೆ ಮಾಡು; ಮಾಡಿದ ಹಾಗೆ ಮಾಡಬೇಡ
- ಏತಿ ಅಂದರೆ ಪ್ರೇತಿ .
- ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು ನಿನ್ನ ಗಳಗಂಟೆಗೆ
- ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಲ್ಲೋ ಮಾಮ ಅಂದ ಹಾಗೆ
- ಹಲವು ಸಲ ಸಾಯುವವನು ಹೇಡಿ,ವೀರಯೋಧನಿಗೊಂದೇ ಸಲ ಸಾವು
- ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
- ಮುಟ್ಟಿದೋರ ಮೇಲೆ ಬಿಟ್ಟೆ ನನ್ನ ಪ್ರಾಣ ಮಾಡೋರನ್ನು ಕಂಡರೆ ನೋಡು ನನ್ನ ಸಿರೀನ
- ಮೊಲ ಎಬ್ಬಿಸಿ ...ಕ್ಕೆ ಕೂತರು
- ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು; ಬೆಳೀತಾ ಬೆಳೀತಾ ದಾಯಾದಿಗಳು
- ಮಗೂನ ಚಿವುಟೋದು, ತೊಟ್ಟಿಲು ತೂಗೋದು
- ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು
- ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ
- ಆನೆಗೆ ಚಡ್ಡಿ ಹೊಲಿಸಿದ ಹಾಗೆ ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ
- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
- ಕೋತಿ ಕಜ್ಜಾಯ ಹಂಚಿದ ಹಾಗೆ.
- ಕಬ್ಬಿಣ ಕಾದಿರುವಾಗಲೇ ಬಡಿಯಬೇಕು
- ಅರ್ಧ ಆದ ಕೆಲಸವನ್ನು ಅರಸನಿಗೂ ತೋರಿಸಬೇಡ
- ಬೇಲಿಯೇ ಎದ್ದು ಹೊಲ ಮೇದಂತೆ
- ಪಾಪಿ ಧನ ಪ್ರಾಯಶ್ಚಿತ್ತಕ್ಕೆ
- ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ
- ಪಾಲಿಗೆ ಬಂದದ್ದು ಪಂಚಾಮೃತ
- ಕಂಡ ಕಳ್ಳ ಜೀವ ಸಹಿತ ಬಿಡ
- ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ
- ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಾಯ್ತು (ಮುದ್ದಣ)
- ಮಕ್ಕಳಿಲ್ಲದ ಮನೆಯಲ್ಲಿ ಅಜ್ಜ ಅಂಬೆಗಾಲಿಟ್ಟ
- ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡಿದಾರಕ್ಕೆ.
- ಮಕ್ಕಳಿಸ್ಕೂಲ್ ಮನೇಲಲ್ವೇ? (ಕೈಲಾಸಂ) '
- ಕೋ' ಅನ್ನೋದು ಕುಲದಲ್ಲಿಲ್ಲ ,'ತಾ' ಅನ್ನೋದು ತಾತರಾಯನ ಕಾಲದ್ದು
- ದೇವನೊಬ್ಬ ನಾಮ ಹಲವು
- ಸದಾಶಿವನಿಗೆ ಅದೇ ಧ್ಯಾನ
- ಬಡ ದೇವರನ್ನು ಕಂಡರೆ ಬಿಲ್ಪತ್ರೇನೂ 'ಭುಸ್' ಅಂತಂತೆ
- ಸಂದೀಲಿ ಸಮಾರಾಧನೆ
- ಎದ್ದರೆ ಆಳಲ್ಲ
- ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ
- ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು
- ಮಾಡೋದು ಅನಾಚಾರ ; ಮನೆ ಮುಂದೆ ಬೃಂದಾವನ
- ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ
- ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ?
- ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು
- ಗುಂಪಿನಲ್ಲಿ ಗೋವಿಂದ
- ನಾಯೀನ ತಗೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದರೆ ... ಕಂಡು ಇಳಿಬಿತ್ತು
- ಚೇಳಿಗೊಂದೇ ಬಸಿರು ; ಬಾಳೆಗೊಂದೇ ಗೊನೆ
- ಹೀನ ಸುಳಿ ಬೋಳಿಸಿದರೂ ಹೋಗೋದಿಲ್ಲ
- ಮಾಡಿದರೆ ಮನೆ ; ಹೂಡಿದರೆ ಒಲೆ
- ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಹಾಗೆ
- ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿಗೆ
- ಕಡ್ಡೀನ ಗುಡ್ಡ ಮಾಡು.
- ಅತ್ತು ಹೆದರಿಸೋನೊಬ್ಬ
- ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು
- ತಾನು ಕಳ್ಳ ,ಪರರ ನಂಬ
- ಓಡಿ ಹೋಗೋ ಬಡ್ಡಿ ಹಾಲು ಹೆಪ್ಪಿಟ್ಟಾಳೆ?
- ಗಡ್ಡಕ್ಕೆ ಬೇರೆ ಸೀಗೇಕಾಯಿ
- ನೆಂಟರಿಗೆ ದೂರ ; ನೀರಿಗೆ ಹತ್ತಿರ
- ಕುಲ ಸೋಸಿ ಹೆಣ್ಣು ತಗೊಂಡು ಬಾ ; ಜಲ ಸೋಸಿ ನೀರು ತಗೊಂಡು ಬಾ
- ಬಾಯಿದ್ದೋರು ಬರಗಾಲದಲ್ಲೂ ಬದುಕಿದರು
- ಹೆದರಿದವರ ಮೇಲೆ ಕಪ್ಪೆ ಎಸೆದರು
- ಅಳಿಯ ಮನೆ ತೊಳಿಯ
- ನಾಯಿ ಮೊಲೇಲಿ ಖಂಡುಗ ಹಾಲಿದ್ದರೇನು, ದೇವರಿಗಿಲ್ಲ ದಿಂಡರಿಗಿಲ್ಲ
- ಮಾಘ ಕಾವ್ಯ ಮಗನಿಗೆ ಬೇಡ
- ಮುಂದೆ ಬರೋ ಕೋಡಿಗಿಂತ ಹಿಂದೆ ಬರೋ ಬಾಲಾನೇ ವಾಸಿ
- ಪಾಯಸ ಮಾಡಿ ನಾಯಿ ಬಾಲದಲ್ಲಿ ತೊಳಸಿದ ಹಾಗೆ
- ಆತುರಕ್ಕೆ ಅಜ್ಜಿ ಮೈನೆರೆದಳು
- ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗತ್ತೆ
- ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡಿತು
- ದನ ತಿನ್ನುವವನಿಗೆ ಗೊಬ್ಬರದ ಆಣೆ
- ಪಾಪಿ ಚಿರಾಯು
- ಕಣ್ಣು ಕುರುಡಾದರೆ ಬಾಯಿ ಕುರುಡೇ
- ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ
- ಚಿನ್ನದ ಸೂಜೀಂತ ಕಣ್ಣು ಚುಚ್ಚಿಕೊಳ್ಳುವುದಕ್ಕೆ ಆಗುತ್ತದೆಯೇ?
- ಹಣ ಅಂದರೆ ಹೆಣಾನೂ ಬಾಯಿ ಬಿಡುತ್ತದೆ
- ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು
- ಅಹಂಕಾರಕ್ಕೆ ಉದಾಸೀನವೇ ಮದ್ದು.
- ಎಲ್ಲಾ ಜಾಣ, ತುಸು ಕೋಣ.
- ಹುಚ್ಚು ಬಿಟ್ಟ ಹೊರತು ಮದುವೆ ಆಗೋಲ್ಲ; ಮದುವೆ ಆದ ಹೊರತು ಹುಚ್ಚು ಬಿಡಲ್ಲ
- ಬೈದು ಹೇಳಿದವರು ಬದುಕಕ್ಕೆ ಹೇಳಿದರು
- ನಗೋ ಗಂಡಸನ್ನೂ ಅಳೋ ಹೆಂಗಸನ್ನೂ ನಂಬಬೇಡ
- ವ್ರತ ಕೆಟ್ಟರೂ ಸುಖ ಪಡಬೇಕು
- ಅಗ್ಗದ ಆಸೆಗೆ ಗೊಬ್ಬರ ತಗೊಂಡರು
- ಅತ್ತೂ ಕರೆದೂ ಔತಣ ಹೇಳಿಸಿಕೊಂಡರು
- ನೆಚ್ಚಿನೆಮ್ಮೆ ಕೋಣನನ್ನೀಯಿತು
- ಬಸವನ ಹಿಂದೆ ಬಾಲ, ಸೂಜಿ ಹಿಂದೆ ದಾರ
- ಕುದುರೆ ಕಂಡರೆ ಕಾಲುನೋವು
- ಖಂಡಿತ ವಾದಿ, ಲೋಕ ವಿರೋಧಿ
- ಅತ್ತೆ ಆಸ್ತೀನ ಅಳಿಯ ದಾನ ಮಾಡಿದ
- ರಾಮ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ
- ಆಡು ಮುಟ್ಟದ ಸೊಪ್ಪಿಲ್ಲ
- ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ
- ಹಣ್ಣು ತಿಂದವನು ನುಣುಚಿಕೊಂಡ; ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ
- ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ ಜೀನ ಗಳಿಸಿದ ; ಜಾಣ ತಿಂದ
- ಶೆಟ್ಟಿ ಬಿಟ್ಟಲ್ಲೆ ಪಟ್ಣ
- ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ
- ಹಾವು ಸಾಯಬಾರದು ;ಕೋಲು ಮುರಿಯಬಾರದು
- ಕಾಸಿಗೊಂದು,ಕೊಸರಿಗೆರಡು
- ಉ.. ಕುಡಿದರೂ ತನ್ನಿಚ್ಚೇಯಿಂದ ಇರಬೇಕು
- ಸ್ವತಂತ್ರವೋ, ಸ್ವರ್ಗಲೋಕವೋ
- ಊಟ ತನ್ನಿಚ್ಚೆ, ನೋಟ ಪರರಿಚ್ಚೆ
- ತಾಳಿದವನು ಬಾಳಿಯಾನು
- ಲಾಲಿಸಿದರೆ ಮಕ್ಕಳು ; ಪೂಜಿಸಿದರೆ ದೇವರು
- ಹುಚ್ಚಲ್ಲ, ಬೆಪ್ಪಲ್ಲ, ಶಿವಲೀಲೆ
- ಅಳಿಯ ಅಲ್ಲ, ಮಗಳ ಗಂಡ
- ಹೊಟ್ಟೇಲಿರೋ ಸಿಟ್ಟು ರಟ್ಟೇಲಿಲ್ಲ
- ತಲೆಗೆಲ್ಲಾ ಒಂದೇ ಮಂತ್ರವಲ್ಲ
- ಬಾಲ ಸುಟ್ಟ ಬೆಕ್ಕಿನ ಹಾಗೆ
- ಹಿತ್ತಿಲ ಗಿಡ ಮದ್ದಲ್ಲ
- ಸರಿ ಸರಿಯಾಗಿದ್ರೆ, ಪರಿ ಪರಿ ನೆಂಟರು
- ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ, ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು
- ಹಾಕು ಮಣೆ, ನೂಕು ಮಣೆ, ತಳ್ಳು ಮಣೆ, ಯಾಕ್ಮಣೆ
- (ನೀನು)ಮೊಳ ಬಿಟ್ಟರೆ,(ನಾನು) ಮಾರು ಬಿಡುತ್ತೇನೆ
- ಕರೆದು ಹೆಣ್ಣು ಕೊಟ್ಟರೆ ಮಲರೋಗ ಬಂತಂತೆ.
- ಚೇಳಿಗೆ ಪಾರುಪತ್ಯ ಕೊಟ್ಟರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ.
- ದಿನಾ ಸಾಯೋರಿಗೆ ಅಳೋರ್ ಯಾರು?
- ಊರು ಅಂದ ಮೇಲೆ ಹೊಲಗೇರಿ ಇಲ್ಲದೆ ಇರುತ್ತದೆಯೇ?
- ಮೇಯುವುದಕ್ಕೆ ಮುಂದೆ ;ಮೀಯುವುದಕ್ಕೆ ಹಿಂದೆ
- ಕಡ್ಡೀನ ಗುಡ್ಡ ಮಾಡು
- ನವಿಲಾಡಿತು ಅಂತ ಕೆಂಬೂತ ಪುಕ್ಕ ತೆರೆಯಿತು
- ಆಟಕ್ಕುಂಟು,ಲೆಕ್ಕಕ್ಕಿಲ್ಲ
- ಹಿರೀಮಗ ಆಗಬೇಡ, ಹಿತ್ತಿಲ ಕದ ಆಗಬೇಡ
- ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ
- ಆಡಿಕೊಳ್ಳೋರ ಮುಂದೆ ಎಡವಿ ಬಿದ್ದ ಹಾಗೆ
- ಹಣವಿದ್ದ ಗಂಡನನ್ನು ಮದುವೆಯಾದರೂ ಋಣವಿದ್ದಷ್ಟೇ ಬಾಳು
- ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ
- ತಾಮ್ರದ ಕಾಸು ತಾಯಿ ಮಕ್ಕಳನ್ನು ಬೇರೆ ಮಾಡ್ತಂತೆ
- ಗಂಡ ಸರಿಯಿದ್ರೆ ಗುಂಡೂ ಪಾವನ
- ಬೆಳ್ಳಗಿರೋದೆಲ್ಲಾ ಹಾಲಲ್ಲ ಹೊಳೆಯುವುದೆಲ್ಲಾ ಚಿನ್ನವಲ್ಲ
- ಹಾಸಿಗೆ ಇದ್ದಷ್ಟು ಕಾಲು ಚಾಚು
- ಉಣ್ಣು ಬಾ ಅಂದ್ರೆ, ಇರಿ ಬಾ ಅಂದ್ರಂತೆ
- ಇರುವೆಗೆ ಇರುವೆ ಮೈ ಭಾರ, ಆನೆಗೆ ಆನೆ ಮೈ ಭಾರ
- ಮನಸ್ಸಿದ್ದರೆ ಮಾರ್ಗ
- ತಲೆಗೆ ಬಿದ್ದ ನೀರು ಕಾಲಿಗೆ ಬೀಳದೆ ಇರುತ್ತದೆಯೇ?
- ಅದ್ನೇ ಉಂಡೇನ್ ಅತ್ತೆಮ್ನೋರೇ, ಕದ ತೆಗೀರಿ ಮಾವ್ನೋರೇ ಅಂದ್ರಂತೆ
- ಬಡವೆ ಸೀರೆ ಉಡದೆ ಮಾಸಿತು
- ಆಕಾಶಕ್ಕೆ ಏಣಿ ಹಾಕಿದ ಹಾಗೆ
- ಸೇರಿಗೆ ಸವ್ವಾಸೇರು
- ಒಂದಕ್ಕೆರಡು ದಂಡ, ಹೆಂಡಕ್ಕೆ ರಾಗಿ ದಂಡ
- ಹುಟ್ಟು ಗುಣ ಸುಟ್ಟರೂ ಹೋಗಲ್ಲ
- ದೇವರಿಲ್ಲದ ಗುಡಿ;ಯಜಮಾನನಿಲ್ಲದ ಮನೆ ಎರಡೂ ಒಂದೇ
- ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
- ಅಷ್ಟು ಕಂಡ್ಯ ಅಮಾಸೆ ಕಂಡ್ಯ ; ಹೊಟ್ಟೆ ನೋವಲ್ಲಿ ಕಂಡ್ಯ ಹಾಲು ಅನ್ನವ
- ನಾಯಿ ಹೆಸರು'ಸಂಪಿಗೆ'ಅಂತ
- ನಾಯಿಗೆ ವಯಸ್ಸಾದ್ರೆ ಅಜ್ಜ ಅಂತಾರಾ?
- ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ, ಆತ ಹೆಂಡ್ತಿನ ಬಿಟ್ಟು ಆರು ವರ್ಷ ಆಗಿತ್ತಂತೆ.
- ಉತ್ತರನ ಪೌರುಷ ಒಲೆ ಮುಂದೆ;ನಿನ್ನ ಪೌರುಷ ನನ್ನ ಮುಂದೆ
- ಕೊಟ್ಟೋನು ಕೋಡಂಗಿ;ಇಸಕೊಂಡೋನು ಈರಭದ್ರ
- ಹಲ್ಲಿದ್ರೆ ಕಡಲೆ ಇಲ್ಲ;ಕಡಲೆ ಇದ್ರೆ ಹಲ್ಲಿಲ್ಲ
- ಗಂಟೂ ಹೋಯ್ತು;ನಂಟೂ ಹೋಯ್ತು
- ಅಪ್ಪನ್ನೇ ಅಪ್ಪ ಅನ್ನದೋನು, ಚಿಕ್ಕಪ್ಪನ್ನ ಅಪ್ಪಾ ಅಂತ ಕರೀತಾನಾ?
- ಊರಿಗೊಂದು ದಾರಿಯಾದ್ರೆ, ಎಡವಟ್ಟಂಗೆ ಅವನದ್ದೇ ದಾರಿ
- ಹೊಟ್ಟೆ ತುಂಬಿದ ಮೇಲೆ ಹಿಟ್ಟೂ ಕಲ್ಲು
- ಒನಕೆ ಮುಂಡು ಚಿಗುರಿದಂತೆ
- ಹುಣಿಸೆ ಮರ ಮುದಿಯಾದ್ರೂ ಕಾಯಿ ಹುಳಿ ಹೋಗಲ್ಲ
- ಮೂರೂ ಬಿಟ್ಟೋನು, ಊರಿಗೆ ದೊಡ್ಡೋನು
- ಭಾವಿಗೆ ಬಿದ್ರೆ, ಸಾಲಿಗ್ರಾಮ ಸಿಗ್ತಂತೆ
- ನಾಯಿಗೆ ಹೊತ್ತಿಲ್ಲ; ನಿಲ್ಲಕ್ಕೆ ನೆಲೆಯಿಲ್ಲ
- ಯಂಕ, ಸೀನ, ನೊಣ ಅಂತ ಮನೇಲಿ ಮೂರೇ ಜನ ಕಂಡೋರ ಮನೆ ರೊಟ್ಟಿಗೆ ಗಿಣ್ಣು ಹಾಲು ಕಾಯಿಸಿದರಂತೆ
- ತುಂಬೆ ಗಿಡಕ್ಕೆ ಏಣಿ ಹಾಕಿದಂತೆ
- ಸಾವಿರ ಉಳಿ ಪೆಟ್ಟು, ಒಂದು ಚಿತ್ತಾರ
- ಕಾಣದಿರೋ ದೇವರಿಗಿಂತ ಕಾಣೋ ಭೂತಾನೇ ವಾಸಿ
- ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು
- ಹಿಟ್ಟು ಹಳಸಿತ್ತು; ನಾಯಿ ಹಸಿದಿತ್ತು
- ಬಡ್ಡಿ ಬಾಯಿಗಂಜ್ತೀಯೋ, ದೊಡ್ಡೆತ್ತಿನ ಕೋಡಿಗಂಜ್ತೀಯೋ
- ತಾಯೀನೇ ತಿಂದೋಳು, ಅತ್ತೇನ ಬಿಟ್ಟಾಳೆಯೇ?
- ಒಂದು ಬಿಟ್ಟು ಇನ್ನೊಂದು ಕಟ್ಕೊಂಡ್ರಂತೆ
- ಸನ್ಯಾಸಿ ಸಂಸಾರ ಕಟ್ಟಿಕೊಂಡ ಹಾಗೆ
- ಶಿಸ್ತುಗಾರ ಪುಟ್ಟಶಾಮಿ ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ
- ತಾಳಕ್ಕೆ ತಕ್ಕ ಮೇಳ
- ಕಂಡೋರ ಆಸ್ತಿಗೆ ನೀನೇ ಧಣಿ
- ಕೋಮಟಿ ಕೊಡ ;ಜೈನಿಗ ಬಿಡ
- ನಿನ್ನ ಹಿತು(ಮುದ್ದು), ನನ್ನ ತಿಂತು
- ಬೆಟ್ಟ ಮಹಮ್ಮದನ ಬಳಿ ಬರಲ್ಲ, ಮಹಮ್ಮದನೇ ಬೆಟ್ಟದ ಬಳಿ ಹೋಗಬೇಕು
- ಹುಲಿಗೆ ಹುಣ್ಣು ಎದ್ದ ಹಾಗೆ
- ಹಂಚು ಕಾಣದ ಕೈ ಕಂಚು ಕಾಣ್ತು
- ಬರೀ ಕೈಗಿಂತ ವಾಸಿ ಹಿತ್ತಾಳೆ ಕಡಗ
- ಮನೇಲಿ ಇಲಿ, ಬೀದೀಲಿ ಹುಲಿ
- ಸೂಳೆಗೆ ಮದುವೆ ಮಾಡಿದ ಹಾಗೆ
- ಗುರುವಿಗೇ ತಿರುಮಂತ್ರ
- ಬೆಳಗೂ ಹೆತ್ತ ಮಗೂನ ನಾಯಿ ಕೊಂಡೊಯ್ಯಿತಂತೆ
- ಎದ್ದೋಗೋ ಮಾತು ಬಿದ್ದೋಗಲಿ ಆಡೋಕಾಗಲ್ಲ, ಅನುಭವಿಸಕ್ಕಾಗಲ್ಲ
- ಹಾಲಿದ್ದಾಗ ಹಬ್ಬ ;ನೀರಿದ್ದಾಗ ನೇಮ
- ಅಳಿಲ ಸೇವೆ, ಮಳಲ ಭಕ್ತಿ
- ಕೆಟ್ಟ ಅಡಿಗೆ ಅಟ್ಟವಳೇ ಜಾಣೆ
- ಕಿಡಿ ಇಲ್ಲದೆ ಬೆಂಕಿಯಿಲ್ಲ ;ಕಾರಣ ಇಲ್ಲದೆ ಜಗಳವಿಲ್ಲ
- ಗಂಡಸು ಕೂತು ಕೆಟ್ಟ ;ಹೆಂಗಸು ತಿರುಗಿ ಕೆಟ್ಟಳು
- ಹತ್ತಿರಕ್ಕೆ ಬಂದರೆ ಹಡಿಕ್ ನಾತ : ದೂರದಲ್ಲಿದ್ದರೆ ಘಮಘಮ
- ಹೂ-ದವರು ಯಾರು ಅಂದರೆ ಮಾಸಿದ ಸೀರೆಯವರು.
- ಅಟ್ಟದಿಂದ ಬಿದ್ದವನನ್ನು ದಡಿಗೆ ತೆಗೆದುಕೊಂಡು ಚಚ್ಚಿದರು.
- ಬಿಟ್ಟಿ ಬಂದದ್ದಾದರೆ ನನಗೂ ಇರಲಿ,ನಮ್ಮ ತಾತಂಗೂ ಇರಲಿ.
- ಸಾಯ್ತೀನಿ ಸಾಯ್ತೀನಿ ಅಂದೋಳು ಸಾವಿರ ಮುದ್ದೆ ನುಂಗಿದಳಂತೆ.
- ಸಾಯ್ತೀನಿ ಸಾಯ್ತೀನಿ ಅಂತಾ ಸಾವಿರ ಕೋಳಿ ತಿಂದಳಂತೆ
- ಸಂತೆ ಸೂಳೆ ನೆಚ್ಚಿಕೊಂಡು ಮನೆ ಹೆಂಡಿರನ್ನ ಬಿಟ್ಟರಂತೆ.
- ಮನೆ ದೇವರನ್ನ ಮೂಲೆಗಿಟ್ಟು ಬೆಟ್ಟದ ದೇವರಿಗೆ ಬುತ್ತಿ ಹೊತ್ತಂತೆ.
- ಅಡಿ ಅನ್ನಕ್ಕೆ ಅವಳೇ ಇಲ್ಲೆ ; ಪಿಳ್ಳೆ ಪೇರು ರಾಮಕೃಷ್ಣ !( ಇದು ತಮಿಳು ಭಾಷೆಯ ಗಾದೆಯಾದರೂ ಕನ್ನಡಿಗರಲ್ಲಿ ಹೆಚ್ಚು ಪ್ರಚಲಿತವಿದೆ)
- ದೇಶ ಸುತ್ತು ; ಕೋಶ ಓದು.
- ಹೇಳೋರು ಹೆಡ್ಡರಾದರೆ ,ಕೇಳೋರು ಕಿವುಡರೇ?
- ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ
- ಇದ್ದದ್ದನ್ನು ಇದ್ದಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ
- ತುಂಬಿದ ಕೊಡ ತುಳುಕುವುದಿಲ್ಲ
- ಎಲ್ಲರ ಮನೆಯ ದೋಸೆಯೂ ತೂತೆ !
- ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರಂತೆ
- ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯಂತೆ
- ಆಳ್ ಮೇಲ್ ಆಳ್ ಬಿದ್ದು ಗೋಣು ಬರಿದಾಯ್ತು
- ಉತ್ತು ಬಿತ್ತಿದ ಭತ್ತವಾದರೂ ಮಳೆಯಿಲ್ಲದೆ ಮೊಳೆಯದು
- ಮನೇ ಯಜಮಾನ (ಮನೆಯೊಡೆಯ) ಕುಂತು ಹಾಳು
- ಅರಣೆ (= ಹಾವು ರಾಣಿ) ಕಡಿದರೆ ಭರಣಿ (=ಪಿಂಗಾಣಿ ಮಡಿಕೆ) ಮದ್ದು ಸಾಲದು
- ಅಪ್ಪಂಥೋನಿಗೆ ಇಪ್ಪಂತ್ತೊಂದು ಕಾಯಿಲೆ
- ಸಾಲ ಕೊಳ್ಳುವಾಗ ಒಂದು ರಾಗ, ಸಾಲ ಹೊಳ್ಳಿ ಕೊಡುವಾಗ ನಾನಾ ರಾಗ
- ಬಾಳಿ ಬದುಕಿದವ ಕಲಿ,
- ಬಾಳಲಾರದವ ಪಾಠ ಕಲಿತ
- ತಳಮಳ ತೀರಲಿಲ್ಲ, ಕಳವಳ ಕಳಿಯಲಿಲ್ಲ
- ಮೋಕ್ಷಮಂತ್ರ ತಿಳಿದವನಿಗೆ ವೇದಮಂತ್ರದ ಗೊಡವೆಯೆ?
- ಕನಿಗೇಡಿಗೆ(ಸ್ವಾರ್ಥಿಗೆ) ಗತಿ ಇಲ್ಲ
- ಅರವಲ್ಲದ್ದು (ಧರ್ಮವಲ್ಲದ್ದು) ಮಾಡಿದರೂ ತರವಲ್ಲದ್ದು ಮಾಡಬಾರದು
- ಹಗೆ ಬಿತ್ತಿ ಬೆಂಕಿ(ಹೊಗೆ) ಬೆಳೆದ
- ಬರೀ ಮಾತಾಡಿ ಬೈಯ್ಯಿಸಿಕೊಂಡ
- ಒಪ್ಪದಾ ಮಾತಾಡಿ ಕೋಪಕ್ಕೆ ತುತ್ತಾದ
- ಹಸನಾದ ಮಾತಿಗೆ ಜೀವ ಬೆಸನಾಯ್ತು
- ಬಿಟ್ಟವರ ಕಂಡು ಬಿಟ್ಟು ಬಾಳುಗೆಟ್ಟ
- ಚಿತ್ತದ ಕಳವಳ ನಿಲ್ಲಿಸಿದವರೇ ಉತ್ತಮರು
- ಸಿರಿ ಬಂದ ಕಾಲದಲಿ ಕರದಲಿ ಧರ್ಮ ಬೇಕು
- ಎತ್ತ ಹೋದರೂ ಬಿಡದು ಒತ್ತಿ ಕಾಡುವ ವಿಧಿ
- ಬರೋಳನ್ನು ನೆಚ್ಚಿ ಇರೋಳನ್ನು ಬಿಟ್ಟ
- ಬುದ್ಧಿ ಉಳ್ಳವನಿಗೆ ಕರ್ಮ ತಿದ್ದಿ ಕೊಡುತಿತ್ತು
- ಬೆನ್ನಹಿಂದೆ ಬಿದ್ದು (ಓಡಿ)ಬನ್ನ ಪಟ್ಟ
- ತಕ್ಕುದನ್ನು ಅರಿಯದ ಓದು ಲಕ್ಷ ಓದಿದರೇನು
- ಬಡವನಿಗೆ ಉಳಿದಷ್ಟೆ ಅಭಿಮಾನ
- ಬಂದ ಅಥಿತಿಗೆ ಅನ್ನ ಇಕ್ಕದ ಬದುಕು ಯಾತಕ್ಕು ಬೇಡ
- ಬಡವ ನೀ ಸೆಣಸಿ ಕೆಡಬೇಡ
- ಸರಿಯಾದ ಎಚ್ಚರಿಕೆ ಇಲ್ಲದೆ ಹರಕೆಯ ಕುರಿಯಾದ
- ಬಂಧುಗಳಿಲ್ಲದಿರೊ ಬಡತನ ಎಂದಿಗೂ ಬೇಡ
- ರಸಿಕನ ನುಡಿ ತಿಂಗಳ ಬೆಳಕಿನಂತೆ
- ಎಂಜಲ ತಿಂದರೂ ಅಂಜದೆ ತಿನ್ನು
- ಅಂಜುತ್ತಾ ಅಳುಕುತ್ತಾ ತಿಂದ ಅಮೃತ ನಂಜು
- ಒಳ್ಳಿಹ ಬಳ್ಳಿ ಕಳ್ಳಿಯ ಹಬ್ಬಿತು
- ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ
- ಮಾಡಿದ ಕರ್ಮ ಹಿಡಿದೊಯ್ಯದೆ ಬಿಡದು
- ಜೀವ ಜೀವವ ತಿಂದು ಜೀವಿಸುತಿದೆ
- ಜಗವೆಲ್ಲ ನಾ ಬಲ್ಲೆ ಅನ್ನೊ ಮಾತು ಎಲ್ಲರಿಗು ಸಲ್ಲದು
- ತನ್ನ ತಾ ಬಲ್ಲವನೆ ಬಲ್ಲವ
- ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು
- ಇಟ್ಟ ವಿಭೂತಿ ಪಟ್ಟದಂತೆ
- ಇಟ್ಟ ವಿಭೂತಿ ಅಳಿದರೆ ಚಟ್ಟ ಹತ್ತಿದಂತೆ
- ಬಾಲೇರ ಮನಸ್ಸು ನೆಲೆಯಿಲ್ಲ
- ಹಬ್ಬಕ್ಕೆ ಹೋಗಿ ತಬ್ಬಿಬ್ಬನಾದ
- ಕೆರೆಗೆ ತೊರೆ ಕೂಡಿ ಸರೋವರವಾಯ್ತು
- ತನ್ನ ತಾ ತನ್ನಿಂದಲೇ ಅರಿಯಬೇಕು
- ಕಡಲಲ್ಲಿ ಪುಟಿದ ತೆರೆ ಕಡಲಲ್ಲೇ ಕರಗಿ ಹೋಯ್ತು
- ಬಣ ಬಣ ಬೆಳಕು ಹರಿದಾಗ ಕತ್ತಲು
- ಎತ್ತಲೊ ಸಮತೆ ತೊಟ್ಟು(=ಧರಿಸಿ) ಪದವಿ ಮುಟ್ಟು ಇದ್ದೂ
- ಉಣ್ಣದವನ ಬಾಯಲ್ಲಿ ಕಡೆಗೆ ಮಣ್ಣು ಬಿತ್ತು
- ಇದ್ದ ಕಾಲದಲ್ಲಿ ಅಟ್ಟುಣ್ಣ ಬೇಕು
- ದೀನನ ಬೇಡಿ ಬಳಲಿದರೆ ಆತ ಏನು ಕೊಟ್ಟಾನು?
- ಅಲ್ಲದವನ ಒಡನಾಟ ಮೊಳಕೈಗೆ ಕಲ್ಲು ಬಡಿದಂತೆ
- ಸುಳ್ಳನ ಮಾತು ಕೆಸರೊಳಗೆ ಮುಳ್ಳು ತುಳಿದಂತೆ
- ಹೇಮಗೇಡಿ ನೇಮ ಬೆಳಗಿದ ಭಂಗಿ
- ರಸ ನೆತ್ತಿಗೇರಿ ಬಿಂಗಿಯಂತೆ ಆಡಿದ
- ಊಡದ ಆವಿಗೆ ಉಣ್ಣದ ಕರುವ ಬಿಟ್ಟಂತೆ
- ದೈವದ ಸೊಲ್ಲು ಹರಟುವಾತ ಭವದೊಳಗೆ ತೇಲಾಡುತಿದ್ದ
- ಉರವಣಿಸಿ ಬರೋ ದುಃಖಕ್ಕೆ ಪರಿಣಾಮ ವೈರಿ
- ಗುಣಗೇಡಿ ಒಡನಾಟ ಯಾವಾಲು ದುಃಖದೇಲ್ ಇದ್ದಂತೆ
- ಮಾತಿಗೊಂದು ಮಾತು ಬಂತು ವಿಧಿ ಬಂದು ಆತುಕೊಣ್ತು
- ಮೆಲ್ಲಗೆ ಹರಿಯೋ ನೀರು ಕಲ್ಲ ಕೊರೆದಿತ್ತು
- ಮಾತಿಂದಲೇ ನಗೆನುಡಿ ಮಾತಿಂದಲೇ ಹಗೆ
- ಮಾತಿಂದಲೇ ಉಪಚಾರ ಮಾತಿಂದಲೇ ಅಪಚಾರ
- ಬನ್ನ ಪಟ್ಟುಣ್ಣೋ ಬಿಸಿ ಅನ್ನಕ್ಕಿಂತ ತಂಗುಳೇ ಲೇಸು
- ತನ್ನ ತಾ ತಿಳಿದು ತಾನು ತಾನಾದುದೆ ಉನ್ನತಿ
- ಬಸುರಲ್ಲಿ ಬಂದ ಕೂಸು ಮುದ್ದು
- ಕೊಂಡು ಕೊಟ್ಟದ್ದೂ ಇಲ್ಲ ಹಂಚಿ ಉಂಡದ್ದೂ ಇಲ್ಲ ಸ್ವರ್ಗ ಬೇಕು ಅಂದ
- ಬಚ್ಚಿಟ್ಟ ಆಸ್ತಿ ಹೊಂಚುತ್ತಿದ್ದವರ ಪಾಲಾಯ್ತು
- ನಿದ್ದೆ ಗೈಯೋನ ಹೊತ್ತು ನುಂಗ್ತು
- ಬಡವರ ಮಾತು ನುಡಿ ನುಡಿಗೂ ಬೇಸರ
- ಅಂಬಲಿಗೆ ಗತಿ ಇಲ್ಲದವ ಕಟ್ಟಾಣಿ ರಂಬೆಯ ಬಯಸಿದ
- ಒಪ್ಪೊತ್ತು ಕೂಳು ತಪ್ಪಿ ಕಣ್ಣು ಕಾಣಾಕ್ಕಿಲ್ಲ ಕಿವಿ ಕೇಳಾಕ್ಕಿಲ್ಲ
- ಸೊಕ್ಕುವುದು ಕೆಕ್ಕರಿಸಿ ನೋಡುವುದು ಸೇರಕ್ಕಿಯ ಗುಣ
- ಭಂಗಿ ರಸ ನೆತ್ತಿಗೇರಿ ಬಿಂಗಿಯಂತಾದ ರಸವಳ್ಳಿ
- ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ
- ಕುಲಗೇಡಿ ಮಗ ಹುಟ್ಟಿ ಕುಲಕ್ಕೇ ಮಸಿ ಬಳಿದ
- ಹೊತ್ತು ಮೀರಿದ ಮಾತು ತನಗೇ ಕುತ್ತು ತಂತು
- ಇದ್ದುದ ಉಣ್ಣದವನ ಬಾಯಾಗೆ ಕಡೆಗೆ ಮಣ್ಣು ಬಿತ್ತು
- ಪರರ ಹಂಗಿಸಿ ಮಂಗ ಅನಿಸಿಕೊಂಡ
- ಹೆಣ್ಣಿಂದ ರಾವಣ ಕೆಟ್ಟ ಮಣ್ಣಿಂದ ಕೌರವ ಕೆಟ್ಟ
- ಬೋನದ ಬುತ್ತಿ ತಪ್ಪಿ ಚಿತ್ತವಲ್ಲಭೆಯನ್ನು ಮರೆಸಿತ್ತು
- ಕಲ್ಲಿನಲ್ಲಿ ಕಳೆಯ ನಿಲ್ಲಿಸಿದ ಗುರುವಿನ ಸೊಲ್ಲಿನಲ್ಲೇ ದೈವ
- ಭೋಗಿ ಭೋಗದಲ್ಲಿ ನೆರೆದು ರೋಗಿಯಾದ, ಯೋಗಿ ಯೋಗದಲ್ಲಿ ನೆರೆದು ಯೋಗವಾದ
- ಅರಿತೂ ಮಾಡಿದ ಪಾಪ ವಜ್ರದ ಸೆರೆಯಂತೆ
- ತಾ ನೊಂದಂತೆ ಬೇರೇರ ನೋವನ್ನೂ ಅರಿಯಬೇಕು
- ಹೊಲಬನರಿಯದ (ರೀತಿಯಲ್ಲದ) ಮಾತು ತಲೆ ಬೇನೆ: ಹೊಲಬನರಿತು ನುಡಿದ ಮಾತು ಫಲ ಪಕ್ವವಾದಂತೆ
- ಪ್ರಸ್ತಕ್ಕಿಲ್ಲದ ಮಾತು ಹತ್ತು ಸಾವಿರವಿದ್ದೇನು
- ಸಾಲ ಕೊಳ್ಳುವಾಗ ಹಾಲು ಕುಡಿದಂತೆ, ಸಾಲ ತಿರುಗಿ ಕೊಡುವಾಗ ಕಿಬ್ಬದಿ ಕೀಲು ಮುರಿದಂತೆ
- ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು
- ಅಕ್ಕಸಾಲಿಗನ ಮಗ ಚಿಮ್ಮಟ ಹಿಡಿಯುತ್ತಲೇ ಹೊನ್ನ ಕದ್ದ
- ಸಿದ್ದಿಗಿಂತ ಬಲವಿಲ್ಲ ಬುದ್ಧಿಗಿಂತ ಹಿರಿದಿಲ್ಲ
- ಅಂಗಾಂಗದಲ್ಲಿ ಪಾಪ ಮಡಗಿಕೊಂಡು ಗಂಗೇಲಿ ಮಿಂದು ಬಂದ
- ಮೋಕ್ಷಕ್ಕೆ ಜ್ಞಾನ ಬೇಕು ಯೋಗಕ್ಕೆ ಧ್ಯಾನ ಬೇಕು
- ಅರುಗೆಟ್ಟ ನಿದ್ದೆ (=ಅರಿವಿಲ್ಲದೆ ಮಲಗಿರುವುದು) ಇರಗೆಟ್ಟು (=ಇರವು ಗೆಟ್ಟು) ಸತ್ತಂತೆ
- ಮದ್ದು ಬುದ್ಧಿ ದೈವ ಒಲ್ಲದೆ ತಿದ್ದವು
- ಮಂತ್ರ ತಂತ್ರ ದೈವ ಒಲ್ಲದೆ ತನಗೆ ಸ್ವಂತವಲ್ಲ
- ದೈವ ಒಲ್ಲದೆ ಆಗೋದಿಲ್ಲ ದೈವ ಒಲಿದರೆ ಹೋಗೋದಿಲ್ಲ
- ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ,
- ಓದಿದರ ಅರಿವು ಮೇದ ಕಬ್ಬಿನ ರಸ
- ವಿದ್ಯೆ ಇಲ್ಲದವನ ಮೋರೆ ಹಾಳೂರ ಹದ್ದಿನಂತೆ
- ವಿದ್ಯೆ ಬಲ್ಲವ ಇದ್ದಲ್ಲು ಸಲ್ಲುವ ಹೋಗಿದ್ದಲ್ಲು ಸಲ್ಲುವ
- ವಿದ್ಯೆ ಬಲ್ಲವ ಎಲ್ಲಿದ್ದರು ಸಲ್ಲುವ
- ಕುಚುಕು ಬುದ್ಧಿ ಹೊಕ್ಕವನು ಕೆಟ್ಟ
- ಒಪ್ಪವಿಲ್ಲದವಳ ನಗೆ ನುಡಿ ನೋಟ ಎಂದೂ ಸಪ್ಪಗೆ
- ಒಂದೊಂದು ಕಾಲಕ್ಕೆ ಒಂದೊಂದು ಪರಿ
- ಸಿರಿತನ ಇರೂತನ ಹಿರಿತನ ಸಿರಿಹೋದ ಮರುದಿನ ಕಿರಿತನ
- ಸಿರಿತನ ಇರೂತನ ಪಿರಿಪಿರಿ ಸಿರಿಹೋದ ಮರುದಿನ ಕಿರಿಕಿರಿ
- ಸಿರಿತನ ಇರೂತನ ಹಿರಿತನ ಘನ ಸಿರಿಯಣ್ಣ
- ಉಳ್ಳನಕ ಹಿರಿಯಣ್ಣ ಇಲ್ಲಾದಗ ನಡಿಯಣ್ಣ
- ಎಂಟು ಹೊನ್ನು ಘನವಾದ ನಂಟು
- ತಂತು ಕೂಟಸ್ಥ ಇಲ್ದೋನ ಓದು ಗಿಳಿ ಕಲ್ತ ಪಾಠದಂತೆ
- ಒಳ್ಳೇ ರಸವಳ್ಳಿ ಕಳ್ಳೀಗಿಡವನ್ನ ಹಬ್ಬಿತು
- ರಸವಳ್ಳಿ ಹೆಣ್ಣು ಒಲಿವಂತೆ ಮಾಡುವುದು
- ಎಳ್ಳ ತಿಂದ ಋಣ ತೋಟದ ಕಬ್ಬಿಗಿಂತ, ಪೋಟೆಯ ಜೇನಿಗಿಂತ, ಬಲ್ಲವಳ ಕೂಟ ಲೇಸು
- ಕಾಡಿಗೆ ಗಣ್ಣ ಚೆಲುವೆ ಮನೆಗೆ ಕೇಡು ತಂದಳು
- ತೋಟದ ಬೇಲಿಯನ್ನು ದಾಟಿ ನೋಡದವರಾರು
- ರಂಭೆಯಂಥ ಹೆಣ್ತೀನ ಬಿಟ್ಟು ದೊಂಬಿತಿಯ ಹಿಂದೆ ಹೋದ
- ಕಣ್ಣಿಗೆ ಒಪ್ಪವಿಲ್ಲದ ಹೆಣ್ಣು ಸಪ್ಪಗೆ ಕಂಡಳು
- ತಿಂಗಳ ಬೆಳಕಾಗಿ ಬಾಳಿನಲ್ಲಿ ತಂಗಾಳಿ ಹಿಂಗದಿರಲಿ
- ಮಲ್ಲಿಗೆ ವನದಲ್ಲಿ ತುರುಬಿಲ್ಲದಾಕೆ ಸುಳಿದಂತೆ
- ಬಂಡಾಟದ ನಡೆ ಚೆಂದ ಮಿಂಡಾಟದ ನುಡಿ ಚೆಂದ
- ಆರಿದೋಗರಕ್ಕೆ ಮೊಸರಿಕ್ಕಿ ಕಾಗೆಗೆ ಸೂರೆಕೊಟ್ಟರು
- ದೀಪಕ್ಕೆ ಎಣ್ಣೆಯ ಹುಯ್ಯ್ ಅಂತ ಸುರಿಯುತ್ತಾರೇ
- ಹುಯ್ಯಂತ ಕೊಡ ಬೇಡ ಸುಮ್ಮನೆ ಕೂರಲು ಬೇಡ
- ಬಂದರು ಬಾ ಅನ್ನದ ದರ್ಪಕುರುಡರ ಸಾವಸವೇ ಬೇಡ
- ಮುತ್ತು ಚಿಪ್ಪಲ್ಲಿ ಹುಟ್ಟಿ ಮುಕುಟದ ಮಣಿಯಾಯ್ತು
- ನೆರೆದ ಸಿರಿ ಜಾವಕ್ಕೆ ಹರಿದು ಹೋಯಿತು
- ಹೊನ್ನಿನ ಶೃತಿ ಕೇಳಿ ಎಂಥೆಂಥಾವರೆಲ್ಲ ಭ್ರಮೆಗೆ ಬಿದ್ದರು
- ಬರಿಗೆಟ್ಟ ಬದುಕಿಗಿಂತ ಕೊಂದು ತಿನ್ನೊ ಮಾರಿ ಲೇಸು
- ಲಕುಮಿ ತೊಲಗಿದ ಬಳಿಕ ಕುಲ ವೀರವಿದ್ದು ಫಲವಿಲ್ಲ
- ಯೋಗಿಗೆ ರಾಗ ಇರಬಾರದು ಭೋಗಿಗೆ ರೋಗ ಇರಬಾರದು
- ಮನಸ್ಸಿಲ್ಲದವಳ ಒಡನಾಟ ಮಾತುಮಾತಿಗು ಬೇಸರ
- ಲಲನೆಯರ ಒಲುಮೆ ತೊಲಗಿದರೆ ಇಲ್ಲ
- ಇಂಬರಿತು ಕೊಡುವಳೆ ರಂಭೆ
- ಒಲುಮೆಗೆ ನೋಟ ಬೇಟವೇ ಮೊದಲು
- ನೀರೆಯ ಓರೆಗಣ್ಣ ನೋಟಕ್ಕೆ ನಾಡೆಲ್ಲ ಕದಡಿತು
- ಸಿರಿಯವ್ವನದ ಹೆಣ್ಣು ಸಕ್ಕರೆ ಬೊಂಬೆಯಂತೆ
- ಹಾದರ ಹಾಲು ಸಕ್ಕರೆಯಂತೆ, ಬಯಲಾದರೆ, ಬೇವಿನ ಸಾರದಂತೆ
- ಚಿತ್ತವಿಲ್ಲದವಳ ಒಡಗೂಟ
- ನಾಯ್ ಹೆಣಾನ ಹತ್ತಿ ತಿನ್ನುವಂತೆ
- ಕೋರಿ (=ಚೆಂದುಳ್ಳಿ ಚೆಲುವೆ) ಒಲುಮೆ ತನಗೆ ಅನ್ನೋ ಮಾರನಿಗೆ (=ಚೆಲುವಾಂತನಿಗೆ) ಮಾರಿ ಹಿಡಿಯಿತು.
- ನಚ್ಚುವುದು ಬೇರೆ ಹೆಣ್ಣು ಒಬ್ಬನ ಮೆಚ್ಚುವುದು ಬೇರೆ
- ಹೆಣ್ಣಿನ ಬಗೆ/ಮನಸ್ಸ ಬಲ್ಲೋರಿಲ್ಲ
- ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು
- ದಾನ ಮಾಡೋಕೆ ಕನಲುವ ಮಾನವ ದಂಡ ಚಕಾರ ಎತ್ತದೆ ತೆರುವ
- ಕೊಟ್ಟೆ ಅಂತ ಹೇಳಿ ಕೊಡದವನ ಮಾತು ಬೆನ್ನಿಗೆ ಚೂರಿ ಇರಿದಂತೆ
- ಹೊತ್ತನ್ನು ಕೊಲ್ಲುವ ಮೈಗಳ್ಳಗಿಂತ ಸತ್ತ ಹೆಣ ಲೇಸು
- ಕೊಡದ ಲೋಭಿ ಮಾತು ಕೊಡಲಿ ಪೆಟ್ಟು
- ಮಾಡುವವ ಉತ್ತಮ ಆಡಿ ಮಾಡದವ ಅಧಮ ನೀಡುವವ ಉತ್ತಮ ಬೇಡಿದರೂ ನೀಡದವ ಅಧಮ
- ಆಗ ಬಾ ಈಗ ಬಾ ಹೋಗಿ ಬಾ ಅನ್ನದೆ ಕೊಡುವ ತ್ಯಾಗವಾಗು
- ಇಚ್ಚೆಯ ಅರಿತು ಕೊಟ್ಟ ನುಚ್ಚೊಂದು ಮಾಣಿಕ್ಯ
- ಬೇಡಿದರೆ ಇಲ್ಲ ಅನ್ನೋದ್ ಕಷ್ಟ
- ನೀಡುವರ ಬೇಡ ಅನ್ನೋದ್ ಕಷ್ಟ
- ಕೈಯೆತ್ತಿ ಕೊಡಲಿಲ್ಲ ಮೈಯ್ಯ ದಂಡಿಸಲಿಲ್ಲ
- ಪುಣ್ಯದ ಪಾಲು ನನಗಿರಲಿ ಅಂದ
- ಕೇಡು ಬರೋ ಕಾಲಕ್ಕೆ ಬುದ್ಧಿಗೇಡು
- ಪ್ರಾರಬ್ಧ ಬಂದ ಕಾಲಕ್ಕೆ ಒಂದಲ್ಲ ಒಂದು ಕೇಡು
- ಕೋಡಗ ಲಂಕೆಯ ಸುಡುವಾಗ ರಾವಣ ನಾಡ ಕಾಯ್ದಿದ್ದ
- ನಾಡೆಂದ್ರ ಕಾಡನ್ನ ಸುಡುವಾಗ ದೇವೇಂದ್ರ ಗಾಳೀನ್ನ ನೋಡೊಕೆ ಕಳಿಸಿದ
- ಬಿದ್ದಲ್ಲಿ ಸೋತಲ್ಲಿ ಹೊದಿದ್ದ ಬುದ್ಧಿ ತಪ್ಪಿತು
- ಸಾಮವೇದದ ಗಾನ
- ಭೂಮಿ ದಾನದ ಫಲವ ಜಂಬೂದ್ವೀಪದವರೇ ಬಲ್ಲರು
- ಜಪ-ತಪ ಉಪವಾಸ ಇದ್ದರೆ ಅಂತಕನ ವಿಪರೀತ ತಪ್ಪೀತೆ
- ಪುಣ್ಯ ಉಂಡು (=ಸುಖ ಅನುಭೋಗಿಸಿ) ತೀರಿತು, ಪಾಪ ತಿಂದು (=ಕಷ್ಟ ಅನುಭವಿಸಿ) ತೀರಿತು
- ಮಾಡಿದ ಕರ್ಮ ಬೆನ್ನಾಡಿ ಬಂತು
- ಕೇಡು ಬರೋ ಕಾಲಕ್ಕೆ ನಂಟೆಲ್ಲ ಹಗೆಯಾಯ್ತು
- ಏನಾದರೇನು ತಾನು ತಾನಾಗದವರೆಗೆ
- ದಾನಿಗೆ ದೀನತನ ಸಲ್ಲ, ಜ್ಞಾನಿಗೆ ಮೌನ ಸಲ್ಲ
- ಸೊಲ್ಲಿನ ಬೇದ ತಿಳಿದ ಕಿರಿಯ ಎಲ್ಲರಿಗೂ ಹಿರಿಯ
- ಮೊಸರ ಕಡೆದರೆ ಬೆಣ್ಣೆ ಒಸೆದು ಬಂತು
- ತನ್ನ ತಾನರಿತವಗೇ ತ್ರಿಭುವನ ತನ್ನೊಳಗೆ ಕಂಡಿತ್ತು
- ದೈವ ಅನ್ನೋದ ಮತ್ತೆಲ್ಲೂ ನೊಡದೆ ತಾನಿದ್ದ ಒತ್ತಿಲೇ ನೋಡು
- ಪೆದ್ದ ಮರದ ತುದಿಯೇರಿ ಅಣಿತಪ್ಪಿ ಬಿದ್ದು ಸತ್ತ
- ಸಿರಿ ಸೋಂಕಿದವರ ಪರಿ ಬೇರೆ
- ಮಾತಿನ ಬೊಮ್ಮ ತೂತಾದ ಮಡಕೆಯ ಪರಿ
- ಅರಿವಿನ ಹಾದಿ ಬೇರೆ
- ಅನುಭವಿಗೆ ಬೇರೆ ಮತವಿಲ್ಲ
- ಕೋಪ ಬೀವುದೇ ಸಮತೆ
- ಪಾಪ ಅನ್ನೋದಕ್ಕೆ ಕೋಪವೇ ನೆಲೆಗಟ್ಟು
- ಕೋಟಿ ಕೊಟ್ಟರೂ ಕೂಟ ಕರ್ಮಿಯ ದುಂದುಗವೇ ಬೇಡ
- ಕೊಲ್ಲದಿರುವುದೇ ಧರ್ಮ
- ಬಲ್ಲವರಿಗೆ ಅದೇ ಸಮ್ಮತ
- ಎಲ್ಲರು ಆಸೆ ಬಿಟ್ಟರೆ ಇಲ್ಲಿಯೇ ಕೈಲಾಸ, ಎಲ್ಲವ ಬಯಸಿ ಭ್ರಮಿಸಿದರೆ ಇಲ್ಲಿಯೇ ನರಕ
- ಒಳ್ಳೇರ ಒಡನಿದ್ದು ಕಳ್ಳ
- ಒಳ್ಳೇನಾದ ನಲ್ಲೆ ಮುಂದೆ ಸುಳಿದರೆ ಲೋಕದೊಳಗೆ ಒಲ್ಲದವರಾರು
- ಹೆಣ್ಣಿನ ಸೊಬಗನು ಕಣ್ಣಾರೆ ಕಂಡು ಬಯಸದ ಅಣ್ಣಗಳು ಅದಾರು
- ಕುಚ ಹೇಮ ಶಸ್ತ್ರ ಸೋಂಕಿದಾಗ ಶುಚಿ ವೀರ ಧೀರರು ಅಚಲಿತರಾದರು
- ಸಜ್ಜನರ ಸಂಗ ಹೆಜ್ಜೇನು ಸವಿದಂತೆ
- ಹೃದಯಶೂನ್ಯರ ಒಲವಿಗಿಂತ ಬಲ್ಲವರ ಕದನವೇ ಲೇಸು
- ಕರಣಗಳ ತಡೆದು ನಿಲಬಾರದು
- ಒಂದರ ಮೊದಲೊಳಗೆ ಬಂದಿದೆ ಜಗವೆಲ್ಲ
- ಬಹುಮನದ ಹಾದಿ ಕೈಗೊಂಡರೆ ಸುಖವಿಲ್ಲ
- ನೆತ್ತಿಯಲ್ಲಿ ಅಮೃತ ಹೊತ್ತು ಸಾವಿಗಂಜಿ ಜಗವೆಲ್ಲ ಸುತ್ತಾಡಿದ
- ಹೆಣ್ಣಿದ್ದ ಮನೆಗೆ ಎಡತಾಕಿ ಅಣ್ಣಯ್ಯ ಮಣ್ಣಾಗಿ ಹೋದ
- ಎಲ್ಲವೂ ತಾನಗ ಬಲ್ಲರೆ ಅದುವೇ ಯೋಗ
- ಕಯ್ಯಾರೆ ಮಾಡುವ ಧರ್ಮ ಲೇಸು
- ಪಾತ್ರವರಿತು ಜಗದ ಜಾತ್ರೆಗೆ ಸಲ್ಲಬೇಕು
- ಉಣವಲ್ಲ ಉಡವಲ್ಲದವನ ಒಡವೆ ಕಂಡವರ ಪಾಲಾಯ್ತು
- ಉಟ್ಟು ಉಡಲಾರ ಕೊಟ್ಟು ಸೈರಿಸಲಾರ
- ಕೊಟ್ಟುಣ್ಣದ ಗಂಟು ಪರರಿಗೆ ಬಿಟ್ಟು ಹೋದಂತೆ
- ಕೊಂದ ಪಾಪ ತಿಂದು ಪರಿಹಾರ (=ಕೊಂದ ಪಾಪ/ಕರ್ಮ ತನಗೆ ಅಂಟಿಕೊಂಡು ಅದನ್ನು ತೊಡೆಯುವುದಕ್ಕೆ ಕಷ್ಟ ಅನುಭವಿಸಬೇಕಾಗುತ್ತದೆ)
- ಒಂದೊಂದು ಹನಿ ಬಿದ್ದು ನಿಂತಲ್ಲಿ ಮಡುವಾಯ್ತು
- ಊರಿಗೆ ದಾರೀಯ ಯಾರು ತೋರಿದರೇನು
- ಯಾರಿಗೂ ತೋರದಂತೆ ದೈವ ತನ್ನೊಳಗೆ ಸಾರಿಹುದು ನಿಜವ
- ಹಿಡಿ ಘಟವ ನೆಚ್ಚದಿರು ದಿಟವೇ ಪುಣ್ಯದ ಪುಂಜ ಸಟೆಯೇ ಪಾಪದ ಬೀಜ
- ಇಮ್ಮನದಿಂದ ಸುಮ್ಮನೆ ಕೆಟ್ಟೆ (ಕೇಡು)
- ಧರ್ಮದ ಹಾದಿ ತಿಳಿದವನಿಗೆ ಓದು ವಾದಗಳೇಕೆ
- ಏನೂ ಇಲ್ಲದವಗೆ ಭಯವಿಲ್ಲ
- ಬೆರಳು ತೋರುದ್ರೆ ಅಂಗೈನೇ ನುಂಗಿದಂತೆ
- ಅಕ್ಕಿ ಉಂಡವ ಹಕ್ಕಿ, ಜೋಳ ಉಂಡವ ತೋಳ
- ಅಕ್ಕಿಲ್ಲ ಬ್ಯಾಳಿಲ್ಲ ಅಕ್ಕನ್ನ ಕರತರಬೇಕು
- ಅಡೆ ಮಡಕೆಯಲ್ಲ ಇಡೆ ಸಟ್ಟುಗವಲ್ಲ
- ಅಣ್ಣಿಗೇರ್ಯಾಗ ಎಣ್ಣೆ ಮೊಣಕಾಲ ಮಟ್ಟ
- ನೇರಲೆ ಹಣ್ಣು ಬಲು ಕಪ್ಪು ತಿಂದು ನೋಡಿದರೆ ಬಲು ಸವಿ
- ಅತ್ತೆ ಮಾಡಿದ್ದು ಅಡಕಲಗೂಡಿಗೆ ಸೊಸೆ ಮಾಡಿದ್ದು ಬೆಳಕಿಗೆ
- ಅತ್ತೆಯ ಮನಿಯಾಗ ಮುತ್ತಾಗಿ ಇರಬೇಕು
- ಅಧರಕ್ಕೆ ಕಹಿ ಉದರಕ್ಕೆ ಸಿಹಿ
- ಅನ್ನ ಹಾಕಿದ ಮನೆಗೆ ಕನ್ನ ಹಾಕಿದಂತೆ
- ಅಪ್ಪನ ಬಟ್ಟೆಯಾದರು ಚಿಪ್ಪಿಗ ಬಿಡ
- ಅಯ್ಯೋ ಅಂದರೆ ಅರೆ ವಯಸ್ಸು
- ಅರಿತೂ ಮಾಡಿದ ಪಾಪ ವಜ್ರಲೇಪ
- ಅಲಗಿನ ಗಾಯಕ್ಕಿಂತ ಗಲಗಿನ ಗಾಯ ಹೆಚ್ಚು
- ಅಲಾ ಬಲಾ ಪಾಪಿ ತಲೀ ಮ್ಯಾಲೆ ಸಿಡಿಲು ಬಡಿದರೆ ಅಂಗೈಲಿ ಹಿಡಿದ ಕೊಡೆ ಕಾಪಾಡಿತೇ
- ಆಗುವ (ಅಡುವ) ವರೆಗಿದ್ದು ಆರುವವರೆಗೆ ಇರಲಾರರೇ
- ಆಟ ಕೆಟ್ಟರೆ ದೀವಟಿಗೆಯವನ ಸುತ್ತ
- ಆಡಿ ಉಂಡ ಮೈ ಅಟ್ಟು ಉಂಡೀತೇ?
- ಆಡೋಣ ಬಾ ಕೆಡಿಸೋಣ ಬಾ
- ಹೊತ್ತು ಕಳೆದರೆ ಮತ್ತೆ ಬಾರದು
- ಹೊತ್ತಿರುವಾಗಲೇ ಗೊತ್ತು ಸೇರಬೇಕು
- ಹೊಕ್ಕು ಬಳಸಿದರೆ ನಂಟು
- ಹೆಂಡತಿಯಿಲ್ಲದ ಮನೆ ತಂತಿಯಿಲ್ಲದ ವೀಣೆ
- ಹೆಂಡತಿಯಿಲ್ಲದ ಮನೆ ದೇವರಿಲ್ಲದ ಗುಡಿ
- ಹೂವ ತರುವ ಮನೆಗೆ ದೇವ ಹುಲ್ಲು ಹೊರುವ
- ಹುಣ್ಣು ಮಾದರೂ ಕಲೆ ಮಾದೀತೇ
- ಹುಚ್ಚು ಹೊಳೇ ಬರುವಾಗ ಹೂವಿನ ತೋಟ ಇದಿರೇ
- ಹಾಲಿಗಿಂತ ಕೆನೆ ರುಚಿ
- ಹಾರೋ ಹಕ್ಕಿ ಪುಕ್ಕ ಎಣಿಸಿದಂತೆ
- ಹಿಂದಲ ಮಾತು ಮರಿ ಮುಂದಲ ಬಾಳು ಅರಿ
- ಹಾಯೋ ಎತ್ತು ಹಾಯ್ದರೂ ಬಂತು ಬಿಟ್ಟರೂ ಬಂತು
- ಹಾದಿ ತಪ್ಪಿದವನಿಗೆ ಹದಿನೆಂಟು ಹಾದಿ
- ಮರ ಕಡಿದು ಮೈಮೇಲೆ ಹಾಕಿಕೊಂಡ್ರಂತ
- ಹರ ಮುನಿದರೆ ಗುರು ಕಾಯ್ವ
- ಹರಕಿನಲ್ಲಿ ಇಲಿ ಕಡಿಯಿತು
- ಹತ್ತು ಮಂದಿ ಹುಲ್ಲು ಕಡ್ಡಿ ಒಬ್ಬನ ತಲೆ ಭಾರ
- ಹಂಪ್ಯಾಗ ಇರೂದಕ್ಕಿಂತ ತನ್ನ ಕೊಂಪ್ಯಾಗ ಇರೂದ್ ಲೇಸು
- ಹಂಗು ತೊರೆದ ಮೇಲೆ ಲಿಂಗದ ಪರಿವೆ ಏನು
- ಸೇರಿಗೆ ಸವ್ವಾ ಸೇರು
- ಸನ್ಯಾಸಿಗೆ ಸುಳ್ಳು ಹೇಳಿದರೂ ನಿಜದ ತಲೆಯ ಮೇಲೆ ಹೊಡೆದಂಗೆ ಹೇಳಬೇಕು
- ಮೊಂಡ ಮಾವನಿಗೊಬ್ಬ ಭಂಡ ಅಳಿಯ
- ಸಿಟ್ಟು ಬಂದರೆ ಪಡಿ ಹಿಟ್ಟು
- ಮುಕ್ಕು ಸರಿದರೆ ಒತ್ತಣ್ಣ ಒತ್ತಿದರೆ ಸರಿಯಣ್ಣ
- ಸತ್ತು ಕೊಳ್ಳೋ ಸೊರ್ಗಕ್ಕಿಂತ ಬದುಕಿ ಕೊಳ್ಳೋ ನರಕ ಲೇಸು
- ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು
- ಬಂಗಾರಕ್ಕೆ ಕುಂದಣವಿಟ್ಟಂತೆ ವಜ್ರಕ್ಕೆ ಸಾಣಿ ಹಿಡಿದಂತೆ
- ಲಕ್ಷ್ಮಿ ಚಂಚಲೆ
- ಮೊಂಡ ಕೊಡಲಿ ರಟ್ಟೆಗೆ ಮೂಲ
- ಮೂಗು ಹಿಡಿದರೆ ಬಾಯಿ ತಾನೇ ತೆರೆಯುವುದು
- ಮುದುಕೀ ನಿನ್ನಾಟ ಮುಂದೈತಿ
- ಮುಚ್ಚಿ ಹೇಳಿದರೆ ಒಗಟು ಬಿಚ್ಚಿ ಹೇಳಿದರೆ ಒರಟು
- ಮಾಳಿಗೆ ಮನೆ ಬೇಕು ಜೋಳಿಗೆ ಹಣ ಬೇಕು ಮಾದೇವನಂಥಾ ಮಗ ಬೇಕು ಗೌರಿಯಂಥಾ ಸೊಸೆ ಬೇಕು
- ಮಾರಿಯ ಹೋತ ತೋರಣದ ಚಿಗುರು ಬಯಸಿತಂತೆ
- ಮಾತಿಗೆ ಮಾತುಗಳ ಓತು ಸಾಸಿರ ಉಂಟು
- ಮಳೇ ನೀರ ಬಿಟ್ಟು ಮಂಜಿನ ನೀರಿಗೆ ಕೈ ಒಡ್ಡಿದಂತೆ
- ಮರಗಿಣಿಯ ಕೂಡೆ ಆಡಿ ಅರಗಿಣಿ ಕೆಟ್ಟಿತು
- ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು
- ಮಂಡಕ್ಕಿ ತಿಂದ ಮಗ ಮದ್ದಾನೆ ತರುಬಿದ ಮೃಷ್ಟಾನ್ನ ತಿಂದ ಮಗ ನೊಣ ಝಾಡಿಸಿದ
- ಮಂದಾಳಿಗೊಂದು ಮುಂದಾಳು
- ಭಲೆ ಜಟ್ಟಿ ಅಂದ್ರೆ ಕೆಮ್ಮಣ್ಣು ಮುಕ್ಕಿದ
- ಬೇಕೆಂಬುದು ಬಾಳು ಸಾಕೆಂಬುದು ಸಾವು
- ಬೆಲ್ಲದ ಸಿಪಾಯಿ ಮಾಡಿ ಇರುವೆ ಹತ್ತರ ಕಳಿಸಿದ
- ಬೆಣ್ಣೆಯೊಳಗಿನ ಕೂದಲು ತೆಗೆದಂತೆ
- ಬೆಕ್ಕಿಗೆ ಬೆಣ್ಣೆ ಕಂಡಿತು ಬಡಿಗೆ ಕಾಣಲಿಲ್ಲ
- ಬೆಕ್ಕಿನ ಕನಸಿನಲ್ಲಿ ಬರೀ ಇಲಿಗಳೇ
- ಬೆಂದ ಮನೇಲಿ ಹಿರಿದದ್ದೇ ಲಾಭ
- ಸುಡುವ ಮನೆಯ ಗಳ ಹಿರಿದಂತೆ
- ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ
- ಬೀಳು ಭೂಮಿಗೆ ಬೀಜ ದಂಡ
- ಬೀಜ ಸಣ್ಣದಾದರೆ ಮರ ಸಣ್ಣದೋ
- ಮಳೆಗಾಲದೇಲಿ ಚಿಗಿಯೂದಿಲ್ಲ ಬೇಸಿಗೇಲಿ ಒಣಗೂದಿಲ್ಲ
- ಹುಟ್ಟುವವನ ಅಣ್ಣ ಬೆಳೆಯುವವನ ತಮ್ಮ
- ಆಸೆ ಮಾತು ಕೊಟ್ಟು ಬಾಸೆ ತಪ್ಪಬಾರ್ದು
- ಇಕ್ಕಟ್ಟಾದರೂ ತನ್ನ ಗುಡಿಲೇ ಚಂದ
- ಇಕ್ಕಲಾರದ ಕೈ ಎಂಜಲು ಇಟ್ಟ ಶಾಪ ಕೊಟ್ಟವನಿಗೆ ತಟ್ಟೀತು ಇಲ್ಲು ಪೋಗಂಡ ಅಲ್ಲು ಪೋಗಂಡ
- ಇದ್ದ ಮಕ್ಕಳೇ ಎಣ್ಣೆ ಬೆಣ್ಣೆ ಕಾಣದಿರುವಾಗ ಮತ್ತೊಂದು ಕೊಡೋ ದೇವರೇ ಅಂದಂತೆ
- ಈರಣ್ಣನ ಮುಂದೆ ಬಸ್ಸಣ್ಣ ಕುಂತಂತೆ
- ಉಪಾಸ ಇದ್ರೂ ಉಪದ್ರ ಇರಬಾರ್ದು
- ಕಲ್ಲ ನಾಗರ ಕಂಡರೆ ಹಾಲೆರೆವರು ದಿಟ ನಾಗರ ಕಂಡರೆ ಕೊಲ್ಲೆಂಬರು ಉಂಬುವ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು
- ಉಪಕಾರಕ್ಕೋಗಿ ಉಪದ್ರ ಬಂತು
- ಉರಗಕ್ಕೆ ಹಾಲೆರೆದರೆ ಅದು ತನ್ನ ಗರಳ್ವ ಬಿಡಬಲ್ಲುದೇ
- ಹಾವಿಗೆ ಹಾಲೆರೆದರೇನು ಫಲ
- ಗಾಯದ ಮೇಲೆ ಬರೆ ಕೊಟ್ಟಂತೆ
- ಎಟ್ಟ್ (ಹಟಮಾರಿ) ಗಂಡಗೆ ಖೊಟ್ಟಿ ಹೆಂಡತಿ
- ಎತ್ತು ಮಾರಿದವಗೆ ಹಗ್ಗದ ಆಸೆಯೇ
- ಎದ್ದವನು ಗೆದ್ದಾನು
- ತಲೆ ಸೀಳಿದರೆ ಎರಡಕ್ಷರ ಇಲ್ಲ
- ಎರವಿನವರು ಎರವು ಕಸಗೊಂಡರೆ ಕೆರವಿನಂತಾಯಿತು
- ಮೋರೆ ಎಲ್ಲಮ್ಮನ ಗುಡ್ಡದಾಗ ಮುಲ್ಲಾಂದೇನು
- ಎಲ್ಲಾ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
- ಒಂದು ದುಡ್ಡು ಕೊಡುವೆ ಹಾಡು ದಾಸಯ್ಯ ಎರಡು ದುಡ್ಡು ಕೊಡುವೆ ಬಿಡು ದಾಸಯ್ಯ
- ಒಡೆದ ಹಾಲು ಹೆಪ್ಪಿಗೆ ಬಂದೀತೇ
- ಕೆತ್ತೆಂದರೆ ಕೆತ್ತು ಮೆತ್ತೆಂದರೆ ಮೆತ್ತು
- ಒಳ್ಳೊಳ್ಳೆಯವರು ಉಳ್ಳಾಡುವಾಗ ಗುಳ್ಳವ್ವ ಪಲ್ಲಕ್ಕಿ ಬೇಡಿದಳಂತೆ
- ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂದಂತೆ
- ಕಣ್ಣೆರಡಾದರೂ ನೋಟ ಒಂದೇ
- ಕರ್ಮ ಕಳೆಯುವವರೆಗೆ ಮರ್ಮದಲ್ಲಿರು
- ಕೆಲಸಿಲ್ಲದ ಗಂಡು ಕರೀ ಒನಕೆ ತುಂಡು
- ಕರುಬಿದವರ ಮನೆ ಬರಿಮನೆ
- ಕಲ್ತ ಕೈ ಕದ್ದಲ್ಲದೆ ಬಿಡದು
- ಕೂಡಿದ ಗಂಡನನ್ನಾದರೂ ಬಿಟ್ತೇನು ಕಲ್ತದ್ದ ಬಿಡಲಾರೆ
- ಕಲ್ತದ್ ಬಿಟ್ಟೆಯಾ ಕಲಕೇತಿ ಅಂದ್ರೆ ಊರು ಬಿಟ್ರು ನಾ ಕಲ್ತದ್ ಬಿಡಲ್ಲ ಅಂದ್ಲಂತೆ
- ಕಳ್ಳನ ಕೈಯಲ್ಲಿ ಕೀಲಿಕೈ ಕೊಟ್ಟಂತೆ
- ಕಳ್ಳನ ಕಾವಲಿಟ್ಟ ಹಾಗೆ
- ಕಾಲಿಗೆ ಬಿದ್ದು ಕಾಲುಂಗರ ಬಿಚ್ಚಿಕೊಂಡರಂತೆ
- ಕಾವಿ ಉಟ್ಟವರೆಲ್ಲಾ ಸನ್ಯಾಸಿಗಳಲ್ಲ ಬೂದಿ ಬಳಿದವರೆಲ್ಲ ಬೈರಾಗಿಗಳಲ್ಲ
- ಕುದಿಯುವುದರೊಳಗಾಗಿ ಮೂರು ಸಾರಿ ಹಳಸಿದಂತೆ
- ಕೂತುಕೊಂಡು ಹೇಳುವವನ ಕೆಲಸ ಊರು ಮಾಡಿದರೂ ಸಾಲದು
- ಕೂಳಿಗೆ ಕೇಡು ಭೂಮಿಗೆ ಭಾರ
- ಕೆಟ್ಟು ಪಟ್ಟಣ ಸೇರು ಇಟ್ಟು ಹಳ್ಳಿ ಸೇರು
- ಕೆಟ್ಟು ಬದುಕಬಹುದು ಬದುಕಿ ಕೆಡಬಾರದು
- ಕೆಟ್ಟು ಸೈರಿಸಬಲ್ಲೆ ಕೊಟ್ಟು ಸೈರಿಸಲಾರೆ
- ಕೆರೆಯ ನೀರ ಕೆರೆಗೆ ಚೆಲ್ಲಿ ವರ ಪಡೆದುಕೊಂಡಂತೆ
- ಕೈಲಾದವರು ಮಾಡುತ್ತಾರೆ ಕೈಲಾಗದವರು ಆಡುತ್ತಾರೆ
- ಕೊಂಕಿಗೆ ಕೊಂಕೇ ಮದ್ದು
- ಕೊಡಲಾರದ ಹೆಣ್ಣಿಗೆ ತೆರವ ಕೇಳಿದರಂತೆ
- ಕೊಡುವ ದೇವರು ಬಡವನೇ?
- ಕೊಡುವವನ ಕೈ ಯಾವಾಲು ಮೇಲೆ
- ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ
- ಕೋಪ ಪಾಪ ತಂತು ಪಾಪ ತಾಪ ತಂತು
- ಗಂಡ ಹೆಂಡಿರ ಜಗಳದಲ್ಲಿ ಮಕ್ಕಳು ಜಗಳ ಕಲಿತವು
- ಗಳಕ್ಕನೇ ಉಂಡವ ರೋಗಿ, ಗಳಿಗೆ ಉಂಡವ ಭೋಗಿ
- ಗಾಣವಾಡದೆ ಎಣ್ಣೆ ಬಂದೀತೇ
- ಗುಡಿಸಿದ ಮೇಲೆ ಕಸವಿರಬಾರದು ಬಡಿಸಿದ ಮೇಲೆ ಹಸಿವಿರಬಾರದು
- ಗುರುವಿಗೆ ತಿರುಮಂತ್ರ
- ಸಂತೇಲಿ ಮನೇ ಮಾಡಿ ಸದ್ದಿಗಂಜೂದೇ
- ಗೆದ್ದವ ಸತ್ತ ಸೋತವ ಸತ್ತ
- ಚೌಲದಾಗ ದೌಲು ಮಾಡು
- ಜನಕ್ಕಂಜದಿದ್ದರೂ ಮನಕ್ಕಂಜಬೇಕು
- ಹುಟ್ಟಿದವಗೆ ಸಾವು ತಪ್ಪದು
- ತನಗಿಲ್ಲದ್ದು ಎಲ್ಲಿದ್ದರೇನು
- ತನ್ನ ತಾನರಿತರೆ ತನ್ನರಿವೆ ಗುರು
- ತನ್ನ ನೆರಳಿಗೆ ತಾನಂಜಿ ನಡೆಯಬೇಕು
- ತಬ್ಬಲಿ ದೇವರಿಗೆ ತಂಗಳ ನೈವೇದ್ಯ
- ತಲೆ ಬಲಿಯಿತು ಅಂತ ಕಲ್ಲಿಗೆ ಹಾಯಬಾರದು
- ತವರೂರಿನ ದಾರೀಲಿ ಕಲಿಲ್ಲ ಮುಳ್ಳಿಲ್ಲ
- ತಾ ಅನ್ನೋದು ನಮ್ಮ ತಲತಲಾಂತರಕ್ಕೂ ಇರಲಿ, ಕೊ ಅನ್ನೋದು ನಮ್ಮ ಕುಲಕೋಟಿಗೂ ಬೇಡ
- ತಾನು ತಿಂದದ್ದು ಮಣ್ಣು ಹೆರರಿಗೆ ಕೊಟ್ಟದ್ದು ಹೊನ್ನು
- ತಾ ಬಲವೋ ಜಗ ಬಲವೋ
- ತುಟ್ಟಿಯಾದರೂ ಹೊಟ್ಟೆ ಕೇಳದು
- ತುಟಿ ಸುಮ್ಮನಿದ್ದರೂ ಹೊಟ್ಟೆ ಸುಮ್ಮನಿರದು
- ತೊಳೀಲಿಲ್ಲ ಬಳೀಲಿಲ್ಲ ಮೂಗೇಕೆ ಮಸಿಯಾಯ್ತು
- ದನಿಯಿದ್ದವರು ಅತ್ತರೂ ಚಂದ ನಕ್ಕರೂ ಚಂದ
- ದುಡಿದದ್ದು ಉಂಡೆಯೋ ಪಡೆದದ್ದು ಉಂಡೆಯೋ
- ದೂಫ ಹಾಕಿದರೆ ಪಾಪ ಹೋದೀತೇ
- ನಡೆವರು ಎಡವದೇ ಕುಳಿತವರು ಎಡವುವರೇ
- ನಾ ಬಡವ ವಾಲಗ ಸಾವಕಾಶ ಊದು ಅಂದಂತೆ
- ನೇಮ ಉಳ್ಳವನ ಕಂಡರೆ ಯಮನಿಗೂ ಭಯ
- ನೆಂಟ ನೆರವಲ್ಲ ಕುಂಟ ಜೊತೆಯಲ್ಲ
- ಪಡುವಣ ಮನೆಗೆ ಮೂಡಣ ದೀಪ
- ಪಿಶಾಚಿ ಬಿಟ್ಟರೂ ನಿಶಾಚರ ಬಿಡ
- ಹೆಣ್ಣು ಹೊನ್ನು ಮಣ್ಣು ಇನ್ನೊಬ್ಬರ ಕೈ ಸೇರಿದರೆ ಹೋದಂತೆ
- ಬಳ್ಳಿಗೆ ಕಾಯಿ ಭಾರವೇ
- ಬಾಡಿಗೆ ಎತ್ತೆಂದು ಬಡಿದು ಬಡಿದು ಹೂಡಬೇಕೆ
- ಬಾಳಿ ಬದುಕುವರಿಗೆ ಹಾಳೂರ ಸುದ್ದಿ ಯಾಕೆ
- ನಿಷ್ಠೆ ಇಲ್ಲದೆ ಎಷ್ಟು ಪೂಜೆ ಮಾಡಿದರೂ ನಷ್ಟ
- ನಿಷ್ಠೆ ಇಲ್ಲದವನಿಗೆ ದೈವ ಬಟ್ಟ ಬಯಲು
- ಕಂಡವರ ಕಂಡು ಕೈಕೊಂಡ ಧರ್ಮ ದಂಗು ಬಡಿಸಿತು
- ಕಂಡವರ ಕಂಡು ಕೈಕೊಂಡ ಕೆಲಸ ಕೆಂಡವಾಯ್ತು
- ನಿಷ್ಠೆ ಇದ್ದಲ್ಲಿ ದೈವ ಕಲ್ಲುಗುಂಡೊಳಗೆ ಅಡಗಿತ್ತು
- ಭಕ್ತಿ ಉಳ್ಳಾತಗೆ ಮುಕ್ತಿ ,ಶಕ್ತಿ ಉಳ್ಳಾತಗೆ ಭುಕ್ತಿ
- ಅರಿತು ಮಾಡದ ದಾನ ತೆರೆದು ನೋಡದ ಕಣ್ಣಂತೆ
- ಕಾಯ ಕಮಲವೇ ಸೆಜ್ಜೆ ಜೀವ ರತುನವೇ ಜ್ಯೋತಿ
- ತತ್ವಮಸಿ ಅಂತ ಅನ್ನೋದ್ ಕಲಿ ಅಂದ್ರೆ ತುತ್ತು ಸವಿ ಅಂತ ಉಣ್ನೋದ್ ಕಲ್ತ
- ಜ್ಯೋತಿಯ ನೆಲೆ ಅರಿತವನೇ ಯೋಗಿ
- ನೆತ್ತರು ಉಕ್ಕಿದರೆ ಜೀವ ತೊಡಕೀತು
- ವಿಧಿ ಕಾಣದ ಎಡೆಗಳಿಲ್ಲ
- ದಾರವಿದ್ದರೆ ಮುತ್ತು ಹಾರವೆಂದನಿಸಿತ್ತು
- ಕಾಲ ತಪ್ಪಿದ ಬಳಿಕ ನೂರು ಮಾಡಿದರು ಹಾಳು
- ಮಿಂದು ಮೈಲಿಗೆ ಉಡೊದಾದ್ರೆ ಜಳಕದ ದಂದುಗವೇಕೆ
- ಮಾಡಿದ ಪಾಪ ದಾನದಿಂದ ಹೋದೀತೆ
- ಮಿಂದರೆ ಮೈಯ ಕೊಳೆ ಹೋಯ್ತು
- ಹಿರಿದು ಪಾಪ ಮಾಡಿ ಗಂಗೆಗೆ ಹರಿದರು
- ಅಕ್ಕರ ಕಲ್ತು ತನ್ನ ಒಕ್ಕಲನ್ನೇ ತಿನ್ನೊದ್ ಕಲ್ತ
- ವಿಧಿ ಮುನಿದರೆ ಸರಿ ಬೆಸವಾಯ್ತು
- ಅರಸು ಒಲಿದರೆ ಸಿರಿ ದೆಸೆಯಾಯ್ತು
- ಆಳಿದ ದೊರೆ ಹುಸಿದರೆ ಅಲ್ಲಿಂದ ಹೇಳದೆ ಹೋಗಬೇಕು
- ಬಲ್ಲಿದರೊಡನೆ ಸೆಣಸಿ ಮಾತಾಡಿದರೆ ಅಲ್ಲೇ ಬಂತು ಕೇಡು
- ಮಂತ್ರಿ ಇಲ್ಲದ ರಾಜ್ಯ ಕೀಲು ಮುರಿದ ಯಂತ್ರದಂತೆ
- ಕತ್ತಿ ವೈರಿ ಕೈಯಲ್ ಕೊಟ್ಟು ಬೆನ್ನ ಮಾಡಿ ನಿಂತನಂತೆ
- ಕೊಂಡಾಡುತ್ತ ಜಗದ ಇಚ್ಚೆಯನ್ನೆ ನುಡಿದರೆ ಜಗವೆಲ್ಲ ತನ್ನ ಮುದ್ದಾಡುತಿತ್ತು
- ನಾಡಳಿದು ನಾಡೊಡೆಯನಿಗೆ ಕೇಡು ನಾಡೊಡೆಯ ಅಳಿದು ನಾಡಿಗೆಲ್ಲ ಕೇಡು
- ಯಾರನ್ನ ನಂಬಿದರು ಆರೈದು ನಂಬಬೇಕು
- ಬಾಳಿಕೆಗೆಟ್ಟು ಬೆಸಲಾದ ಚೇಳಿನಂತಾದ ಹುಟ್ಟು ಸಾವು ದಿಟವೇ ಆದರೂ ಹೆಜ್ಜೆ ಹೆಜ್ಜೆಗೆ ಅಂಜೂದ್ ತಪ್ಪಲಿಲ್ಲ
- ಜಿನ ಧರ್ಮವೇ ಜೀವಧರ್ಮ ಮೂಕ ಪ್ರಾಣಿಯ ಕೊಲ್ಲದ್ದು ಜೀವಧರ್ಮ
- ನೀರೆಯ ಓರೆಗಣ್ಣ ನೋಟಕ್ಕೆ ನಾಡೆಲ್ಲ ಇರಿದಾಡಿತು
- ಲಲನೆಯರ ಒಲುಮೆ ತೊಲಗಿದರೆ ಇಲ್ಲ ಇಂಬರಿದು ಕೊಡುವಳೆ ರಂಭೆ
- ತಾನೊಲಿದ ಮಂಕು ಮಾಣಿಕ್ಯ
- ಹಾಸಿಗೆ ಇದ್ದಷ್ಟು ಕಾಲು ಚಾಚು
- ಬೀದೀಲಿ ಹೋಗೋ ಮಾರೀನ ಮನೆಗೆ ಕರೆದಂತೆ
- ಮಾಡಿದ್ದುಣ್ಣೋ ಮಾರಾಯ
- ಉಪ್ಪು ತಿಂದ ಮ್ಯಾಲೆ ನೀರ ಕುಡಿಯಲೇಬೇಕು
- ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ
- ಆಗೋದೆಲ್ಲಾ ಒಳ್ಳೇದಕ್ಕೆ
- ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು
- ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ
- ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ ಕಣ್ಣು ಕುರಿ ಮ್ಯಾಲೆ
- ಪಾಲಿಗೆ ಬಂದದ್ದು ಪಂಚಾಮೃತ
- ಪರದಾನಿ ಹೂಸು ಕುಡಿದ ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
- ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ
- ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ ಗವುಜಿ ಗದ್ದಲ ಏನೂ ಇಲ್ಲ,
- ಗೋವಿಂದ ಭಟ್ಟ ಬಾವೀಲಿ ಬಿದ್ದ ಇದ್ದವರು ಇದ್ದ ಹಾಗೆ
- ಸಿದ್ಧಾ ದೇವಿಗೆ ಸಿಡಿಲು ಬಡೀತು
- ಅಂದು ಬಾ ಅಂದ್ರೆ ಮಿಂದು ಬಂದ
- ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ
- ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ
- ನೀರೆ ನಿನ್ನ ಮಾತು ನಿಜವೇನೆ
- ನೀರ ಕಡೆದರೆ ಬೆಣ್ಣೆ ಬಂದಾದೇನೆ
- ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
- ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
- ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
- ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
- ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
- ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
- ಅಡವಿಯ ದೊಣ್ಣೆ ಪರದೇಸಿಯ ತಲೆ
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
- ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
- ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
- ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
- ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು
- ಅರಗಿನಂತೆ ತಾಯಿ, ಮರದಂತೆ ಮಕ್ಕಳು
- ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
- ಅರಸನ ಕುದುರೆ ಲಾಯದಲ್ಲೆ ಮುಪ್ಪಾಯಿತು
- ಅರೆಪಾವಿನವರ ಅಬ್ಬರ ಬಹಳ
- ಅಳಿವುದೇ ಕಾಯ ಉಳಿವುದೇ ಕೀರ್ತಿ
- ಆವು ಕಪ್ಪಾದ್ರೆ ಹಾಲು ಕಪ್ಪೇನು
- ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
- ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
- ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
- ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
- ಆಡೋದು ಮಡಿ ಉಂಬೋದು ಮೈಲಿಗೆ
- ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
- ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
- ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
- ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
- ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
- ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
- ಆಸೆಗೆ ಕೊನೆಯಿಲ್ಲ
- ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
- ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು
- ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
- ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
- ಸಾದೆತ್ತಿಗೆ ಎರಡು ಹೇರು (ಹೊರೆ)
- ಹೆತ್ತವರು ಹೆಸರಿಕ್ಕ ಬೇಕು
- ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು
- ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ
- ಕೊಡೋದು ಕೊಳ್ಳೋದು ಗಂಡಂದು, ಮಜ ಮಾಡೋದು ಹೆಂಡ್ರುದ್ದು
- ಊರಿಗಾಗದ ಗೌಡ, ಮೇಲೆರಗುವ ಗಿಡುಗ
- ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
- ತೇಗಿ ತೇಗಿ ಬೀಗಿ ಬಿದ್ದ ತಾಮ್ರದ ನಾಣ್ಯ
- ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ
- ಹೋದ ಬದುಕಿಗೆ ಹನ್ನೆರಡು ದೇವರು
- ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು
- ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
- ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ
- ಇಕ್ಕಲಾರದ ಕೈ ಎಂಜಲು
- ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಿಕ್ಕು
- ಇಕ್ಕೇರಿ ತನಕ ಬಳಗ,
- ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ ಹೆಸರಿಗೆ ಹೊನ್ನ ಹೆಗ್ಗಡೆ,ಎಸರಿಗೆ ಅಕ್ಕಿ ಇಲ್ಲ
- ಇಡೀ ಮುಳುಗಿದರೂ ಮೂಗು ಮೇಲೆ ಇದ್ದ
- ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
- ಇದ್ದದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು
- ನಿಜ ಆಡಿದರೆ ನಿಷ್ಠೂರ ಇದ್ದದ್ದು ಹೋಯಿತು
- ಮದ್ದಿನ ಗುಣದಿಂದ ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ
- ತನ್ನೂರಲಿ ರಂಗ, ಪರೂರಲಿ ಮಂಗ
- ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ
- ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು
- ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ
- ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡಬಾರದು
- ಎಡದ ಎತ್ತಿಗೆ ಬಡಿದರೆ ಬಲದ ಎತ್ತಿಗೆ ತಾಕಿತು
- ಮದುವೆ ಮಡಿನೋಡು ಮನೆ ಕಟ್ಟಿ ನೋಡು
- ಮಾತು ಬೆಳ್ಳಿ, ಮೌನ ಬಂಗಾರ
- ಕೈ ಕೆಸರಾದ್ರೆ ಬಾಯಿ ಮೊಸರು
- ತುಂಬಿದ ಕೊಡ, ತುಳುಕೋದಿಲ್ಲ
- ಕಾಮಾಲೆ ಕಣ್ಣೋನಿಗೆ ಕಂಡಿದ್ದೆಲ್ಲ ಹಳದಿ
- ನೀ ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದ
- ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ
- ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
- ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ
- ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು
- ಹಾಳೂರಿಗೆ ಉಳಿದವನೇ ಗೌಡ
- ಹಿರೀ ಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ
- ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
- ಜನ ಮರುಳೋ ಜಾತ್ರೆ ಮರುಳೋ
- ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
- ಕಾರ್ಯವಾಸಿ ಕತ್ತೆ ಕಾಲು ಕಟ್ಟು
- ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು
- ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
- ಕೋಪದಲ್ಲಿ ಕುಯ್ದ ಮೂಗು ಶಾಂತವಾದಾಗ ಬಂದೀತೇ
- ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು
- ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ
- ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ
- ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ
- ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ
- ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ
- ನಾಯಿ ಬೊಗಳಿದರೆ ದೇವಲೋಕ ಹಾಳೇನು
- ನಾಯಿ ಬಾಲ ಡೊಂಕು
- ಓದಿ ಓದಿ ಮರುಳಾದ ಕೂಚು ಭಟ್ಟ
- ಪಾಪಿ ಸಮುದ್ರ ಹೊಕ್ಕರು ಮೊಣಕಾಲುದ್ದ ನೀರು
- ರಾಮೇಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
- ಸಾವಿರ ಸುಳ್ಳು ಹೇಳಿ ಒಂಡು ಮದುವೆ ಮಾಡು
- ಬೇಲಿನೆ ಎದ್ದು ಹೊಲ ಮೇಯಿತಂತೆ
- ಭಂಗಿ ದೇವರಿಗೆ ಹೆಂಡಗುಡುಕ ಪೂಜಾರಿ
- ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ
- ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
- ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
- ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ
- ಮುಳ್ಳಿನಿಂದ ಮುಳ್ಳು ತೆಗೆ,
- ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
- ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
- ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
- ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
- ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ?
- ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು
- ವಶಗೆಡದೆ ಹಸಗೆಡಲ್ಲ
- ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ
- ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
- ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
- ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು
- ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
- ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
- ಮುದ್ದೆ ಉಣ್ತಾ ಮಜ್ಜಿಗೆ ಓಡಾಟ
- ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ
- ಒಂದೇ ರಟ್ಟೆ ಮುರಿದು ರೊಟ್ಟಿ ತಿನ್ನು
- ಕಟ್ಟೆ ಹಾಕಿ ಅನ್ನ ಉಣ್ಣು
- ರಸ ಬೆಳೆದು ಕಸ ತಿನ್ನಬೇಡ,
- ಹಸ ಕಟ್ಟಿ ಮೊಸರಿಗೆ ಪರದಾಡಬೇಡ
- ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
- ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
- ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
- ರಾಜ ಇರೋತನಕ ರಾಣಿ ಭೋಗ
- ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
- ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
- ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು
- ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
- ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ
- ಲಿಂಗ ಹರಿದ ಮೇಲೆ ಜಂಗಮನ ಹಂಗೇನು
- ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
- ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
- ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
- ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
- ಶಿವಾ ಅರಿಯದ ಸಾವು ಇಲ್ಲ ಮನ ಅರಿಯದ ಪಾಪ ಇಲ್ಲ
- ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
- ಶೆಟ್ಟಿ ಸಿಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು
- ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ
- ಅತ್ತೆ ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ
- ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ
- ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
- ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
- ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ
- ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
- ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
- ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
- ಸಂತೆ ಕಟ್ಟೋಕು ಮೊದಲೇ ಸೇರಿದರು
- ಗಂಟು ಕಳ್ಳರು ಸಂತೇಲಿ ಮಂತ್ರ ಹೇಳಿದಂಗೆ
- ಸಂದೀಲಿ ಸಮಾರಾಧನೆ ಮಾಡ್ದಂಗೆ
- ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
- ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ
- ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
- ಸಾವಿರ ಕೊಟ್ಟರೂ ಸವತಿ ಮನೆ ಬೇಡ
- ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
- ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
- ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
- ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ
- ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
- ಹಗಲು ಅರಸನ ಕಾಟ ಇರುಳು ದೆವ್ವದ ಕಾಟ
- ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
- ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
- ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
- ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
- ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ
- ಹತ್ತು ತಿಂಗಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
- ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
- ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
- ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
- ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ
- ಹರೆಯಕ್ಕೆ ಬಂದಾಗ ಹಂದಿನೂ ಚಂದ
- ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
- ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು
- ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
- ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
- ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ
- ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
- ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ
- ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ
- ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
- ಹಾಳೂರಿಗೆ ಉಳಿದೋನೇ ಗೌಡ,
- ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
- ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
- ಹುಟ್ಟು ಗುಣ ಸುಟ್ಟರೂ ಹೊಗೋದಿಲ್ಲ
- ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
- ಹುಳ್ಳಿಕಾಳು ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ
- ಹೆಡ್ಡಾಳಾದ್ರೂ ದೊಡ್ಡಾಳು ಮೇಲು
- ಹೇಳೊದು ವೇದ ಹಾಕೊದು ಗಾಳ
- ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
- ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
- ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ
- ಕೋಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
- ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ
- ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ
- ಎಂಟು ವರ್ಷಕ್ಕೆ ನನ್ನ ಮಗ ದಂಟಾದ
- ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ
- ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
- ಮುಲಾಜಿಗೆ ಬಸುರಾಗಿ ಹೆರೋಕೆ ತಾವಿಲ್ಲ
- ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ,
- ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು
- ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
- ತಾಳ ತಪ್ಪಿದ ಬಾಳು, ತಾಳಲಾರದ ಗೋಳು
- ಉಂಡ ಮನೆ ಜಂತೆ ಎಣಿಸಬಾರದು,
- ತುಪ್ಪತೊಗೆ ತಿನ್ನೋರ ರಂಪ ನೋಡು
- ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
- ಹಣ ಎರವಲು ತಂದು ಮಣ ಉರುವಲು ಕೊಂಡ
- ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು
- (ಅನ್ಯ) ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ
- ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
- ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ
- ಹೊಳೆಗೆ ಸುರಿದರೂ ಅಳೆದು ಸುರಿ
- ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
- ಉಂಬಾಗ ಉಡುವಾಗ ಊರೆಲ್ಲ ನೆಂಟರು
- ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ
- ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
- ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
- ಉತ್ತಮನು ಎತ್ತ ಹೋದರೂ ಶುಭವೇ
- ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
- ಊರು ದೂರಾಯಿತು ಕಾಡು ಹತ್ತರಾಯಿತು
- ಊರೆಲ್ಲ ಸೂರೆ ಆದ ಮೇಲೆ ಕೋಟೆ ಬಾಗಿಲ ಮುಚ್ಚಿದರು
- ಎಡವಿದ ಕಾಲು ಎಡವುದು ಹೆಚ್ಚು
- ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ
- ಎರಡೂ ಕೈ ತಟ್ಟಿದರೆ ಸದ್ದು
- ಎಲ್ಲರೂ ಪಲ್ಲಕ್ಕಿಲಿ ಕೂತರೆ ಹೊರೋರು ಯಾರು
- ಎಲ್ಲಾ ಬಣ್ಣ ಮಸಿ ನುಂಗಿತು
- ಏರಿದವ ಇಳಿದಾನು ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ?
- ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ
- ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು
- ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು
- ಬಾಯಲ್ಲಿ ಬೆಲ್ಲ ಕರುಳು ಕತ್ತರಿ
- ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
- ಕಡು ಕೋಪ ಬಂದಾಗ ತಡಕೊಂಡವನೇ ಜಾಣ
- ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
- ಕಪ್ಪರ ತಿಪ್ಪೇಲಿಟ್ಟರೆ ತನ್ನ ವಾಸನೆ ಬಿಟ್ಟೀತೇ
- ಕಬ್ಬು ಡೊಂಕಾದ್ರೆ ಸವಿ ಡೊಂಕೇ
- ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ
- ಕಿಡಿಯಿಂದ ಕಾಡ ಸುಡಬಹುದು
- ಕೀಲು ಸಣ್ಣದಾದರೂ ಗಾಲಿ ನಡೆಸುತ್ತದೆ
- ಕುರುಡು ಕಣ್ಣಿಗಿಂತ ಮೆಳ್ಳೆ ಗಣ್ಣು ವಾಸಿ
- ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು.
- ಹಾದಿ ಹಣವಡ್ಡ ಹಾದರಗಿತ್ತಿ ಮನೆ ಯಾವುದು.
- ಹಾರಾಡೋ ಅಪ್ಪುಂಗೆ ತೂರಾಡೋ ಮಗ ಹುಟ್ದಂಗೆ
- ಹಾರುವಯ್ಯನಿಗೆ ಹರಕೆ ಕಟ್ಟಿದಕ್ಕೆ ಹಳೇ ಪರಕೇಲಿ ಹೋಡ್ದ ಹಾಗೆ
- ಹಾರುವ ಆಳಲ್ಲ, ಬಾಳೆ ದಡಿಯಲ್ಲ
- ಹಾರುವರ ಮೋರೆಯಾದರೂ ನೀರಿನಲ್ಲಿ ತೊಳೆಯದಿದ್ದರೆ ನಾರದೆ ಇದ್ದೀತೆ.
- ಹಾರೋ ಹಕ್ಕಿಗೆ ಹಾದರ ಕಟ್ಟಿದರು.
- ಹಾರ್ಸೋನೋ ತೀರ್ಸೋನೋ.
- ಹಾಲು ಕಾಯಿಸ್ಕೊಂಡು ನಾನಿದ್ದೆ ಹಲ್ಲು ಕಿರ್ಕೊಂಡು ನೀ ಬಂದೆ.
- ಹಾಲುಕ್ಕಿದ ಮನೇಲಿ ಮೇಲ್ಗರೀಲಿ. (ಕಾಯಿಲೆ)
- ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ
- ರಾಯ ಸತ್ತರೂ ಹೆಣ ; ನಾಯಿ ಸತ್ತರೂ ಹೆಣ .
- ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು.
- ಮನೆಮನೆ ಮುದ್ದೆ ಮಾರಿಗುಡಿ ನಿದ್ದೆ
- ತಕ್ಕವನಲ್ಲಿ ಹೊಕ್ಕಿದ್ದರೆ ತಕ್ಕಷ್ಟಾದರೂ ಸಿಕ್ಕುವುದು
- ತಕ್ಕಡಿ ಬಲ್ಲದೇ ಮನೆಯ ಬಡತನವ
- ತಕ್ಕಡಿ ಸ್ವರೂಪ ತಕ್ಕವನೇ ಬಲ್ಲ
- ತಗಣೇ ಉಪದ್ರವ ಮಗಳಿಗೂ ಬಿಡಲಿಲ್ಲ
- ತಗಲುಗಾರನಿಗೆ (= ದಗಲ್ ಬಾಜ್) ಬಗಲ ಮೇಲೆ ಜ್ಞ್ಯಾನ
- ತಗ್ಗಿದವ ಎಂದಿಗೂ ನುಗ್ಗಾಗ
- ತಗ್ಗು ದವಸಕ್ಕಾಗಿ ಹಗ್ಗ ಕೊಂಡು ಕೊಂಡ
- ತಗ್ಗು ಗದ್ದೆಗೆ ಮೂರು ಬೆಳೆ ಎತ್ತರದ ಗದ್ದೆಗೆ ಒಂದೇ ಬೆಳೆ
- ತಟಕಿನಿಂದ ತಟಪಟವಾಯಿತು ತಟಕು ಬಿದ್ದು ಮಠಾ ಕೆಡಿಸಿತು
- ತಟಸ್ಥನಾದವನಿಗೆ ತಂಟೆಯೇನು?
- ತಟದಲ್ಲಾಗಲೀ ಮಠದಲ್ಲಾಗಲೀ ಹಟದ ಜಂಗಮನ ಕಾಟ ತಪ್ಪುವುದಿಲ್ಲ
- ತಟ್ಟನೆ ಆಡಿದರೆ ಕೊಟ್ಟಷ್ಟು ಫಲ
- ತಟ್ಟನೆ ಬಾ ಅಂದ್ರೆ ತುಟಿ ಬಿಟ್ಟನಂತೆ
- ತಡವಿದರೆ ಮಡಿ ಸಹಾ ಕೆಡುವುದು
- ತಡವ ಮಾಡುವವನ ಗೊಡವೆ ಬೇಡ
- ತಡೇ ಕಟ್ಟುವವನ ಮುಂದೆ ಮುಡಿಯೇನು
- ತಣ್ಣಗಿದ್ದರೆ ಮಣ್ಣಾದರೂ ಅಸಾಧ್ಯ
- ತಣ್ಣೀರು ಆದರೂ ಪುಣ್ಯದಿಂದ ದೊರಕಬೇಕು
- ತನಗೆ ಬಂದ ಹಾನಿ ದುಡ್ಡಿನಿಂದ ಹೋಯಿತು
- ತನಗೇ ಇಲ್ಲದವ ಪರರಿಗೆ/ಮಂದಿಗೆ ಏನು ಕೊಟ್ಟಾನು
- ತನಗೆ ಇಲ್ಲದವಳು ಮಕ್ಕಳಿಗೆ ಏನು ಹೊದಿಸ್ಯಾಳು
- ತನ್ನ ಮರ್ಯಾದೆ ಕೆಟ್ಟವ ಪರರ ಮರ್ಯಾದೆ ಇಟ್ಟಾನೆ?
- ತನ್ನ ನೆರಳು ತಾ ಕಂಡು ನರಳುವವ ಮರುಳನಲ್ಲವೇ?
- ತನ್ನ ಕಾಲಿಗೆ ತಾನೇ ಶರಣು ಮಾಡಿ ಹರಸಿಕೊಂಡ ಹಾಗೆ
- ತನ್ನ ಅಕ್ಕನ ಅರಿಯದವಳು ನೆರೆಮನೆ ಬೊಮ್ಮಕ್ಕನ ಬಲ್ಲಳೇ?
- ಬೆನ್ನ ಹಿಂದೆ ಉರಿಯೋ ತನ್ನ ಸುಖವೇ ಲೋಕದ ಸುಖ, ತನ್ನ ಕಷ್ಟವೇ ಲೋಕದ ಕಷ್ಟ
- ತನ್ನ ಹೊಟ್ಟೆ ತಾ ಹೊರೆಯದವ ಮುನ್ನಾರ ಸಲಹುವ?
- ತನ್ನ ತಾನರಿತರೆ ತಾನ್ಆದಾನು ತನ್ನ ತಾ ಮರೆತರೆ ತಾ ಹೋದಾನು
- ತನುವರಿಯದ ನೋವಿಲ್ಲ ಮನವರಿಯದ ತಾಪವಿಲ್ಲ
- ತಪಸ್ಸಿಗೆಂತ ಹೋಗಿ ಕುಪ್ಪಸಾ ಕಳಕೊಂಡ
- ತಪಸ್ಸು ಇದ್ದವನೇ ಗಭಸ್ತಿ (=ಕಾಂತಿ)
- ಉಳ್ಳವನು ತಪ್ಪನೆ ಬಾ (=ತಕ್ಷಣ ಬಾ ) ಅಂದ್ರೆ ತಬ್ಬಲಿಕ್ಕೆ ಬಂದ ಹಾಗೆ
- ತಪ್ಪಲೇಲಿ ಇದ್ದದ್ದು ಹೋದರೆ ಕಪಾಲದಲ್ಲಿ ಇದ್ದದ್ದು ಹೋದೀತೇ
- ತಪ್ಪಿ ಬಿದ್ದವನಿಗೆ ತೆಪ್ಪ (=ದೋಣಿ) ಏನು ಮಾಡೀತು
- ತಪ್ಪಿದವನಿಗೆ ಒಪ್ಪು ಇಲ್ಲ ತಪ್ಪು ಹೊರಿಸಿದವನಿಗೆ ಒಪ್ಪುವವನು ಯಾರು
- ತರತರವಾಗಿ ಹೇಳಿದ್ದು ಮರೆತರೆ ಮರಕ್ಕಿಂತಾ ಕಡೆ
- ತರಹರಿಸಾಳಾರದವಳು ಮರಣಕ್ಕೆ ಪಾತ್ರಳು
- ತರಬಲ್ಲವನ ಹೆಂಡತಿ ಅಡಜಾಣೆ (ಅಡಕವಾದ ಜಾಣ್ಮೆ ಉಳ್ಳವಳು)
- ತರಲಿಲ್ಲ ಬರಲಿಲ್ಲ ಬರ ಹ್ಯಾಗೆ ಹಿಂಗೀತು
- ತರಗು (=ಒಣಗಿದ ಎಲೆ) ತಿಂಬುವುದೇ ಪರಮ ಸುಖ
- ತರಗು ತಿಂಬವನಿಗೆ ಒರಗೊಂದು ಕೇಡು
- ತರಗು ತಿನ್ನುವವನ ಮನೆಗೆ ಹಪ್ಪಳಕ್ಕೆ ಹೋದರು ತರಗು (ಮರದಿಂದ ಬಿದ್ದ ಒಣ ಎಲೆಗಳು)ಮೊರದಲ್ಲಿ ಹಿಡಿಯದು
- ತರಗು ಲಡ್ಡಿಗೆ ಡೊಳ್ಳು ಗಣಪತಿಯೇ ಶ್ರೇಷ್ಠ
- ತರಗೆಲೆ ಅಡಿಕೆ ತಿರಿದು ತಿನ್ನಬೇಕೆ
- ತರುವವ ಮರೆತರೆ ಮೊರ ಏನು ಮಾಡೀತು
- ತರುವವ ಹೋದಮೇಲೆ ಮರಗುವವರುಂಟೇ
- ತರುಬಿದವಗೂ (=ಅಡ್ಡಕಟ್ಟು, ಹೊಡೆ) ಓಡಿದವಗೂ ಸರಿಪಾಲು
- ಕಷ್ಟ ತರುಬಿ ಹೋಗುವನ್ನ ಕರುಬಿ (=ಅಸೂಯೆ) ಮಾಡುವುದೇನು?
- ತರಲೆ ಕೇಳುವವ ಮರುಳಗಿಂತ ಕಡೆ
- ತಲೆಗೆ ಎಣ್ಣೆ ಇಲ್ಲ ತನು ಮೃಗನಾಭಿ ಬೇಡಿತು
- ತಲೆ ಚೆನ್ನಾಗಿದ್ದರೆ ಮುಂಡಾಸು ನೂರು ಕಟ್ಟಬಹುದು
- ತಲೆ ತಾಗಿದ್ದಲ್ಲದೆ ಬುದ್ಧಿ ಬಾರದು
- ತಲೇ ಸಿಡಿತಕ್ಕೆ ಮಲಶೋಧನೇ ಕೊಂಡ ಹಾಗೆ
- ತಲೇ ಕೂದಲಿದ್ದರೆ ಎತ್ತ ಬೇಕಾದರು ತುರುಬು ಹಾಕಿಕೊಳ್ಳಬಹುದು
- ತಲೇ ಕೂದಲಿಲ್ಲದವಳು ತುರುಬು ಬಯಸಿದಳಂತೆ
- ತಲೇ ಕೂದಲು ಉದ್ದವಿದ್ದವಳು ಹ್ಯಾಗೆ ಕಟ್ಟಿದರೂ ಚಂದ
- ತಲೇ ಕೂದಲು ನೆರೆಯಾದ ಮೇಲೆ ತಬ್ಬಿಕೊಂಡ ತಬ್ಬಲಿ ಮುರವ (=ತಿರುಕ)
- ತವಡು ತಿಂಬುವನಿಗೆ ವಯ್ಯಾರ ಯಾಕೆ
- ತವಡು ತಿಂಬುವವ ಹೋದರೆ ಉಮ್ಮಿ ತಿಂಬುವವ ಬತ್ತಾನೆ
- ತಳವಾರನಿಗೆ ಪಟ್ಟ ಕಟ್ಟಿದರೆ ಕುಳವಾರು (ಒಕ್ಕಲಿಗರ ಸಮೂಹ) ಹೋದೀತೋ?
- ತಳಾ ಬಿಟ್ಟು ಬಂಡಿ ಹಾರದು
- ತಳಿಗೆ ಚಂಬು ಹೋದ ಮೇಲೆ ಮಳಿಗೇ ಬಾಗಿಲು ಮುಚ್ಚಿದ ಹಾಗೆ
- ತಾ ಕಳ್ಳೆ ಪರರ ನಂಬಳು,
- ಹಾದರಗಿತ್ತಿ ಗಂಡನ ನಂಬಳು
- ತಾ ಕಾಣದ ದೇವರು ಪೂಜಾರಿಗೆ ವರ ಕೊಟ್ಟೀತೇ?
- ತಾಗದೆ ಬಾಗದು ಬಿಸಿಯಾಗದೆ ಬೆಣ್ಣೆ ಕರಗದು
- ತಾಟುಗಾರ (ಗರ್ವದ ಮನುಷ್ಯ) ಆಟಕ್ಕೆ ಹೋಗಿ ಮೋಟಗಾರನಾಗಿ (ತನ್ನಿಂದಲೇ ತಾ ಮೂರ್ಕನಾಗುವುದು) ಬಿದ್ದ ತಾತಾಚಾರ್ಯರ ಮನೆಗೆ ಏನಪ್ಪಣೆ?
- ತಾನುಂಟೋ? ಮೂರು ಲೋಕವುಂಟೋ?
- ತಾ ಕೋಡಗ ಪರರ ಅಣಕಿಸಿತು
- ತಾನು ನೆಟ್ಟ ಬೀಳು (ಬಳ್ಳಿ) ತನ್ನ ಎದೆಗೆ ಹಬ್ಬಿತು
- ತಾನು ಜಾರಿಬಿದ್ದು ಉಣ್ಣೆಯಂತ ನೆಲ ಅಂದ
- ತಾನು ತಿಂಬೋದು ಪಲ್ಲೆ ಸೊಪ್ಪು
- ಹಿರೇ ಕುದರೆ ಚೇಷ್ಟೆ ತಾನು ಬಾಳಲಾರದೆ ವಿಧಿಯ ಬೈದಂತೆ
- ತಾನು ಗರತಿ ಆದರೆ ಸೂಳೆಗೇರೀಲಿ ಮನೆ ಕಟ್ಟು
- ತಾನು ಸಾಯಬೇಕು ಸ್ವರ್ಗಾ ಪಡೆಯಬೇಕು
- ತಾನು ಹೋದರೆ ಮಜ್ಜಿಗೆ ಇಲ್ಲ ಮೊಸರಿಗೆ ಚೀಟು
- ಹೇಳಿ ಕಳಿಸಿದರೆ ಮೊಸರು ಕೊಟ್ಟಾರೆ ತಾನೂ ಕುಡಿಯ ಕುಡಿಯಲೀಸ
- ತಾನೊಂದೆಣಿಸಿದರೆ ದೈವವೊಂದೆಣಿಸಿತು
- ತಾಪತ್ರಯದವನಿಗೆ ತಾಪೆ/ಚಾಪೆ ಯಾಕೆ
- ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
- ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು
- ಕಣ್ಣರಿಯದಿದ್ದರೂ ಕರುಳರಿಯುತ್ತದೆ
- ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ ತಾರಕ್ಕೆ (ಎರಡು ಕಾಸಿನ ನಾಣ್ಯ) ಮೂರು ಸೇರು ಉಪ್ಪಾದರೂ ತರುವುದಕ್ಕೆ ಗತಿ ಬೇಡವೋ
- ತಾರಕ್ಕೊಂದು ಸೀರೆಯಾದರೂ ನಾಯಿ ತಿಕ ಬೆತ್ತಲೆ
- ತಾರತಮ್ಯ ಅರಿಯದವ ದೊರೆಯಲ್ಲ ಮಾತು ಮೀರಿದವ ಸೇವಕನಲ್ಲ
- ತಾರುಣ್ಯವೇ ರೂಪು ಕಾರುಣ್ಯವೇ ಗುಣ
- ತಾರು ಮಾರು ಮಾಡುವವನಿಗೆ ಯಾರು ತಾನೆ ನಂಬ್ಯಾರು
- ತಾರೇಮರದ ಕಾಯಾದರೂ ಕರೆದರೆ ಬಂದೀತೇ
- ತಾರೇ ಬಡ್ಡೀ ನೀರಾ ಅಂದ್ರೆ ತರುವೆನು ನಿಲ್ಲೊ ತಿರುಕ
- ಮುರವ ತಾವು ಮಾಡುವುದು ಗಂಧರ್ವರು ಮಾಡಿದರು
- ತಾಸಿನ ಗೊತ್ತು ದಾಸಿಗೆ ತಿಳಿದೀತೇ?
- ತಾಸಿಗೊಂದು ಕೂಸು ಹೆತ್ತರೆ ಈಸೀಸು ಮುತ್ತು
- ತಾಸಿನ ಬಟ್ಟಲು ನೀರ ಕುಡಿದರೆ ತಾಸಿಗೆ ಕೊಡತೀ ಪೆಟ್ಟು
- ತಾಳ ತಪ್ಪಿದರೆ ಕುಣಿಯೋದು ತಪ್ಪುವುದಿಲ್ಲ
- ತಾಳದಲ್ಲಿ ಜಾಣನಾದರೆ ತಾಳಿಕೆ ಇದ್ದೀತೇ
- ತಾಳಲಾರದ ವಿರಹ ತಿಣುಕಿದರೆ ಹೋದೀತೇ?
- ತಾಳಿಕೆ (ತಾಳ್ಮೆ) ಉಳ್ಳವನಲ್ಲಿ ಕೇಳಿದರೆ ಕಾಳು ಸಿಕ್ಕುವುದು
- ತಾಳಿದವ ಬಾಳ್ಯಾನು
- ತಾಳು ಬಡಿದರೆ ಕಾಳು ಸಿಕ್ಕೀತೇ
- ತಾಳೆಮರ ಉದ್ದವಾದರೆ ಕೋಳಿಗೆ ಬಂದದ್ದೇನು
- ತಾಳೆಮರ ದೊಡ್ಡದಾದರೂ ತಾಳೆ ಹೂವಿಗೆ ಸರಿಯಾದೀತೇ
- ತಾಳೇ ಹಣ್ಣು ತಾನೇ ಬಿದ್ದರೂ ಬಾಳಾದ ಮುರವಗೆ ಬಾಯಿ ಮುಚ್ಚಿತು
- ತಾಳ್ಮೆ ಇದ್ದ ಪುರುಷರಲ್ಲಿ ಬೀಳು ಬಿದ್ದರೆ ಬಾಳ್ಯಾನು
- ತಾಳೆ ಹೂವು ಶಿವನಿಗೆ ಆಗದು ಸಂಪಿಗೆಯ ಹೂ ಸಾಲಿಗ್ರಾಮಕೆ ಆಗದು
- ತಾ ಕೆಡುತ್ತಾ ಏಳು ನೆರೆ ಕೆಡಿಸಿದ ತಿಗಳಗಿತ್ತಿಯ ಬಾಯಿ ಕೆಣಕಬೇಡ
- ಬೊಗಳೊ ನಾಯಿ ಬಡಿಯಬೇಡ ತಿಗುಳಗೆ
- ತಿಪ್ಪಯ್ಯಗೆ ಸೂಜಿ ಮೇಲು ಕಳ್ಳಗೆ ಬಾಯಿ ಮೇಲು
- ತಿಪ್ಪೆಯ ಮೇಲೆ ಕುಂಡ್ರುವವಗೆ ತಕ್ಯೆ ಯಾತಕ್ಕೆ
- ತಿಪ್ಪೇ ಮೇಲಣ ಅರಿವೆಯಾದರೂ ಕಾಲಿಗೆ ಕಟ್ಟಿದರೆ ಬಿರುದು
- ತಿಪ್ಪೇ ಮೇಲಣ ದೀಪ ಉಪ್ಪರಿಗೆಯ ಮೇಲೆ ಬಂದೀತೋ?
- ತಿಪ್ಪೇ ಮ್ಯಾಲೆ ಮಲಗಿ ಉಪ್ಪರಿಗೆ ಕನಸು ಕಂಡ ಹಾಗೆ
- ತಿಪ್ಪೇ ಮೇಲೇ ಮುಪ್ಪಾದ ಕುಂಬಾರ
- ತಿರುದುಂಬುವುದಕ್ಕೆ ಬೀದಿ ಹಂಚಿಕೊಂಡ ಹಾಗೆ
- ತಿರಿತಿರಿಗಿ ಗೋಕರ್ಣಕ್ಕೆ ಹೋಗಿ ತುರಕನಿಂದ ದಬ್ಬೆ ತಿಂದ
- ತಿರಿತಿರಿಗಿ ತಿಮ್ಮಪ್ಪನ ಹತ್ತರ ಹೋದರೆ ತಿರಿದುಂಬೋದು ತಪ್ಪೀತೇ?
- ತಿರಿದುಂಬುವ ಭಟ್ಟ ದಕ್ಷಿಣೆಯಾದರೂ ಬಿಟ್ಟಾನು ಭೋಜನ ಸಿಕ್ಕಿದರೆ ಬಿಡಲೊಲ್ಲ
- ತಿರಿಚಿನಾಪಳ್ಳಿಗೆ ತಿರಿದುಂಬೊದಕ್ಕೆ ಇಲ್ಲಿಂದ ಕೈ ಸವರಿಸಬೇಕೆ
- ತಿರುಪತಿ ಕ್ಷೌರಿಕರು ತಲೆ ಬೋಳಿಸಿದ ಹಾಗೆ
- ತಿರುಕನ ಬಳಿಗೆ ತಿರುಕ ಹೋದರೆ ಮರುಕ ತಾ ಬರುವುದೇ?
- ತಿರುಕನಿಗೆ ಮುರುಕು (ಬೆಡಗು ಕೊಂಕು) ಇದ್ದಾಗ್ಯೂ ತಿರಿದುಂಬುವುದು ತಪ್ಪದು
- ತಿರುಪದ ಪುಟ್ಟಿಯಲ್ಲಿ ಶನೀಶ್ವರ ಕೂತ ತಿರುಪಿನಂತೆ ಇರಬೇಕು
- ತಿಳಿದವ ತಿರುಳು ತಿಂದರೂ ಮರುಳು ಹೋಗಲಿಲ್ಲ
- ತಿರುಳು ಹೋಗಿ ಬೆಂಡು ಉಳೀತು ತಿರೋಕಲ್ಲು
- ಗಾಳಿಯಿಂದ ಹಾರುವುದೋ ತಿರೋಕಲ್ಲು ಮಳೇಲಿ ಬಿದ್ದರೆ ಮರಕ್ಕಿಂತಾ ಕಡೆಯಾದೀತೇ
- ತಿಮ್ಮಪ್ಪನ ದಯೆ ತಿಳಿದ ಕಳ್ಳ ತಿರಿಗಿದರೂ ಬಿಡ
- ತಿಳಿದವನಾದರೂ ಮಲಮೂತ್ರ ಬಿಟ್ಟೀತೇ?
- ತಿಳಿದವ ಮಾಡ್ಯಾನು ನಳಪಾಕವ
- ಮಕ್ಕಳ ಹೆತ್ತು ತಿರುಮಲ ದೇವರ ಹೆಸರಿಟ್ಟ ಹಾಗೆ
- ತೀರಕ್ಕೆ ಬಂದ ಮೇಲೆ ತೆರೆಯ ಭಯವೇ
- ತೀರದಲ್ಲಿರುವ ಮರಕ್ಕೆ ನೀರು ಯಾತಕ್ಕೆ
- ತೀರದ ಕಾರ್ಯ ಹಾರಿದರೂ ಆಗದು
- ಇಂಗು ತೆಂಗು ಇದ್ದರೆ ಮಂಗಮ್ಮನೂ ಅಡಿಗೆ ಮಾಡ್ತಾಳೆ.
- ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು.
- ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.
- ಮಘಾ ಮಳೆ ಬಂದಷ್ಟು ಒಳ್ಳೇದು ; ಮನೆ ಮಗ ಉಂಡಷ್ಟೂ ಒಳ್ಳೆಯದು .
- ಆಶ್ಲೇಷ ಮಳೆ , ಈಸಲಾರದ ಹೊಳೆ.
- ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.
- ಅಣ್ಣ ಹುಸಿಯಾದರೂ ತಮ್ಮ ತಂಪು ತರದೇ ಹೋಗಲ್ಲ. (ಅಣ್ಣ ಪುನರ್ವಸು ಮಳೆ, ತಮ್ಮ ಪುಷ್ಯ ಮಳೆ)
- ಆರಿದ್ರಾ ಮಳೆ ಆರದೇ ಹುಯ್ಯುತ್ತೆ.
- ಅಮ್ಮನ ಮನಸ್ಸು ಬೆಲ್ಲದ ಹಾಗೆ ; ಆರಿದ್ರಾ ಹನಿ ಕಲ್ಲಿನ ಹಾಗೆ.
- ಮಳೆಗಾಲದ ಮಳೆ ನಂಬಲಾಗದು ; ಮನೆ ಹೆಂಡ್ತಿ ನಗೆ ನಂಬಲಾಗದು.
- ತುಂತುರು ಮಳೆಯಿಂದ ತೂಬು ಒಡೆದೀತೆ?
- ಉಪವಾಸ ಇರಬಹುದು , ಉಪದ್ರವ ತಾಳಲಾರದು.
- ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.
- ಉದ್ದರಿ ಕೊಟ್ಟು ಸೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ.
- ಉಣ್ಣುವಾಗ ಎರಡು ತುತ್ತು ಕಡಿಮೆ ಉಣ್ಣು.
- ತಮ್ಮ ಕಲಹಕ್ಕೆ ಐವರು ,ಪರರ ಕಲಹಕ್ಕೆ ನೂರಾ ಐವರು. (ಸುಳಿವು ಪಾಂಡವಕೌರವರು)
- ತಾನಾಗಿ ಬೀಳುವ ಮರಕ್ಕೆ ಕೊಡಲಿ ಏಟು ಹಾಕಿದ ಹಾಗೆ .
- ತೀರ್ಥಕ್ಕೆ ಥಂಡಿ, ಪ್ರಸಾದಕ್ಕೆ ಅಜೀರ್ಣ , ಮಂಗಳಾರತಿಗೆ ಉಷ್ಣ (ನಾಜೂಕು ದೇಹಸ್ಥಿತಿ)
- ಉಂಡರೆ ಉಬ್ಬಸ , ಹಸಿದಿದ್ದರೆ ಸಂಕಟ(ನಾಜೂಕು ದೇಹಸ್ಥಿತಿ)
- ಊರು ನೋಡಿ ಬಾ ಅಂದರೆ ತೋರಣ ಕಟ್ಟಿ ಬಂದ. .
- ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ.
- ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು.
- ಕತ್ತೆ ತಪ್ಪಿಸಿಕೊ೦ಡರೆ ಹುಡುಕುತಾರ್ಯೇ?
- ಆಕಳಿದ್ದವನಿಗೆ ವ್ಯಾಕುಲವಿಲ್ಲ. ಅಕ್ಕಿ ತಿ೦ದವರಿಗೆ ಅನ್ನಿಲ್ಲ,
- ಮೊಟ್ಟೆ ತಿ೦ದವರಿಗೆ ಮರಿ ಇಲ್ಲ.
- ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ.
- ಉಳೋ ಎತ್ತಾದರೆ ಇರೋ ಊರಿನಲ್ಲಿ ಬೆಲೆಯಾಗದೇ.
- ಗುಡ್ಡದ ಮೇಲೆ ಕಪಿ ಸತ್ತರೆ ಊರಿಗೆಲ್ಲಾ ಸೂತಕ.
- ಯಾರ ಹೆ೦ಡ್ತಿ ಎಲ್ಲಿಯಾದರೂ ಹೋಗಲಿ ನಮ್ಮ ಹೆ೦ಡ್ತಿ ನಮ್ಮನೇಲಿರಲಿ
- ಯಾವ ದೇವರು ವರ ಕೊಟ್ಟರೂ ಗ೦ಡನಿಲ್ಲದೆ ಮಕ್ಕಳಾಗದು.
- ಲೇ ಅನ್ನಲು ಅವಳೇ ಇಲ್ಲ ಮಗನ ಹೆಸರು ಮುದ್ದುರ೦ಗ.
- ವೈರವಿದ್ದವನ ಕರೆದು ಮುಖಕ್ಷೌರ ಮಾಡಿಸಿಕೊ೦ಡಹಾಗೆ.
- ಶ್ಯಾನುಭೋಗರ ಸ೦ಬಳ ಸ೦ತೋಷ ಕೇಳಬೇಡಾ.
- ಸರಿಮನೆಯಾಕೆ ಸರಿಗೆ ಹಾಕಿಕೊ೦ಡರೆ ನೆರೆಮನೆಯಾಕೆ ಉರ್ಲು ಹಾಕಿಕೊಳ್ಳಬೇಕೆ?
- ಸ೦ಬಳ ಸಾರಿಗೆ ಏನಿಲ್ಲದಿದ್ದರೂ ನನ್ನ ಗ೦ಡನ್ನ ಸುಬೇದಾರ ಅ೦ದರೆ ಎಷ್ಟೋ ಹೆಚ್ಚಳ ಅ೦ದಳ೦ತೆ.
- ಸು೦ದರ ಪುರುಷನೆಲ್ಲೆ ಸುಪಣಾತಿ ಅ೦ದ್ರೆ ಸೂಳೆ ಮನೇಲಿ ಸುಖನಿದ್ರೇಲವ್ರೆ ಎ೦ದಳು.
- ಪಾಪಿ ಚುನಾವಣೆಗೆ ನಿ೦ತರೆ ಮೂರೇ ಓಟು.
- ಸ್ಟ್ಯಾ೦ಪಿರುವಷ್ಟು ನಾಲಗೆ ಚಾಚು.
- ಹೆಸರು ಸರಸ್ವತಿ, ಎಡಗೈ ಹೆಬ್ಬೆಟ್ಟಿನ ಸಹಿ.
- ಕೆಲಸವಿಲ್ಲದ ಶಾನುಭೋಗ ಹಳೆ ಲೆಕ್ಕ ನೋಡಿದ ಹಾಗೆ.
- ಕಾಸೂ ಹಾಳು ತಲೆಯೂ ಬೋಳು.
- ದಾಕ್ಷಿಣ್ಯವ೦ತ ದೇಶಕ್ಕೆ ಹೋದರೆ ದಕ್ಷಿಣೆ ಸಿಕ್ಕೀತೇ!
- ಚ೦ಡಾಲ ದೇವರಿಗೆ ಚಪ್ಪಲಿ ಪೂಜೆ
- ಛತ್ರದಲ್ಲಿ ಊಟ ಮಠದಲ್ಲಿ ನಿದ್ರೆ
- ತಿನ್ನೋದು ತವಡು ನಡೆಯೋದು ವೈಯಾರ
- ತಾನು ಕೋತಿಯಾಗಿ ರತಿಯನ್ನು ಬಯಸುವುದೇ?
- ದೊಡ್ಡ ಗೌಡನ ಮನೇಲಿ ದೊಡ್ಡ ಗುಡಾಣ ಎತ್ತಿದರೆ ಏನೂ ಇಲ್ಲ.
- ಮದುವೆ ಆಗೋ ಗ೦ಡಿಗೆ ಅದೇ ಇಲ್ಲ ಅ೦ದ೦ಗೆ.
- ಆಸೆಯಿ೦ದ ಅಳಿಯ ಬ೦ದ್ರೆ ಮಗಳು ಹೊರಗಾಗಿರೋದೇ?
- ಅ೦ಗ ತೋರಿಸಿ ಅರ್ಧಾ೦ಗಿಯಾದಳು.
- ಅಳಿಯನಿಗೆ ದೀಪಾವಳಿ ಮಾವನಿಗೆ ಕೋಪಾವಳಿ.
- ಆಫೀಸಿನಲ್ಲಿ ಆಫೀಸರ್, ಮನೆಯಲ್ಲಿ ಕುಕ್ಕರ್. .
- ಅಗಸನ ಸಿಟ್ಟು ಅನ್ಯರ ವಸ್ತ್ರದ ಮೇಲೆ.
- ಅ೦ಗಳದಾಗೆ ಒದ್ದು ಅಡಿಗೆ ಮನೆಯಲ್ಲಿ ಕಾಲು ಹಿಡಿದ.
- ಅಶ್ವಥ ಸುತ್ತಿದರೆ ಮಕ್ಕಳಾಗುತ್ತೆ ಅ೦ದ್ರೆ ಸುತ್ತು ಸುತ್ತಿಗೂ ಹೊಟ್ಟೆ ಮುಟ್ಟಿ ನೋಡಿಕೊ೦ಡಳ೦ತೆ.
- ಎಲ್ಲರೂ ನಗ್ತಾರೆ ಅ೦ಥ ಕಿವುಡ ತಾನೂ ನಕ್ಕ.
- ಒಡೆಯನಿಗೆ ಹಾಲಿಲ್ಲವೆ೦ದು ಎಮ್ಮೆ ಈಯುತ್ಯೇ?
- ಕ೦ಡವರ ಮನೇಲಿ ನೋಡು ನನ್ನ ಕೈ ಧಾರಾಳಾವ!
- ಕುಡಿಯೋದು ಅ೦ಬಲಿ ಮುಕ್ಕಳಿಸೋದು ಪನ್ನೀರು.
- ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
- ಕದ್ದ ರೊಟ್ಟಿ ಬೇರೆ ದೇವರ ಪ್ರಸಾದ ಬೇರೆ.
- ಕಡಗ ನೋಡಲಿ ಅ೦ತ ಗುಡಿಸಲು ಸುಟ್ಕೊ೦ಡ ಹಾಗೆ.
- ಗ್ರಾಮ ಶಾ೦ತಿಗೆ ತಳವಾರ ತಲೆ ಬೋಳಿಸಿಕೊ೦ಡನ೦ತೆ.
- ಗ೦ಡ ಪಟ್ಟೆ ಸೀರೆ ತರುತ್ತಾನೆ೦ದು ಇದ್ದ ಬಟ್ಟೆ ಸುಟ್ಟಳ೦ತೆ.
- ಇದ್ದಾಗ ನವಾಬ ಸಾಬ, ಇಲ್ಲದಾಗ ಫಕೀರ ಸಾಬ.
- ತಾನು ಸಾಯುವ ತನಕ ತನ್ನನ್ನು ಜೋಪಾನ ಮಾಡಿದರೆ ತತ್ತಿಯಷ್ಟು ಬ೦ಗಾರ ಕೊಟ್ಟೇನು ಅನ್ನುತ್ತ೦ತೆ ಕೋಳಿ. .
- ನಾಯಿಯ ಕನಸೆಲ್ಲ ಮೂಳೇನೇ.
- ಯಾರ ತೋಟದ ಹುಲ್ಲು ಮೇದಾದ್ರೂ ನಮ್ಮ ಕರು ದೊಡ್ಡದಾಗಲಿ.
- ವಿರೂಪಾಕ್ಷ ಹ೦ಪೆ ಬಿಡ, ವಿಘ್ನೇಶ್ವರ ಕೊ೦ಪೆ ಬಿಡ.
- ಸೊಕ್ಕಿದ್ದವನಿಗೆ ಯಾಣ, ರೊಕ್ಕಿದ್ದವನಿಗೆ ಪಟ್ಟಣ.
- ಹ೦ಪೆಗೆ ಹೋಗದಿದ್ದರೆ ಸ೦ಪಿಗೆ ನೋಡಲಿಲ್ಲವೇ?
- ನುಡಿಯೊಳು ಹೊಳೆವುದು ನಾಡಿನ ನಡವಳಿ.
- ನುಡಿಯೊಳು ಕ೦ಪಿಡುವುದು ಬದುಕು ನುಡಿಯಿರದವನಿಗೆ ಇಲ್ಲವು ನಾಡೂ ನುಡಿಯಲಿ ಸಲ್ಲನದಾವುದಕೂ.
- ಊಟಕ್ಕೇಳೋ ಗು೦ಡ ಅ೦ದ್ರೆ ಯಾವಕ್ಕಿ ಬೇಯಿಸಿದ್ದೀ ಅ೦ದ.
- ಗಂಡನಿಗೆ ಹೊರಸು ಆಗದು , ಹೆಂಡತಿಗೆ ನೆಲ ಆಗದು!
- ಕೊಡುವವರದು ಕೊಟ್ಟರೆ ನನಗೇನು ಉಳಿಯಿತು ಅಂದನಂತೆ.
- ಕೋಳೀ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರೋದು ಬಿಟ್ಟೀತೆ?
- ಕತ್ತೆಯ ಕಾಲು ಮುರಿದರೇನು ? ನಾಯಿಯ ಹಲ್ಲು ಮುರಿದರೇನು?
- ಕಟ್ಟಿದ ಗೂಟ , ಹಾಕಿದ ಹಲ್ಲು. ಉಂಡರೆ ಉಬ್ಬಸ, ಹಸಿದರೆ ಸಂಕಟ .
- ಜೋಡಿದ್ದರೆ ನಾಡು ತಿರುಗಬಹುದು.
- ಆಕಾಶ ಹರಿದು ಬೀಳುವಾಗ ಕೈ ಅಡ್ಡ ಹಿಡಿಯಬಹುದೇ ?
- ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು.
- ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ ?
- ನಾವೂ ನೀವೂ ನೆಂಟರು , ಗಂತಿಗೆ ಮಾತ್ರ ಕೈ ಹಚ್ಚಬೇಡಿ.
- ನಾಯಿಯನ್ನು ಹೊಡೆಯಲು ಬಣ್ಣದ ಕೋಲೇ ?
- ಪದದೊಳಿಲ್ಲ ತಾನರ್ಥದೊಳಿಲ್ಲವು ಪದಾರ್ಥ ಸ೦ಘಾತದೊಳಿಲ್ಲ
- ಎದೆಎದೆಯನು ಪಿಸು ಮಾತೊಳಗರಳಿಸಿ ಮುದ ಹರಡುವ ಕಲೆ ಋಷಿ ಬಲ್ಲ.
- ಅಜ್ಜಿಗೆ ಅಕ್ಕಿ ಚಿ೦ತೆಯಾದರೆ ಮೊಮ್ಮಗಳಿಗೆ ಮೂಗುತಿ ಚಿ೦ತೆ
- ಸೂಳೆ ಕೈಯಲ್ಲಿ ಜೋಳ ಕುಟ್ಟಿಸಿದ ಹಾಗೆ
- ಮೀಸೆ ಬ೦ದವಗೆ ದೇಶ ಕಾಣದು, ಮೊಲೆ ಬ೦ದವಳಿಗೆ ನೆಲ ಕಾಣದು.
- ಹೆ೦ಗಸಿನ ಬುದ್ಧಿ ಮೊಣಕಾಲ ಕೆಳಗೆ
- ಅತೀ ಬುದ್ಧಿ, ಅ೦ಡು ಚಪ್ಪಟೆ!
- ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯ್ತು.
- ಕೆಲಸವಿಲ್ಲದ ಬಡಗಿ ಮಗುವಿನ ಕು೦ಡೆ ಕೆತ್ತಿದನ೦ತೆ.
- ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು
- ಮನೆ ಮಗ ಉ೦ಡಷ್ಟೂ ಒಳ್ಳೇದು, ಮಗೆ ಮಳೆ ಬ೦ದಷ್ಟೂ ಒಳ್ಳೇದು.
- ಆಡಿ ಪೋಕರಿ ಅನ್ನಿಸಿಕೊಳ್ಳುವುದಕಿಂತ ಆಡದೆ ಮೂಗ ಅನ್ನಿಸಿಕೊಳ್ಳುವುದು ಮೇಲು.
- ಮಾತಿಗೆ ಸಾಯದೇ ಇದ್ದೋನೂ ಏಟಿಗೂ ಸಾಯುವುದಿಲ್ಲ.
- ಹಾವು ಸಾಯಬಾರದು, ಕೋಲು ಮುರೀಬಾರದು.
- ಇತ್ತಿತ್ತ ಬಾ ಅಂದರೆ ಇದ್ದ ಮನೆ ಕಿತ್ತುಕೊಂಡರು.
- ಬೆರಳು ತೋರಿಸಿದರೆ ಅಂಗೈ ನುಂಗಿದಂತೆ.
- ಅಪ್ಪನ ಕಾಲಕ್ಕೆ ಅರಮನೆ, ಮಗನ ಕಾಲಕ್ಕೆ ಬರೀಮನೆ.
- ವೇದ ಸುಳ್ಳಾದರು ಗಾದೆ ಸುಳ್ಳಾಗದು.
- ದೇವರು ವರ ಕೊಟ್ಟರು ಪೂಜಾರಿ ಕೊಡಬೇಕಲ್ಲ.
- ತುಂಬಿದ ಕೊಡ ತುಳುಕುವುದಿಲ್ಲ.
- ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
- ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
- ಮು೦ಡೆಯ ಮದುವೆಯಲ್ಲಿ ಉ೦ಡೋನೆ ಜಾಣ.
- ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
- ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ
- ಗಂಡಸರ ಕೈಯಲ್ಲಿ ಕೂಸು ನಿಲ್ಲದು ಹೆಂಗಸರ ಕೈಯಲ್ಲಿ ಮಾತು ನಿಲ್ಲದು
- ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ
- ಮೇಲೆ ಬಸಪ್ಪ ಒಳಗೆ ವಿಷಪ್ಪ
- ಹೊರಗೆ ಬೆಳಕು ಒಳಗೆ ಕೊಳಕು
- ಹಿಟ್ಟೂ ಹಳಸಿತ್ತು ನಾಯಿಯೂ ಹಸಿದಿತ್ತು
- ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
- ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ
- ಒಪ್ಪವಿಲ್ಲದ ಮಾತು ತುಪ್ಪವಿಲ್ಲದ ಊಟ
- ಇದ್ದಾಗ ಹಿರಿಯಣ್ಣ ಇಲ್ಲದಾಗ ತಿರಿಯಣ್ಣ
- ಒಕ್ಕುವುದು ರೈತನ ಗುಣ ನೆಕ್ಕುವುದು ನಾಯಿಯ ಗುಣ
- ಅರಮನೆಯ ಮುಂದಿರಬೇಡ ಕುದುರೆಯ ಹಿಂದಿರಬೇಡ
- ತಾಯಿಯಂತೆ ಮಗಳು ನೂಲಿನಂತೆ ಸೀರೆ
- ಕತ್ತೆಯಂಥ ಅತ್ತೆ ಬೇಕು ಮುತ್ತಿನಂಥ ಗಂಡ ಬೇಕು
- ಅರಿತರೆ ಮಾತನಾಡು ಮರೆತರೆ ಕೂತು ನೋಡು
- ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
- ಹಾಲು ಕ೦ಡಲ್ಲಿ ಬೆಕ್ಕು ಹೇಲು ಕ೦ಡಲ್ಲಿ ನಾಯಿ
- ಆಪತ್ತಿಗಾದವನೇ ನೆಂಟ ಕೆಲಸಕ್ಕಾದವನೇ ಭಂಟ
- ಗಂಜಿಯ ಕುಡಿದರೂ ಗಂಡನ ಮನೆ ಲೇಸು
- ಒಲಿದರೆ ನಾರಿ ಮುನಿದರೆ ಮಾರಿ
- ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
- ಕಚ್ಚೋ ನಾಯಿ ಬೊಗಳುವುದಿಲ್ಲ
- ತುಂಬಿದ ಕೊಡ ತುಳುಕುವುದಿಲ್ಲ
- ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ
- ತಾಳಿದವನು ಬಾಳಿಯಾನು
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
- ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ
- ಮುದುಕರಿಗೆ ಮುದ್ದೆ ಕೇಡು ಹಳೇ ಬಟ್ಟೆಗೆ ನೂಲು ಕೇಡು
- ಲಾಲಿಸಿದರೆ ಮಕ್ಕಳು ಪೂಜಿಸಿದರೆ ದೇವರು
- ಉತ್ತರೆ ಹೊಲ ಚಂದ ಬಿತ್ತರೆ ಬೆಳೆ ಚಂದ
- ಹಂಗಿನರಮನೆಗಿಂತ ಕುಂದಣದ ಗುಡಿ ಲೇಸು
- ಹಸಿದು ಹಲಸು, ಉಂಡು ಮಾವು.
- ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ?
- ಮನೆಗೆ ಮಾರಿ ಊರಿಗೆ ಉಪಕಾರಿ.
- ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
- ಬರಗಾಲದಲ್ಲಿ ಅಧಿಕಮಾಸ ಬಂದ ಹಾಗೆ.
- ತಾನೂ ತಿನ್ನ, ಪರರಿಗೂ ಕೊಡ.
- ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.
- ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
- ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ.
- ಇದೇನು ತೋಟದಪ್ಪನ ಛತ್ರಾನ?